ನ್ಯೂಸ್

ಅಯ್ಯೋ ಇದೆಂಥಾ ನಿರ್ಧಾರ? ಅತ್ತೆ ಮಾಡಿದ ಎಡವಟ್ಟಿಗೆ ಪತಿಗೆ ಕಾಡಿದ ಪತ್ನಿ!

ಆಗ್ರಾ: ಗಂಡ-ಹೆಂಡತಿ ಮಧ್ಯೆ ಅತ್ತೆ ಅಥವಾ ಮಾವನ ವಿಚಾರ ಕುರಿತು ಜಟಾಪಟಿ ನಡೆಯುವುದು ತೀರ ಸಾಮಾನ್ಯ ಎಂದೇ ಹೇಳಬಹುದು. ಎಲ್ಲರ ಮನೆ ದೋಸೆನೂ ತೂತು ಎನ್ನುವ ರೀತಿ ಇಂತಹ ಸಮಸ್ಯೆಗಳು ಹಲವರ ಮನೆಯಲ್ಲಿ ಇಂದಿಗೂ ನಡೆಯುತ್ತಲೇ ಇರುತ್ತದೆ. ಪತಿ-ಪತ್ನಿಯರ ಮಧ್ಯೆ ನಡೆಯುವ ಜಗಳ ಉಂಡು ಮಲಗೋ ತನಕ ಎಂದು ಹಿರಿಯರು ಹೇಳುತ್ತಾರೆ. ಆದ್ರೆ, ಇಲ್ಲಿ ನಡೆದಿರುವ ಘಟನೆ ಉಂಡು ಮಾರನೇ ದಿನವಾದರೂ ಮುಗಿಯದೆ ದೊಡ್ಡ ತೊಂದರೆಯಾಗಿ ಮಾರ್ಪಟ್ಟಿರುವುದು ಹಲವರಿಗೆ ಭಾರೀ ಆಶ್ಚರ್ಯ ಮೂಡಿಸಿದೆ.

ಯಪ್ಪಾ! ಇಂತಹ ಸಣ್ಣ-ಪುಟ್ಟ ವಿಷಯಗಳಿಗೂ ಈ ರೀತಿ ನಿರ್ಧಾರ ಕೈಗೊಳ್ಳುತ್ತಾರಾ? ಇದು ದುಡುಕಿ ಮಾಡಿರುವುದಾ? ಅಥವಾ ನೊಂದು ಮಾಡಿದ್ದಾ? ಎಂಬುದೇ ಅನೇಕರಿಗೆ ಅನುಮಾನ! ಅಷ್ಟಕ್ಕೂ ಈ ಮಹಿಳೆ ಮಾಡಿದ್ದಾದರೂ ಏನು? ಎಂಬುದರ ವಿವರ ಹೀಗಿದೆ ನೋಡಿ..

ಗಂಡನ ತಾಯಿ ತನ್ನ ಅನುಮತಿಯಿಲ್ಲದೆ ಮೇಕ್ಅಪ್ ಬಳಸಿದ ವಿಷಯ ತಿಳಿದ ಮಹಿಳೆ ತೀವ್ರ ಅಸಮಾಧಾನ ಹೊರಹಾಕಿದ್ದು, ಈ ವಿಚಾರಕ್ಕೆ ಅತ್ತೆಯೊಂದಿಗೆ ತೀವ್ರ ಜಟಾಪಟಿ ನಡೆಸಿದ್ದಾರೆ. ಜಗಳ ಆಡಿದಳು ಎಂಬ ಕಾರಣಕ್ಕೆ ನನ್ನನ್ನು ಹಾಗೂ ನನ್ನ ಸಹೋದರಿಯನ್ನು ಪತಿ ಮನೆಯಿಂದ ಹೊರಹಾಕಿದರು ಎಂದು ಆರೋಪಿಸಿದ ಈಕೆ, ಗಂಡನಿಂದ ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.

ನನ್ನ ಅತ್ತೆ ನಾನು ಮನೆಯಲ್ಲಿ ಇಲ್ಲದ ಸಮಯ ನೋಡಿ ಡ್ರೆಸ್ ಮತ್ತು ಮೇಕಪ್ ಹಾಕಿಕೊಳ್ಳುತ್ತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಪತಿ ಹೊಡೆದಿದ್ದಾರೆ. ನನಗೆ ಅವರಿಂದ ವಿಚ್ಛೇದನ ಬೇಕು ಎಂದು ಮಹಿಳೆ ಮಲ್ಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).