More

    ಮೊದಲ ಪಂದ್ಯ ಸೋಲಿನ ನಡುವೆ ಟೀಮ್​ ಇಂಡಿಯಾಗೆ ಬರೆ: ಎರಡನೇ ಟೆಸ್ಟ್​ನಿಂದ ಹೊರಬಿದ್ದ ಸ್ಟಾರ್​ ಆಟಗಾರರು

    ಹೈದರಾಬಾದ್​: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಸೋಲಿನ ಆಘಾತ ನಡುವೆ ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​ ಎದುರಾಗಿದೆ. ಭಾರತ ಟೆಸ್ಟ್​ ತಂಡದ ಬ್ಯಾಟರ್​, ಕನ್ನಡಿಗ ಕೆಎಲ್​ ರಾಹುಲ್​ ಹಾಗೂ ಆಲ್ರೌಂಡರ್​ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಿಂದ ಹೊರಬಿದಿದ್ದಾರೆ. ಐದು ಪಂದ್ಯಗಳ ಟೆಸ್ಟ್​ ಸರಣಿಯ 2ನೇ ಪಂದ್ಯ ೆ.2ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ.

    ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಎರಡು ಟೆಸ್ಟ್​ ಪಂದ್ಯಗಳಿಂದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಿಂದೆ ಸರಿದ ಬಳಿಕ ಇಬ್ಬರು ಆಟಗಾರರ ಗಾಯದ ಸಮಸ್ಯೆ ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೊದಲ ಪಂದ್ಯದ ಎರಡನೇ ಇನಿಂಗ್ಸ್​ನಲ್ಲಿ ರನ್​ ಕಸಿಯುವ ಯತ್ನದಲ್ಲಿ ರವೀಂದ್ರ ಜಡೇಜಾ ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕೇವಲ ಬ್ಯಾಟರ್​ ಆಗಿ ಮಾತ್ರ ಕಣಕ್ಕಿಳಿದಿದ್ದ ಕೆಎಲ್​ ರಾಹುಲ್​ ಬಲ ತೊಡೆಯ ನೋವಿನಿಂದ ಬಳಲುತ್ತಿದ್ದು, ಬಿಸಿಸಿಐ ವೈದ್ಯಕಿಯ ತಂಡವು ಇಬ್ಬರ ಆಟಗಾರರ ಚೇತರಿಕೆಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ವಿವರಿಸಿದೆ. ಮೊದಲ ಟೆಸ್ಟ್​ ಹಾಗೂ ಮೊದಲ ಮತ್ತು ಎರಡನೇ ಟೆಸ್ಟ್​ ಪಂದ್ಯಗಳ ನಡುವಿನ ಅಂತರ ಕೇವಲ 4 ದಿನಗಳಾಗಿದ್ದು, ಈ ಅವಧಿಯಲ್ಲಿ ಇಬ್ಬರು ಆಟಗಾರರು ಮುಂದಿನ ಪಂದ್ಯಕ್ಕೆ ಸಂಪೂರ್ಣ ಫಿಟ್​ ಆಗುವುದು ಅನುಮಾನ ಮೂಡಿಸಿದೆ. ಪುನಶ್ಚೇತನಕ್ಕಾಗಿ ಜಡೇಜಾ ಹಾಗೂ ರಾಹುಲ್​ ತಂಡದೊಂದಿಗೆ ವೈಜಾಗ್​ಗೆ ಪ್ರಯಾಣಿಸುತ್ತಾರೆಯೇ ಅಥವಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಗೆ ಮರಳುತ್ತಾರೋ ಎಂಬುದು ಸ್ಪಷ್ಟಪಡಿವಾಗಿಲ್ಲ.

    ರಾಹುಲ್​ ಮತ್ತು ಜಡೇಜಾ ಇಬ್ಬರೂ ಮೊದಲ ಟೆಸ್ಟ್​ನಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದ್ದರು, ಮೊದಲ ಇನ್ನಿಂಗ್ಸ್​ನಲ್ಲಿ ಜಡೇಜಾ 87 ರನ್​ ಗಳಿಸಿದರೆ, ರಾಹುಲ್​ 86 ರನ್​ ಕಲೆಹಾಕಿದ್ದರು. ಕಳೆದ ವರ್ಷ ಮೇನಲ್ಲಿ ಐಪಿಎಲ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ರಾಹುಲ್​ ಬಲ ತೊಡೆಗೆ ಗಾಯವಾಗಿತ್ತು. ಬಳಿಕ ಶಸಚಿಕಿತ್ಸೆಗೆ ಒಳಗಾಗಿದ್ದ ರಾಹುಲ್​ 4 ತಿಂಗಳು ಸ್ಫರ್ಧಾತ್ಮಕ ಕ್ರಿಕೆಟ್​ನಿಂದ ದೂರವುಳಿದಿದ್ದರು. ಬೆನ್ನು ನೋವಿನಿಂದ ದಣ ಆಫ್ರಿಕಾದಲ್ಲಿ ನಡೆದ ಟೆಸ್ಟ್​ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ತಂಡದಿಂದ ಹೊರಗುಳಿಯಲಿದ್ದಾರೆ.

    ಚೊಚ್ಚಲ ಅವಕಾಶ: ಕೆಎಲ್​ ರಾಹುಲ್​ ಹಾಗೂ ರವೀಂದ್ರ ಜಡೇಜಾ ಅವರ ಬದಲಿಗೆ ಬಿಸಿಸಿಐ ಯುವ ಆಟಗಾರರಿಗೆ ಅವಕಾಶ ನೀಡಿದ್ದು, ಮುಂಬೈ ಬ್ಯಾಟರ್​ ಸ್ರಾರ್ಜ್​ ಖಾನ್​, ಎಡಗೈ ಸ್ಪಿನ್ನರ್​ ಸೌರಭ್​ ಕುಮಾರ್​ ಹಾಗೂ ಆಲ್ರೌಂಡರ್​ ವಾಷಿಂಗ್ಟನ್​ ಸುಂದರ್​ ಅವರನ್ನು ಬದಲಿ ಆಟಗಾರರಾಗಿ ಎರಡನೇ ಟೆಸ್ಟ್​ಗೆ ಟೀಮ್​ ಇಂಡಿಯಾಗೆ ಸೇರ್ಪಡೆ ಮಾಡಿದೆ. ದೇಶೀಯ ಕ್ರಿಕೆಟ್​ ಹಾಗೂ ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ರನ್​ ಮಳೆಹರಿಸಿರುವ ಸ್ರಾರ್ಜ್​ ಖಾನ್​ಗೆ ಇದು ಚೊಚ್ಚಲ ರಾಷ್ಟ್ರೀಯ ಕರೆ ಎನಿಸಿದೆ. ಸ್ರಾರ್ಜ್​ ಇದುವರೆಗೆ ಆಡಿರುವ 45 ಪಂದ್ಯಗಳಲ್ಲಿ 69.85ರ ಸರಾಸರಿಯಲ್ಲಿ 3,912 ರನ್​ ಪೇರಿಸಿದ್ದು, ಇದರಲ್ಲಿ 11 ಅರ್ಧಶತಕ, 14 ಶತಕ ಸೇರಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts