ನ್ಯೂಸ್

ಪತಿಯ ಕಥೆ ಮುಗಿಸಿ ಮನೆಯಲ್ಲೇ ಶವ ಸುಡಲು ಯತ್ನಿಸಿದ ಮಹಿಳೆ ಅರೆಸ್ಟ್​!

ಜಾರ್ಖಂಡ್​: ಮಹಿಳೆಯೊಬ್ಬಳು ಪತಿಯನ್ನು ಕೊಂದು ಮನೆಯೊಳಗೆ ಸುಡಲು ಮಾಸ್ಟರ್​ ಪ್ಲ್ಯಾನ್​​ ಮಾಡಿ ಪೊಲೀಸರ ಬಳಿ ಸಿಕ್ಕಿ ಬಿದ್ದಿರುವ ಘಟನೆ ಜಾರ್ಖಂಡ್​​ನ ಓಲ್ಡ್ ಸುಭಾಷ್ ಕಾಲೋನಿಯಲ್ಲಿ ನಡೆದಿದೆ.

ಅಮರನಾಥ್ ಸಿಂಗ್ ಮೃತ. ಆರೋಪಿ ಮೀರಾ ಸಿಂಗ್. ಅಮರನಾಥ್ ಸಿಂಗ್ ಅವರು ಸಾರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಉದ್ಯೋಗ ಮತ್ತು ಅಧ್ಯಯನಕ್ಕಾಗಿ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದರು.

ಮಹಿಳೆ ಪತಿಯನ್ನು ಕೊಂದು ಶವವನ್ನು ಮನೆಯೊಳಗೆ ಸುಡಲು ಯತ್ನಿಸಿದ್ದಾರೆ. ಆರೋಪಿ ಮಹಿಳೆ ಒಳಗಿನಿಂದ ಬೀಗ ಹಾಕಿಕೊಂಡು, ಪೊಲೀಸರು ಒಳನುಗ್ಗದಂತೆ ತಡೆಯಲು ಬಾಗಿಲು ಮುಟ್ಟಿದರೆ ಕರೆಂಟ್​ ಶಾಕ್​​ ಹೊಡೆಯುವಂತೆ ವ್ಯವಸ್ಥೆ ಮಾಡಿದ್ದಾಳೆ. ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದು, ನೆರೆಹೊರೆಯವರು ಪುಣೆಯಲ್ಲಿ ವಾಸಿಸುವ ದಂಪತಿಯ ಮಗನಿಗೆ ವಿಚಾರ ತಿಳಿಸಿದಾಗ ಕೊಲೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಮಹಿಳೆ ಛಾವಣಿ ಮೇಲೆ ಹತ್ತಿ ಕೋಲು ಹಿಡಿದು ಜನರನ್ನು ಬೆದರಿಸಿದ್ದಾರೆ.

ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಪೊಲೀಸರು ಮನೆಯೊಳಗೆ ಪ್ರವೇಶಿಸಿ ಅರ್ಧ ಸುಟ್ಟ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೀರಾ ಸಿಂಗ್​​ನನ್ನು ಬಂಧಿಸಲಾಗಿದೆ. ಮೀರಾ ಮಾನಸಿಕ ಅಸ್ವಸ್ಥಳಾಗಿದ್ದು, ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.