ನ್ಯೂಸ್

Sports Shoe ಧರಿಸಿದ್ದಕ್ಕೆ ಕೆಲಸದಿಂದ ವಜಾ; ಕೋರ್ಟ್​ ಮೊರೆ ಹೋಗಿದ್ದಕ್ಕೆ ಸಿಕ್ತು ಭಾರೀ ಮೊತ್ತದ ಪರಿಹಾರ

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುವಂತೆ ಕಂಪನಿಗಳಲ್ಲಿ ಕಟ್ಟುನಿಟ್ಟಾದ ನಿಯಮಗಳು ಇರುತ್ತವೆ. ಅದರಲ್ಲಿ ಪ್ರಮುಖವಾಗಿ ಡ್ರೆಸ್​ಕೋಡ್​ ಕೂಡ ಒಂದಾಗಿದೆ. ಒಂದು ವೇಳೆ ನೌಕರರು ಈ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಕಠಿಣಕ್ರಮವನ್ನು ಜರುಗಿಸಲಾಗುತ್ತದೆ. ಆದರೆ, ಇಲ್ಲೊಂದು ಕಂಪನಿಯ ನಿಯಮದ ವಿರುದ್ಧವಾಗಿ ಸ್ಫೋರ್ಟ್​ ಶೂ (Sports Shoe) ತನ್ನ ಉದ್ಯೋಗಿಯನ್ನು ವಜಾ ಮಾಡಿ ಭಾರೀ ಮೊತ್ತದ ದಂಡ ಕಟ್ಟಿರುವ ಘಟನೆ ನಡೆದಿದೆ.

ಯುನೈಟೆಡ್​ ಕಿಂಗ್​ಡಮ್​ ಮೂಲದ ಮ್ಯಾಕ್ಸಿಮಸ್ ಯುಕೆ ಸರ್ವೀಸ್​ನ ಕಂಪನಿ ತನ್ನ ಉದ್ಯೋಗಿ ಎಲಿಜಬೆತ್ ಬೆನಾಸ್ಸಿ ಸ್ಪೋರ್ಟ್​​ ಶೂ (Sports Shoe) ಧರಿಸಿ ಆಫೀಸಿಗೆ ಬಂದರು ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಿದ್ದು, ಕಂಪನಿಯ ನಡೆ ಖಂಡಿಸಿ ಯುವತಿ ನ್ಯಾಯಾಲಯ ಮೆಟ್ಟಿಲೇರಿದ್ದಾಳೆ. ವಾದ-ಪ್ರತಿವಾದ ಆಲಿಸಿದ ನ್ಯಾಯಮಂಡಳಿಯು ಯುವತಿಗೆ 30,000 ಪೌಂಡ್ (32 ಲಕ್ಷ ರೂ.) ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 

20 ವರ್ಷದ ಎಲಿಜಬೆತ್ ಬೆನಾಸ್ಸಿ ಮ್ಯಾಕ್ಸಿಮಸ್ ಎರಡು ವರ್ಷಗಳ ಹಿಂದೆ ಅಂದರೆ 2022ರಲ್ಲಿ ಯುಕೆ ಸರ್ವೀಸ್​ ಕಂಪನಿ ಸೇರಿದ್ದರು. ಆಫೀಸ್​ನಲ್ಲಿ ಡ್ರೆಸ್​ಕೋಡ್​ ನಿಯಮ ಜಾರಿಯಲ್ಲಿರುವ ಕಾರಣ ಕಂಪನಿಯ ವ್ಯವಸ್ಥಾಪಕರು ಯುವತಿ ಸ್ಫೋರ್ಟ್​ ಶೂ (Sports Shoe) ಧರಿಸಿರುವುದನ್ನು ಗಮನಿಸಿ. ಇದನ್ನೇ ಕಾರಣವನ್ನಾಗಿ ನೀಡಿ ಆಕೆಯನ್ನು ಕೆಲಸದಿಂದ ವಜಾ ಮಾಡಿದ್ದರು. ಕಂಪನಿಯ ನಡೆ ಖಂಡಿಸಿ ಯುವತಿ ದಕ್ಷಿಣ ಲಂಡನ್‌ನ ಕ್ರೊಯ್ಡಾನ್‌ನಲ್ಲಿರುವ ಉದ್ಯೋಗ ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು. 

ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮಂಡಳಿಯು ದೋಷವನ್ನು ಕಂಡುಹಿಡಿಯುವ ಬಯಕೆಯನ್ನು ಕಂಪನಿ ಪ್ರದರ್ಶಿಸಿದೆ ಎಂದು ಕಿಡಿಕಾರಿದ್ದು, ಯುವತಿಗೆ 30,000 ಪೌಂಡ್ (32 ಲಕ್ಷ ರೂ.) ಪರಿಹಾರ ನೀಡುವಂತೆ ಸೂಚಿಸಿದೆ. ಆಕೆ ಸ್ಪೋರ್ಟ್ಸ್ ಶೂ ಧರಿಸಿದ್ದಳು ಎಂಬ ಕಾರಣಕ್ಕೆ ಉದ್ಯೋಗದಿಂದ ವಜಾ‌ಮಾಡುವುದು ಸರಿಯಲ್ಲ. ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿದ್ದ ಕಂಪೆನಿಯ ಈ ನಿಯಮವು ಸರಿ ಇಲ್ಲ. ವಯಸ್ಸಿನ ಆಧಾರದ ಮೇಲೆ ತಾರತಮ್ಯ ಮಾಡುವುದು ಅಸಮಂಜಸ ಎಂದು ಕಿಡಿಕಾರಿದೆ.