ನ್ಯೂಸ್

ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿ ಸಾವಿಗೆ ಶರಣಾದ ಮಹಿಳೆ!

ಮಂಗಳೂರು: ಈಕೆ ಒಂದು ವರ್ಷದ ಹಿಂದೆ ತಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿ ಸುಖವಾಗಿದ್ದಳು. ಆದರೆ ಇದೀಗ ಈಕೆ ನೇಣಿಗೆ ಶರಣಾಗಿದ್ದು ಆಕೆಯ ಕುಟುಂಬಸ್ಥರಿಗೆ ಆಘಾತ ತಂದಿದೆ.

ಮಂಗಳೂರು ಸುರತ್ಕಲ್​ನ ಬಾಳ ಗ್ರಾಮದಲ್ಲಿ ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ದಿವ್ಯಾ (26) ಮೃತ ಮಹಿಳೆಯಾಗಿದ್ದಾರೆ.

ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಹಾಗೂ ಆಟೋ ಚಾಲಕರಾಗಿ ದುಡಿಯುತ್ತಿದ್ದ ಆಕೆಯ ಪತಿ ಹರೀಶ್​ ನಡುವೆ ಪ್ರೇಮಾಂಕುಯರವಾಗಿತ್ತು. ಒಂದು ವರ್ಷದ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಹೀಗೆ ಈ ದಂಪತಿ ಸಂಸಾರ ಸಾಗಿಸುತ್ತಿದ್ದರು.

ಈಕೆ ಹಾಗೂ ಈಕೆಯ ಪತಿ ಇಬ್ಬರೂ ಸೇರಿ ನೆರೆ ಮನೆಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ತೆರಳಿದ್ದರು. ಕಾರ್ಯಕ್ರಮದ ನಡುವೆಯೇ ದಿವ್ಯಾ ಮನೆಗೆ ಒಬ್ಬರೇ ವಾಪಾಸ್​ ಬಂದಿದ್ದಾರೆ. ಪಕ್ಕದಲ್ಲೇ ಮನೆ ಇದ್ದ ಕಾರಣ ಪತಿ ಕೂಡ ಈ ಬಗ್ಗೆ ಹೆಚ್ಚು ಆಲೋಚನೆ ಮಾಡಿರಲಿಲ್ಲ. ಆದರೆ ಪತಿ ಮನೆಗೆ ವಾಪಸ್​ ಬಂದಾಗ ಆತನಿಗೆ ಆಘಾತ ಕಾದಿತ್ತು.

ಪತಿ ವಾಪಾಸು ಮನೆಗೆ ಬಂದಾಗ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು ಅಲ್ಲಿದ್ದ ಎಲ್ಲರಿಗೂ ಆಘಾತ ನೀಡಿದೆ. ಇದೀಗ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.