ನ್ಯೂಸ್

ಪ್ರಿಯಕರನಿಗೆ ಶಾಕ್.. ಆ ಕಾರಣಕ್ಕೆ ಮರ್ಮಾಂಗ ಕಟ್ ಮಾಡಿದ ಪ್ರಿಯತಮೆ!

ಅಮರಾವತಿ: ಬಾಯ್ ಫ್ರೆಂಡ್ ತನ್ನನ್ನು ಗರ್ಭಿಣಿ ಮಾಡಿದ್ದಲ್ಲದೆ ನಿರ್ಲಕ್ಷ್ಯ ತೋರುತ್ತ ತನಕೆ ಮೋಸ ಮಾಡಿದ್ದಾನೆ ಎಂದು ಕುಪಿತಳಾದ ಯುವತಿ, ಆತನ ಮರ್ಮಾಂಗವನ್ನು ಕತ್ತರಿಸಿಹಾಕಿರುವ ಘಟನೆ ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ರಕ್ತಸ್ರಾಯದಿಂದ ನಿಶ್ಯಕ್ತನಾಗಿದ್ದ ಆ ವ್ಯಕ್ತಿ ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಉದ್ಯೋಗ ನಿಮಿತ್ತ ಪ್ರಕಾಶಂ ಜಿಲ್ಲೆಯ ತೋರರಗುಡಿಪಾಡು ಎಂಬಲ್ಲಿಗೆ ಬಂದಿದ್ದ ಬಿಹಾರದ ಮೂಲದ ವಿಜಯ್ ಯಾದವ್ ಅಲ್ಲಿನ ಸ್ಥಳೀಯ ಡೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಆತನಿಗೆ ಮದುವೆಯಾಗಿದ್ದರೂ ಪತ್ನಿಯನ್ನು ಬಿಹಾರದಲ್ಲೇ ಬಿಟ್ಟು ಬಂದಿದ್ದ.

ಆದರೆ ಅದೇ ರಾಜ್ಯದ ಯುವತಿಯೊಬ್ಬಳ ಪರಿಚಯವಾಗಿ, ಆಕೆಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಆತ್ಮೀಯತೆ ಏರ್ಪಟ್ಟು ದೈಹಿಕ ಸಂಪರ್ಕಕ್ಕೆ ಕಾರಣವಾಗಿತ್ತು.

ಕೆಲ ದಿನಗಳಿಂದ ತೋರರಗುಡಿಪಾಡುವಿನ ಬಾಡಿಗೆ ಮನೆಯಲ್ಲಿ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು. ಯುವತಿ ಗರ್ಭಿಣಿಯಾಗಿದ್ದು, ವಿಜಯ್ ಯಾದವ್ ತನ್ನತ್ತ ಗಮನ ಹರಿಸುತ್ತಿಲ್ಲ, ತನ್ನ ಸಂಪಾದನೆಯನ್ನೆಲ್ಲ ಬಿಹಾರದಲ್ಲಿರುವ ಹೆಂಡತಿಗೆ ಕಳುಹಿಸುತ್ತಿದ್ದಾನೆ. ತನ್ನನ್ನು ಸರಿಯಾಗಿ ನೋಡಿಕೊಳ್ಳದೆ ತೊಂದರೆ ಕೊಡುತ್ತಿದ್ದಾನೆ ಎಂದು ಕೋಪಗೊಂಡಿದ್ದಾಳೆ. ಇದೇ ವಿಚಾರವಾಗಿ ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇದೇ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ವಿಜಯ್ ಡೇರಿಯ ಕೊಠಡಿಯಲ್ಲಿ ಮಲಗಿದ್ದ ವೇಳೆ ತರಕಾರಿ ಚಾಕು ಹಿಡಿದು ಬಂದ ಯುವತಿ ನೇರ ಆತನ ಮರ್ಮಾಂಗವನ್ನು ಕೊಯ್ದುಹಾಕಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ವಿಜಯ್ ಯಾದವ್ ನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಒಂಗೋಲು ರಿಮ್ಸ್ ಆಸಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿಜಯ್​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಕೆಯನ್ನು ಒಂಗೋಲು ಮಹಿಳಾ ಕಲ್ಯಾಣ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.