ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ ಮುದ್ದಾದ, ಚೆಂದನೆಯ ವಿಡಿಯೋಗಳು ವೈರಲ್ ಆಗುವುದು ಹೊಸದಲ್ಲ. ಹಾಗೇ ಈಗೊಂದು ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದರೆ ನಿಮ್ಮ ಮುಖದಲ್ಲೂ ಒಂದು ನಗುಮೂಡುತ್ತದೆ.
ಒಂದು ಚಿಂಪಾಂಜಿ ಮರಿಗೆ ಮಹಿಳೆಯೋರ್ವರು ಬ್ರಷ್ ಮಾಡಿಸುತ್ತಾರೆ. ಆದರೆ ಚಿಂಪಾಂಜಿ ಹಲ್ಲು ಉಜ್ಜಲು ಆಕೆಯ ಬಳಸಿದ ಬ್ರಷ್ ಒಂದು ಕ್ಷಣ ನಿಮ್ಮನ್ನು ಗೊಂದಲಕ್ಕೀಡುಮಾಡುವುದರಲ್ಲಿ ಸಂಶಯವಿಲ್ಲ. ನೀವು ಈ ಉಪಾಯವನ್ನು ಮಕ್ಕಳ ಮೇಲೆ ಕೂಡ ಪ್ರಯೋಗ ಮಾಡಬಹುದು...!
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ಶೇರ್ ಮಾಡಿಕೊಂಡಿದ್ದಾರೆ. ನಿಮ್ಮ ಮಕ್ಕಳಿಗೆ ವಿಡಿಯೋ ತೋರಿಸಿ. ಇದನ್ನು ನೋಡಿದ ಮೇಲೆ ಖಂಡಿತ ಅವರೂ ಖುಷಿಯಿಂದಲೇ ಹಲ್ಲುಜ್ಜಲು ಪ್ರಾರಂಭಿಸುತ್ತಾರೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದನ್ನೂ ಓದಿ: ಯಾರು ಹೇಳಿದ್ದು ಕರೊನಾದಿಂದ ವೃದ್ಧರು ಪಾರಾಗೋದಿಲ್ಲ ಅಂತ? 105 ವರ್ಷದ ಅಜ್ಜಿಯ ಆತ್ಮಸ್ಥೈರ್ಯ ಸೋಂಕನ್ನೇ ಹೆದರಿಸಿದೆ !
ಸಿಪ್ಪೆ ಸುಲಿದ ಬಾಳೆಹಣ್ಣಿನಂತೆ ಇರುವ ಟೂತ್ ಬ್ರಷ್ನಲ್ಲಿ ಚಿಂಪಾಂಜಿ ಮರಿಗೆ ಮಹಿಳೆ ಹಲ್ಲುಜ್ಜಿಕೊಡುವುದನ್ನು 29 ಸೆಕೆಂಡ್ಗಳ ಈ ವಿಡಿಯೋದಲ್ಲಿ ನೀವು ನೋಡಬಹುದು. ಚಿಂಪಾಂಜಿ ಕೂಡ ಅದು ಬಾಳೆಹಣ್ಣು ಎಂದು ಭಾವಿಸಿ, ಖುಷಿಯಿಂದ ಹಲ್ಲು ಉಜ್ಜಿಸಿಕೊಲ್ಳುತ್ತಿದೆ. ಮಧ್ಯಮಧ್ಯ ಅದನ್ನು ಕಚ್ಚಲೂ ಕೂಡ ಪ್ರಯತ್ನಿಸುತ್ತದೆ.
ವಿಡಿಯೋ ನೋಡಿದ ನೆಟ್ಟಿಗರಂತೂ ಫುಲ್ ಖುಷಿಯಾಗಿದ್ದಾರೆ. ಅಯ್ಯೋ ಈಗಿನ ಮಕ್ಕಳನ್ನು ಹೀಗೆ ಯಾಮಾರಿಸುವುದು ಕಷ್ಟ. ನನ್ನ ಮೊಮ್ಮಗಳಂತೂ ನಿಜವಾದ ಬಾಳೆಹಣ್ಣಿನಲ್ಲೇ ಹಲ್ಲು ಉಜ್ಜುತ್ತಾಳೆ ಎಂದು ಕಾಮೆಂಟ್ ಹಾಕಿದ್ದಾರೆ. (ಏಜೆನ್ಸೀಸ್)