

ತಿರುವನಂತಪುರಂ: ಕರೊನಾ ವೈರಸ್ ಬಗ್ಗೆ ಅದೆಷ್ಟೋ ಮಿಥ್ಯಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ವಯಸ್ಸಾದವರಿಗೆ ಈ ಸೋಂಕು ತಗುಲಿದರೆ ಬದುಕುವುದೇ ಇಲ್ಲ ಎಂಬುದು. ಆದರೆ ಜಗತ್ತಿನ ಅನೇಕ ಕಡೆಗಳಲ್ಲಿ, ಭಾರತದಲ್ಲೂ ಕೆಲವು ವೃದ್ಧರು ಕರೊನಾವನ್ನು ಯಶಸ್ವಿಯಾಗಿ ಮಣಿಸಿದ ಉದಾಹರಣೆಗಳು ಸಿಗುತ್ತಿವೆ. ಇದನ್ನೂ ಓದಿ: ‘ಯಾರಾದರೂ ಸತ್ತರೆ ನಿಮಗೆ ಅವರ ಬೆಡ್…ಅಲ್ಲಿಯವರೆಗೂ ನೆಲದ ಮೇಲೆ ಮಲಗಿ’
ಇದೀಗ ಆ ಸಾಲಿಗೆ ಸೇರಿದವರು ಕೇರಳದ ಆಸ್ಮಾ ಬೀವಿ ಎಂಬ 105 ವರ್ಷದ ವೃದ್ಧೆ. ಕರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊವಿಡ್ನಿಂದ ಪಾರಾದ ಕೇರಳದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಬೀವಿ ಅವರು ಕೊಲ್ಲಂನಲ್ಲಿರುವ ಇಎಸ್ಐ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದರು. 105 ವರ್ಷದ ಇವರಿಗೆ ಮಗಳಿಂದಲೇ ಕರೊನಾ ಸೋಂಕು ತಗುಲಿತ್ತು. ಇವರೇನೂ ಸುಲಭದಲ್ಲಿ ಕರೊನಾವನ್ನು ಮಣಿಸಲಿಲ್ಲ. ಒಂದೆರಡು ಬಾರಿ ಆರೋಗ್ಯ ತೀರ ಹದಗೆಟ್ಟಿತ್ತು. ಆದರೆ ಮತ್ತೆ ಸುಧಾರಿಸಿಕೊಂಡು, ಇದೀಗ ಆರೋಗ್ಯದಿಂದ ಹಿಂದಿರುಗಿದ್ದಾರೆಂದು ಆಸ್ಪತ್ರೆ ತಿಳಿಸಿದೆ. (ಏಜೆನ್ಸೀಸ್)