ನ್ಯೂಸ್

ಸೋದರಳಿಯನಿಂದಲೇ ಲೈಂಗಿಕ ಕಿರುಕುಳ.. ದೂರು ನೀಡಿದ್ದಕ್ಕೆ ಮಹಿಳೆಗೆ ತಲೆ ಬೋಳಿಸಿ, ಥಳಿಸಿದರು!

ಲಕ್ನೋ: ಸೋದರಳಿಯನಿಂದ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿದ್ದಕ್ಕೆ ಅಮಾನುಷವಾಗಿ ಥಳಿಸಿ ಆಕೆಯ ತಲೆ ಬೋಳಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ.

ಸೆ.3 ರಂದು ಸಂಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧದ ವೀಡಿಯೊ ವೈರಲ್ ಆಗಿದ್ದು, ಮಹಿಳೆಯ ಪತಿ ಸೇರಿ ಆರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯನ್ನು ಕೈ ಕೈಕಾಲು ಕಟ್ಟಿ ಹಾಕಿ, ತಲೆ ಬೋಳಿಸಿ ಸಾರ್ವಜನಿಕರ ಎದುರು ನಿಲ್ಲಿಸಿ, ಆಕೆಯ ಪತಿ ಕೋಲಿನಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಪತಿ ಬಳಿಕ ಇತರರು ಒಬ್ಬರಾದ ಮೇಲೆ ಒಬ್ಬರಂತೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆ ನೋವು ತಾಳದೆ ಕಿರುಚುತ್ತ ಕಡೆಗೆ ಕುಸಿದು ಬಿದ್ದಿದ್ದಾಳೆ.

ಕೆಲ ದಿನಗಳಿಂದ ತನ್ನ ಸೋದರಳಿಯ ರಾಜನಾಥ್ ಕಿರುಕುಳ ನೀಡುತ್ತಿದ್ದ ಮಹಿಳೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಆರೋಪಿಯ ಮನೆಗೆ ದೂರು ಹೋದಾಗ ಪತಿ ಮತ್ತು ಸೋದರಳಿಯನ ಮನೆಯವರು ಮಹಿಳೆಯರ ಮೇಲೆ ಹಲ್ಲೆ ನಡೆಸಿ ತಲೆ ಬೋಳಿಸಿ ಕೋಲುಗಳಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.