ನ್ಯೂಸ್

ನವಜಾತ ಶಿಶುವಿನ ಜೀವಕ್ಕೆ ಕುತ್ತು ತಂದ ಅತಿಯಾದ ತಂಬಾಕು ಸೇವನೆ

ಅಹಮದಾಬಾದ್: ಆಘಾತಕಾರಿ ಘಟನೆ ಒಂದರಲ್ಲಿ ಗರ್ಬಾವಸ್ಥೆಯಲ್ಲಿರುವಾಗ ತಾಯಿಯೂ ಅತಿಯಾಗಿ ತಂಬಾಕು ಸೇವಿಸಿದ ಪರಿಣಾಮ ನವಜಾತ ಶಿಶು ಒಂದರ ಜನನವೂ ತ್ವರಿತವಾಗಿ ತುರ್ತು ವೈದ್ಯಕೀಯ ಪರಿಸ್ಥಿತಿಗೆ ತಿರುಗಿದ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

ಮಗು ಹುಟ್ಟಿದ್ದ ಕೂಡಲೇ ಅಳದೆ ನೀಲಿ ಬಣ್ಣಕ್ಕೆ ತಿರುಗಿದೆ. ಕೆಲ ಕ್ಷಣದ ಬಳಿಕ ಮಗುವಿನ ರಕ್ತದೊತ್ತಡ ಕುಸಿಯಲು ಪ್ರಾರಂಭಿಸಿದ್ದು, ವೆಂಟಿಲೇಟರ್​ನಲ್ಲಿ ಇರಿಸಿ ಚಿಕಿತ್ಸೆ ಕೊಡಲು ವೈದ್ಯರು ಪ್ರಾರಂಭಿಸಿದ್ದಾರೆ. ಮಗುವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ವೈದ್ಯರು ನವಜಾತ ಶಿಶುವನ್ನು ಅಹಮದಾಬಾದಿನ ಟೆರ್​ಷಿಯರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮಗುವಿನಲ್ಲಿ ಉಸಿರುಗಟ್ಟುವುದನ್ನು ಗಮನಿಸಿದ ವೈದ್ಯರು ಪರೀಕ್ಷೆ ನಡೆಸಿದ ಬಳಿಕ ನವಜಾತ ಶಿಶುವಿನ ರಕ್ತನಾಳದಲ್ಲಿ ನಿಕೋಟಿನ್​ ಅಂಶ ಹೆಚ್ಚಿಗೆ ಇತ್ತು ಎಂದು ತಿಳಿದು ಬಂದಿದೆ. ಬಳಿಕ ಈ ಬಗ್ಗೆ ವೈದ್ಯರು ಪರಿಶೀಲನೆ ನಡೆಸಿದಾಗ ಮಗುವಿನ ತಾಯಿಯೂ ಗರ್ಭಿಣಿಯಾಗಿದ್ದ ವೇಳೆ ಅತಿಯಾಗಿ ತಂಬಾಕು ಸೇವಿಸುತ್ತಿದ್ದ ಪರಿಣಾಮ ನವಜಾತು ಶಿಶುವಿನ ಮೇಲೆ ಬೀರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯರೊಬ್ಬರು ಮಗುವಿನ ತಾಯಿ ಮೊದಲೇ ಅಸ್ತಮಾದಿಂದ ಬಳಲುತ್ತಿದ್ದು, ದಿನಕ್ಕೆ 10-15 ಬಾರಿ ತಂಬಾಕು ಸೇವಿಸುತ್ತಾರೆ. ತಾಯಿ ಸೇವಿಸುವ ಆಹಾರ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದ್ದು, ಈ ಪ್ರಕರಣದಲ್ಲೂ ಇದೇ ರೀತಿ ಆಗಿದೆ. ಶಿಶುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.