ನವದೆಹಲಿ: ಪೇಟಿಎಂ ಫಾಸ್ಟ್ಯಾಗ್ ಬಳಸುತ್ತಿರುವವರು ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್ನಿಂದ ಫಾಸ್ಟ್ಯಾಗ್ ಪಡೆಯುವಂತೆ ಎನ್ಎಚ್ಎಐ ಮತ್ತೊಮ್ಮೆ ಮಾಹಿತಿ ತಿಳಿಸಿದೆ.
ಇದನ್ನೂ ಓದಿ: ವಿಶ್ವದ ಉತ್ತಮ ಸ್ಟ್ರೀಟ್ ಫುಡ್ಗಳ ಲಿಸ್ಟ್ನಲ್ಲಿ ವಡಾಪಾವ್ಗೆ ಸ್ಥಾನ! ಇಲ್ಲಿದೆ ನೋಡಿ ಇನ್ನಷ್ಟು ಮಾಹಿತಿ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಅದರ ಫಾಸ್ಟ್ಯಾಗ್ಗೂ ಹೊಡೆತ ಬಿದ್ದಿದೆ. ಪೇಟಿಎಂನ ಫಾಸ್ಟ್ಯಾಗ್ ಪೇಮೆಂಟ್ಸ್ ಬ್ಯಾಂಕ್ಗೆ ಜೋಡಿತವಾಗಿರುವುದರಿಂದ ಅದಕ್ಕೂ ನಿರ್ಬಂಧ ಅನ್ವಯ ಆಗುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಅಥವಾ ಯಾವುದೇ ದುಪ್ಪಟ್ಟು ಶುಲ್ಕವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆ ಇಲ್ಲದೆ ತಡೆರಹಿತ ಪ್ರಯಾಣದ ಅನುಭವವನ್ನು ಪಡೆಯಬಹುದು ಎಂದು ಹೇಳಿದೆ.
ಹೊಸ ಫಾಸ್ಟ್ಯಾಗ್ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?: ನಿಮ್ಮ ಬಳಿ ಪೇಟಿಎಂ ಫಾಸ್ಟ್ಯಾಗ್ ಇದ್ದು, ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್ನ ಫಾಸ್ಟ್ಯಾಗ್ ಪಡೆಯಬೇಕಾಗುತ್ತದೆ. ಮಾರ್ಚ್ 15ರ ನಂತರ ಅದು ನಿಷ್ಕ್ರಿಯಗೊಳ್ಳುವುದಿಲ್ಲ. ಆ ಖಾತೆಯಲ್ಲಿ ಹಣ ಇದ್ದರೆ ಅದು ಮುಗಿಯುವವರೆಗೂ ಬಳಸಬಹುದು. ಮಾರ್ಚ್ 15ರ ಬಳಿಕ ಹಣ ರೀಚಾರ್ಜ್ ಮಾಡಲಾಗುವುದಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂ ಸಂಸ್ಥೆ ಕೂಡ ತನ್ನ ಫಾಸ್ಟ್ಯಾಗ್ ಗ್ರಾಹಕರಿಗೆ ಬೇರೆ ಟ್ಯಾಗ್ ಪಡೆಯುವಂತೆ ಸಲಹೆ ನೀಡುತ್ತಲೇ ಬಂದಿದೆ.
ಫಾಸ್ಟ್ಯಾಗ್ ಏನು ಕೆಲಸ ನಿರ್ವಹಿಸುತ್ತೆ: ಹೆದ್ದಾರಿಗಳಲ್ಲಿ ಸುಂಕ ಸಂಗ್ರಹಕ್ಕೆಂದು ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ನೀಡಲಾಗುವ ಪ್ರೀಪೇಯ್ಡ್ ಯಂತ್ರ. ರೇಡಿಯೋ ಫ್ರೀಕ್ವೆನ್ಸಿ ಐಡಿ ತಂತ್ರಜ್ಞಾನ ಬಳಸಲಾಗುತ್ತದೆ. ಫಾಸ್ಟ್ಯಾಗ್ ಖಾತೆಗೆ ಎಷ್ಟಾದರೂ ಹಣವನ್ನು ಮುಂಚಿತವಾಗಿ ರೀಚಾರ್ಜ್ ಮಾಡಬಹುದು. ಹೆದ್ದಾರಿಯಲ್ಲಿ ಟೋಲ್ ಬೂತ್ ಸಮೀಪ ಸ್ವಯಂಚಾಲಿತವಾಗಿ ಫಾಸ್ಟ್ಯಾಗ್ ಮೂಲಕ ಟೋಲ್ ಹಣ ಕಡಿತವಾಗುತ್ತದೆ.
ಎಲ್ಲಿ ಪಡೆಯಬಹುದು?: ಹೆದ್ದಾರಿ ಪ್ರಾಧಿಕಾರವು ಪ್ರಮುಖ 37 ಬ್ಯಾಂಕುಗಳಿಗೆ ಫಾಸ್ಟ್ಯಾಗ್ ನೀಡಲು ಅನುಮತಿಸಿದೆ. ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ ಹೀಗೆ ಎಲ್ಲಾ ಪ್ರಮುಖ ಬ್ಯಾಂಕುಗಳ ಮೂಲಕ ಫಾಸ್ಟ್ಯಾಗ್ ಪಡೆಯಬಹುದು.