More

    ವಿಶ್ವದ ಉತ್ತಮ ಸ್ಟ್ರೀಟ್ ಫುಡ್​ಗಳ ಲಿಸ್ಟ್​ನಲ್ಲಿ ವಡಾಪಾವ್​ಗೆ ಸ್ಥಾನ! ಇಲ್ಲಿದೆ ನೋಡಿ ಇನ್ನಷ್ಟು ಮಾಹಿತಿ ​

    ಮುಂಬೈ: ಒಂದು ಸ್ಥಳ ಹೆಸರುವಾಸಿಯಾಗುವುದು ಒಂದೋ ಅಲ್ಲಿರುವ ಪ್ರೇಕ್ಷಣೀಯ ಸ್ಥಳದಿಂದ ಇಲ್ಲವೇ ಅಲ್ಲಿ ದೊರೆಯುವ ಬಾಯಲ್ಲಿ ನೀರೂರಿಸುವ ರಸ್ತೆಬದಿಯ ತಿಂಡಿಗಳಿಂದ ಹಾಗಾಗಿಯೇ ರಸ್ತೆಬದಿಯ ತಿಂಡಿ ಸ್ಥಳದ ನೈಜತೆಯನ್ನು ಬಣ್ಣಿಸುತ್ತದೆ. ಯಾವುದೇ ಹೊಸ ಸ್ಥಳಕ್ಕೆ ನಾವು ಪ್ರಯಾಣಿಸುತ್ತೇವೆ ಎಂದರೆ ನಮ್ಮ ಮನದಲ್ಲಿ ಮೊದಲು ಬರುವ ವಿಷಯ ಅಲ್ಲಿ ದೊರೆಯುವ ತಿಂಡಿ ತಿನಿಸಾಗಿರುತ್ತದೆ. ಅದರಲ್ಲೂ ಅಲ್ಲಿನ ಸ್ಥಳೀಯ ಆಹಾರದ ರುಚಿ ಸವಿಯಬೇಕು ಎಂದರೆ ರಸ್ತೆಬದಿಯ ತಿಂಡಿಗಳನ್ನೇ ಆಸ್ವಾದಿಸಬೇಕು. ಸ್ಥಳೀಯ ತಿಂಡಿಗಳು ತಮ್ಮದೇ ಆದ ಪಾಕವಿಧಾನ ರುಚಿ, ವೈವಿಧ್ಯತೆ, ಸಂಪ್ರದಾಯಗಳಿಂದ ಮಿಳಿತಗೊಂಡಿರುತ್ತವೆ. ಇಂತಹ ತಿಂಡಿತಿನಿಸುಗಳು ಆ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ ಹಾಗೂ ಅಲ್ಲಿನ ಸಂಪ್ರದಾಯಗಳ ಪರಿಚಯವನ್ನು ಮಾಡಿಕೊಡುತ್ತವೆ.

    ಇದನ್ನೂ ಓದಿ: ಹ್ಯಾಟ್ರಿಕ್​ ಗೆಲುವು ಸಾಧಿಸಲು ಮೋದಿ ದಕ್ಷಿಣ ದಂದಯಾತ್ರೆ! ಕರ್ನಾಟಕ ಈ ಕ್ಷೇತ್ರಗಳೇ ಟಾರ್ಗೆಟ್​

    ನಮ್ಮ ದೇಶದಂತೆ ಇತರೆ ದೇಶಗಳು ಸಹ ಸ್ಟ್ರೀಟ್ ಫುಡ್ ಸಿಹಿತಿಂಡಿಯಲ್ಲಿ ವಿವಿಧತೆಯನ್ನು ಹೊಂದಿದೆ. ಇಷ್ಟೆಲ್ಲಾ ಸಿಹಿತಿಂಡಿಗಳ ಸರಮಾಲೆ ಇರುವಾಗ ಯಾವುದು ಬೆಸ್ಟ್‌ ಅಂತಾ ನಮನ್ನು ಕೇಳಿದರೆ, ಇದು ನಮ್ಮ ಕೈಯಿಂದ ಆಗದ ಕೆಲಸ ಅನ್ನಬಹುದು. ಆದಾಗ್ಯೂ ಈ ವಿವಿಧ ಬಗೆಯ ಸಿಹಿತಿಂಡಿಗಳಲ್ಲಿ ಯಾವುದು ಉತ್ತಮ ಅನ್ನೋದನ್ನು ಕ್ರೊಯೇಷಿಯಾ ಮೂಲದ ಆನ್‌ಲೈನ್ ಟ್ರಾವೆಲ್ ಮತ್ತು ಫುಡ್‌ಗೈಡ್‌ ಟೇಸ್ಟ್ ಅಟ್ಲಾಸ್ ಪಟ್ಟಿ ಮಾಡಿದೆ.

    ಈ ಟೇಸ್ಟ್ ಅಟ್ಲಾಸ್ ಆಹಾರ-ಆಧಾರಿತ ನಿಯತಕಾಲಿಕವಾಗಿದ್ದು ಇದು ಪ್ರಪಂಚದಾದ್ಯಂತ ಬೀದಿಬದಿ ಆಹಾರದ ಬಗ್ಗೆ ವಿವರವಾದ ವಿಮರ್ಶೆಗಳು ಮತ್ತು ಮಾಹಿತಿಯನ್ನು ನೀಡುತ್ತದೆ.

    ವಡಾ ಪಾವ್ ತನ್ನ ಸರಳ ಮತ್ತು ಸೊಗಸಾದ ರುಚಿಗಾಗಿ ಮುಂಬೈನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಹೆಸರುವಾಸಿಯಾಗಿದೆ. ವಡಾಪಾವ್​ಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ವಿಶ್ವದ ಅತ್ಯುತ್ತಮ ಸ್ಯಾಂಡ್‌ವಿಚ್‌ಗಳಲ್ಲಿ ಒಂದಾಗಿದೆ. 19ನೇ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಅತ್ಯುತ್ತಮ ಭಾರತೀಯ ಸಿಹಿತಿಂಡಿ ಎಂಬ ಹೆಗ್ಗಳಿಕೆಯನ್ನು ಮೈಸೂರು ಪಾಕ್ ಪಡೆದಿದೆ.

    ಇದನ್ನೂ ಓದಿ: ಕಾಂಗ್ರೆಸ್​ನ ‘ನಾರಿ ನ್ಯಾಯ’ ಪ್ರಣಾಳಿಕೆ! ಮಹಿಳೆಯರಿಗೆ ಐದು ವಿಶಿಷ್ಟ ಗ್ಯಾರಂಟಿ ನೀಡಿದ ‘ಕೈ’

    ಟೇಸ್ಟ್ ಅಟ್ಲಾಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಶ್ವದ ಅತ್ಯುತ್ತಮ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೇಸ್ಟ್ ಅಟ್ಲಾಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 50 ವಿಜೇತ ಸ್ಯಾಂಡ್‌ವಿಚ್‌ಗಳ ಪಟ್ಟಿಯನ್ನು ಪೋಸ್ಟ್ ಮಾಡಿದೆ. ಇದು ವಿಶ್ವದ 50 ಅತ್ಯುತ್ತಮ ಸ್ಯಾಂಡ್‌ವಿಚ್‌ಗಳ ಪಟ್ಟಿಯ ಜೊತೆಗೆ ಪಟ್ಟಿಯ ಲಿಂಕ್​ನ್ನು ಹಂಚಿಕೊಂಡಿದೆ.

    View this post on Instagram

    A post shared by TasteAtlas (@tasteatlas)

    ಈ ವಿಶಿಷ್ಟವಾದ ಬೀದಿ ಆಹಾರವು ಮೊದಲು ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಅಶೋಕ್ ವೈದ್ಯ ಎಂಬ ಬೀದಿ ವ್ಯಾಪಾರಿಯಿಂದ ಹುಟ್ಟಿಕೊಂಡಿತು. ಹಸಿದ ಕೆಲಸಗಾರರಿಗೆ ತಯಾರಿಸಲು ಸುಲಭ, ಅಗ್ಗದ ಮತ್ತು ಹೆಚ್ಚು ಪೌಷ್ಟಿಕಾಂಶದ ಭಕ್ಷ್ಯವೆಂದು ಭಾವಿಸಿದಾಗ ಈ ವಡಾಪಾವ್ ಅನ್ನು ಕಂಡುಹಿಡಿಯಲಾಯಿತು. ಅದಾದ ನಂತರ ಮುಂಬೈನಾದ್ಯಂತ ವ್ಯಾಪಿಸಿದ ವಡಾಪಾವ್. ಈಗ ದೇಶ, ವಿಶ್ವದ ಗಮನ ಸೆಳೆಯುತ್ತಿದೆ.

    ವಡಾ ಪಾವ್ ರೆಸಿಪಿ: ವಡಾ ಪಾವ್ ಎಂದು ಕರೆಯಲ್ಪಡುವ ಸ್ಟಿಟ್ ಫುಡ್ ಮುಂಬೈನಿಂದ ಬಂದಿದೆ. ಇದು ಹೊಟ್ಟೆ ಪೂರ ತುಂಬುವ, ಕೈಗೆಟಕುವ ಬೆಲೆಯ ಹಾಗೂ ಎಲ್ಲರಿಗೂ ಇಷ್ಟವಾಗುವ ಆಹಾರವಾಗಿದೆ. ಇದರಲ್ಲಿ ಹಾಕಲಾಗುವ ಆಲೂಗಡ್ಡೆಯ ಮಸಾಲ ವಡಾವು ಹೊಟ್ಟೆ ತುಂಬುವಂತೆ ಮಾಡುತ್ತದೆ. ಪಾವ್ ಎಂದು ಕರೆಯಲ್ಪಡುವ ಭಾರತೀಯ ಬನ್‌ನ್ನು ಅರ್ದದಷ್ಟು ಕತ್ತರಿಸಿ ಅದಕ್ಕೆ ಕೊತ್ತಂಬರಿ ಚಟ್ನಿಯನ್ನು ಹರಡಲಾಗುತ್ತದೆ. ನಂತರ ಉತ್ತಮ ಪ್ರಮಾಣದ ಒಣಗಿದ ಬೆಳ್ಳುಳ್ಳಿ ಚಟ್ನಿಯನ್ನು ಹರಡಲಾಗುತ್ತದೆ. ಮತ್ತು ಅದರ ಮಧ್ಯೆ ಆಲೂಗಡ್ಡೆ ವಡಾವನ್ನು ಇಡಲಾಗುತ್ತದೆ.

    ವಡಾ ಪಾವ್ ತನ್ನ ಸರಳ ಮತ್ತು ಸೊಗಸಾದ ರುಚಿಗಾಗಿ ಮುಂಬೈನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಹೆಸರುವಾಸಿಯಾಗಿದೆ. ವಡಾ ಪಾವ್ ಮಾಡುವ ವಿಧಾನ ಧೀರ್ಘವಾಗಿರುತ್ತದೆ. ಆದರೆ ನೀವು ಚಟ್ನಿಯನ್ನು ಮೊದಲೇ ತಯಾರಿಸಿಟ್ಟರೆ ಅದು ಸುಲಭವಾಗುತ್ತದೆ. ಮತ್ತು ಅದನ್ನು ರೆಫ್ರಿಜರೆಟರ್‌ನಲ್ಲಿ ಇಟ್ಟು 3 ದಿನಗಳವರೆಗೂ ಬಳಸಬಹುದು.

    ಹಾರ್ದಿಕ್​​​ ಪಾಂಡ್ಯಗೆ ಹಿಗ್ಗಾಮುಗ್ಗಾ ಜಾಡಿಸಿದ ಸ್ಟಾರ್​​ ಕ್ರಿಕೆಟರ್​: ಕಾರಣ ಹೀಗಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts