More

    ಹಾರ್ದಿಕ್​​​ ಪಾಂಡ್ಯಗೆ ಹಿಗ್ಗಾಮುಗ್ಗಾ ಜಾಡಿಸಿದ ಸ್ಟಾರ್​​ ಕ್ರಿಕೆಟರ್​: ಕಾರಣ ಹೀಗಿದೆ?

    ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್ 17ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಐಪಿಎಲ್ 2024 ಆವೃತ್ತಿಯ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ನೂತನ ನಾಯಕರಾಗಿದ್ದಾರೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಪ್ರವೀಣ್​ ಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ರನ್​ ಮೆಷಿನ್​ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರೋದು ಯಾವಾಗ?: ಫ್ರಾಂಚೈಸಿ ಕೊಟ್ಟ ಉತ್ತರ ಹೀಗಿದೆ..

    ಮುಂಬೈ ಇಂಡಿಯನ್ಸ್​ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ವಿರುದ್ಧ ಟೀಂ ಇಂಡಿಯಾ ಮಾಜಿ ಆಟಗಾರ ಪ್ರವೀಣ್​ ಕುಮಾರ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರವೀಣ್ ನೇರವಾಗಿ ಪಾಂಡ್ಯ ವಿರುದ್ಧ ವಾಗ್ದಾಳಿ ನಡೆಸಿದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಚೇತರಿಸಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಸುಮಾರು ನಾಲ್ಕು ತಿಂಗಳಿಂದ ಮೈದಾನದಿಂದ ದೂರ ಉಳಿದಿರುವ ಹಾರ್ದಿಕ್ ಯಾವ ರೀತಿ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ ಎಂದಿದ್ದಾರೆ.

    ಐಪಿಎಲ್‌ ಆರಂಭಕ್ಕೂ ಅಂದರೆ 2023ರ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡಿದ್ದ ಹಾರ್ದಿಕ್​ ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಟೀಂ ಇಂಡಿಯಾ ಪರ ಒಂದು ಪಂದ್ಯವನ್ನು ಆಡಲಿಲ್ಲ. ರಣಜಿ ಸೇರಿದಂತೆ ಯಾವುದೇ ದೇಶೀಯ ಟೂರ್ನಿಯಲ್ಲೂ ಆಡಿಲ್ಲ. ನೇರವಾಗಿ ಐಪಿಎಲ್‌ನಲ್ಲಿ ಆಡುತ್ತೀರಿ ಇದನ್ನೂ ನಾನು ಖಂಡಿಸುತ್ತೇನೆ ಎಂದು ಟೀಕಿಸಿದ್ದಾರೆ.

    ಹಾರ್ದಿಕ್​​​ ಪಾಂಡ್ಯಗೆ ಹಿಗ್ಗಾಮುಗ್ಗಾ ಜಾಡಿಸಿದ ಸ್ಟಾರ್​​ ಕ್ರಿಕೆಟರ್​: ಕಾರಣ ಹೀಗಿದೆ?

    ಈಗ ಪ್ರತಿಯೊಬ್ಬ ಆಟಗಾರನು ಐಪಿಎಲ್‌ಗೆ ಆದ್ಯತೆ ನೀಡುತ್ತಿದ್ದಾರೆ. ರಾಷ್ಟ್ರೀಯ ತಂಡ ಮತ್ತು ಐಪಿಎಲ್ ಎರಡೂ ಮುಖ್ಯ ಎಂದು ಹೇಳುತ್ತೇನೆ. ಕೇವಲ ಹಣಕ್ಕಾಗಿ ಐಪಿಎಲ್ ಆಡುವುದು ಸರಿಯಲ್ಲ. ಯಾವುದೇ ಆಟಗಾರ ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡಬೇಕು. ಆದರೆ ಕೆಲವು ಆಟಗಾರರಲ್ಲಿ ಆ ಭಾವನೆ ಇರುವುದಿಲ್ಲ. ಒಂದು ತಿಂಗಳ ಮುಂಚೆಯೇ ವಿಶ್ರಾಂತಿ ಪಡೆದು ಐಪಿಎಲ್ ಆಡಲು ತಯಾರಿ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಅಂತಾರಾಷ್ಟ್ರೀಯ ಪಂದ್ಯಗಳ ಜತೆಗೆ ಐಪಿಎಲ್‌ಗೂ ಸಮಾನ ಆದ್ಯತೆ ನೀಡಿದರೆ ಒಳ್ಳೆಯದು. ಐಪಿಎಲ್​ ಟೂರ್ನಿಯಲ್ಲೇ ಭಾಗವಹಿಸಬೇಡಿ ಎಂದೂ ನಾನು ಹೇಳುವುದಿಲ್ಲ. ಇದರ ಜೊತೆಗೆ ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

    2022ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗುಜರಾತ್ ಟೈಟನ್ಸ್‌ಗೆ ಟ್ರೋಫಿ ಗೆದ್ದು ಕೊಟ್ಟು ನಂತರದ ಆವೃತ್ತಿಯಲ್ಲಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದ ಹಾರ್ದಿಕ್ ಪಾಂಡ್ಯರನ್ನು 2024ರ ಐಪಿಎಲ್ ಟೂರ್ನಿ ನಿಮಿತ್ತ ಟ್ರೇಡ್ ಮಾಡಿಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕ್ಯಾಪ್ಟನ್ಸಿ ಪಟ್ಟ ನೀಡಿರುವುದರಿಂದ ಮುಂಬೈ ಇಂಡಿಯನ್ಸ್ ಕೆಲ ಅಭಿಮಾನಿಗಳಿಗೆ ಸಂತಸವಾಗಿದ್ದರೆ, ಇನ್ನು ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಐಪಿಎಲ್‌ 2024 ಟೂರ್ನಿಯ ಮೊದಲ ಚರಣದ 23 ಪಂದ್ಯಗಳು ಮಾರ್ಚ್‌ 22ರಿಂದ ಏಪ್ರಿಲ್‌ 7ರವರೆಗೆ ಆಯೋಜನೆ ಮಾಡಲಾಗಿದೆ. ಉದ್ಘಾನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಈ ಹೈ ವೋಲ್ಟೇಜ್ ಕದನಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

    ರನ್​ ಮೆಷಿನ್​ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರೋದು ಯಾವಾಗ?: ಫ್ರಾಂಚೈಸಿ ಕೊಟ್ಟ ಉತ್ತರ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts