More

    ರನ್​ ಮೆಷಿನ್​ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರೋದು ಯಾವಾಗ?: ಫ್ರಾಂಚೈಸಿ ಕೊಟ್ಟ ಉತ್ತರ ಹೀಗಿದೆ..

    ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಎಲ್ಲಾ ತಂಡಗಳು ಅಂತಿಮ ಸಿದ್ಧತೆಯತ್ತ ದೃಷ್ಟಿ ನೆಟ್ಟಿವೆ. ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್​ಗೆ ತೆರೆಳಿದ್ದರು. ಸದ್ಯ ಇಂಗ್ಲೆಂಡ್​​ನಲ್ಲಿರುವ ವಿರಾಟ್​ ಐಪಿಎಲ್​ ಆಡಲು ಭಾರತಕ್ಕೆ ಬರುವ ದಿನಾಂಕ ನಿಗದಿಯಾಗಿದೆ.

    ಇದನ್ನೂ ಓದಿ: ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ?

    ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಐದು ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ ಇದೇ ವರ್ಷ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದರಿಂದ, 2024ರ ಐಪಿಎಲ್ ಅನ್ನು ಆಡುವುದು ವಿರಾಟ್​ ಕೊಹ್ಲಿಗೆ ನಿರ್ಣಾಯಕವಾಗಿದೆ.

    ಈಗಾಗಲೇ ಆರ್​ಸಿಬಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್, ಅನುಭವಿ ಆಟಗಾರ ದಿನೇಶ್​ ಕಾರ್ತಿಕ್​, ವೆಸ್ಟ್​ ಇಂಡೀಸ್ ಆಟಗಾರ ಅಲ್ಜಾರಿ ಜೋಸೆಫ್ ಸೇರಿ ತಂಡದ ಬಹುತೇಕ ಎಲ್ಲ ಆಟಗಾರರು ಕೂಡ ಆರ್​ಸಿಬಿ ಕ್ಯಾಂಪ್​ ಸೇರಿದ್ದಾರೆ. ಈಗಾಗಲೇ ಪ್ರಾಕ್ಟೀಸ್​ ಕೂಡ ಆರಂಭಿಸಿದ್ದಾರೆ. ವಿರಾಟ್​ ಮಾತ್ರ ತಂಡದ ಕ್ಯಾಂಪ್ ಇದುವರೆಗೂ​ ಸೇರಿಲ್ಲ. ಇದರಿಂದ ಆತಂಕಗೊಂಡಿರುವ ಕೊಹ್ಲಿ ಅಭಿಮಾನಿಗಳು ಯಾವಾಗ ತಂಡವನ್ನು ಸೇರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದರು, ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

    ರನ್​ ಮೆಷಿನ್​ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರೋದು ಯಾವಾಗ?: ಫ್ರಾಂಚೈಸಿ ಕೊಟ್ಟ ಉತ್ತರ ಹೀಗಿದೆ..

    ವಿರಾಟ್​ ಕೊಹ್ಲಿ ಮಾರ್ಚ್​ 17ರಂದು ಆರ್​ಸಿಬಿ ಕ್ಯಾಂಪ್​ ಸೇರಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ. ಮಾರ್ಚ್​ 19ರಂದು ನಡೆಯುವ ‘ಆರ್​ಸಿಬಿ ಅನ್​ಬಾಕ್ಸ್​’ ಕಾರ್ಯಕ್ರಮದಲ್ಲಿಯೂ ವಿರಾಟ್ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಐಪಿಎಲ್‌ 2024 ಟೂರ್ನಿಯ ಮೊದಲ ಚರಣದ 23 ಪಂದ್ಯಗಳು ಮಾರ್ಚ್‌ 22ರಿಂದ ಏಪ್ರಿಲ್‌ 7ರವರೆಗೆ ಆಯೋಜನೆ ಮಾಡಲಾಗಿದೆ. ಉದ್ಘಾನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಈ ಹೈ ವೋಲ್ಟೇಜ್ ಕದನಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

    IPL 2024: ದೆಹಲಿ ಕ್ಯಾಪಿಟಲ್ಸ್​ ತಂಡಕ್ಕೆ ನೂತನ ನಾಯಕನ ಆಯ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts