ನವದೆಹಲಿ: ವಿಶ್ವ ಹುಲಿ ದಿನಾಚರಣೆಯಂದು ಕರ್ನಾಟಕಕ್ಕೆ ಮತ್ತೊಮ್ಮೆ ನಿರಾಸೆಯಾಗಿದೆ. 2022ರ ರಾಜ್ಯವಾರು ಹುಲಿ ಗಣತಿ ಬಿಡುಗಡೆಯಾಗಿದ್ದು, ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದೆ.
ವಿಶ್ವ ಹುಲಿ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರದಿಂದ ವರದಿ ಬಿಡುಗಡೆಯಾಗಿದ್ದು, ದೇಶದಲ್ಲಿ 3682 ಹುಲಿಗಳಿವೆ ಎಂದು ತಿಳಿದು ಬಂದಿದೆ. ಹುಲಿ ಗಣತೊಯ ವರದಿ ಪ್ರಕಾರ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡರೆ, ಕರ್ನಾಟಕ ಹಾಗೂ ಉತ್ತರಾಖಂಡ ನಂತರದ ಸ್ಥಾನದಲ್ಲಿವೆ.
ಇದನ್ನೂ ಓದಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ನೀರು ಪಾಲು
2018ರ ಹುಲಿ ಗಣತಿ ವರದಿ ಪ್ರಕಾರ ಮಧ್ಯಪ್ರದೇಶ ಹಾಗೂ ಕರ್ನಾಟಕ ನಡುವೆ ಎರಡು ಹುಲಿಗಳ ವ್ಯತ್ಯಾಸವಿತ್ತು. ಆದರೆ, ಈ ಬಾರಿ ಬಿಡುಗಡೆಯಾಗಿರುವ ವರದಿ ಪ್ರಕಾರ ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವೆ 222 ಹುಲಿಗಳ ವ್ಯತ್ಯಾಸವಿರುವುದು ಕಂಡು ಬಂದಿದೆ.
785 ಹುಲಿಗಳನ್ನು ಹೊಂದುವ ಮೂಲಕ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 563 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, 560 ಹುಲಿಗಳನ್ನು ಹೊಂದುವ ಮೂಲಕ ಉತ್ತರಾಖಂಡ ಮೂರನೇ ಸ್ಥಾನ ಪಡೆದುಕೊಂಡಿದೆ.