ನ್ಯೂಸ್

ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ: ಅತಿಥಿಗಳ ಭೋಜನಕೂಟಕ್ಕೂ, ಗುಜರಾತ್​ಗೂ ಇದೆ ಈ ವಿಶೇಷ ವೈನ್​ ನಂಟು!

ವಾಷಿಂಗ್ಟನ್​: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಶ್ವೇತಭವನದಲ್ಲಿ ವಿಶೇಷವಾದ ಭೋಜನಕೂಟವನ್ನು ಏರ್ಪಡಿಸಲಾಗಿದ್ದು ರಾಗಿ , ಸುಟ್ಟ ಮೆಕ್ಕೆಜೋಳದ ಸಲಾಡ್, ಕಲ್ಲಂಗಡಿ ಮತ್ತು ಆವಕಾಡೊ ಸಾಸ್‌ನಂತಹ ವಸ್ತುಗಳನ್ನು ಒಳಗೊಂಡಿರುವ ಮೆನು ಕೆಂಪು ವೈನ್​ನ್ನು ಸಹ ಒಳಗೊಂಡಿದೆ.

ಈ ಕೆಂಪು ವೈನ್​ನ ವಿಶೇಷವೆನೆಂದರೆ ಇದು ಗುಜರಾತ್​ ಮೂಲದ ವ್ಯಕ್ತಿಯೊಬ್ಬರ ಒಡೆತನದ ಕಂಪನಿಯ ವೈನ್​ ಆಗಿದ್ದು, ಭೋಜನಕೂಟದಲ್ಲಿ ಭಾಗಿಯಾಗಲಿರುವ ಅತಿಥಿಗಳಿಗೆ ಪಟೇಲ್ ರೆಡ್ ಬ್ಲೆಂಡ್-2019 ವೈನ್​ನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಅಂತ್ಯ: ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ, ಇಲ್ಲಿದೆ ಪೂರ್ಣ ಮಾಹಿತಿ…

ರಾಜ್​ ಪಟೇಲ್​ ಒಡೆತನದ ನಾಪಾ ವ್ಯಾಲಿ ವೈನರಿಯಿಂದ ತಯಾರಿಸಲಾಗಿರುವ ಈ ವಿಶೇಷವಾದ ವೈನ್​ ಅಮೇರಿಕಾದಲ್ಲಿಯೇ ತಯಾರಾಗಿದ್ದು, ಕಂಪನಿಯು ವರ್ಷಕ್ಕೆ ಕೇವಲ ಬೆರಳಣಿಕೆಯಷ್ಟು ಮಾತ್ರ ವೈನ್​ನ್ನು​ ಉತ್ಪಾದನೆ ಮಾಡುತ್ತದೆ.

ಉತ್ತಮ ರುಚಿಯ ಜೊತೆ ದೀರ್ಘಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನು ಹೊಂದಿರುವ ಈ ವೈನ್​​ಗೆ ಅಲ್ಲಿನ ಭಾರತೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೋಜನಕೂಟಕ್ಕಾಗಿ ಅಮೇರಿಕಾದ ಶ್ವೇತಭವನವು ಪಟೇಲ್​ ಕಂಪನಿಗೆ ವಿಶೇಷ ವೈನ್​ನ್ನು ನೀಡುವಂತೆ ಪತ್ರ ಬರೆದಿತ್ತು. ಕಂಪನಿಯು ಕೂಡ ಮನವಿ ಮೇರೆಗೆ ಈ ವೈನ್​ನ್ನು ಒದಗಿಸಿದೆ.

ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರ ಭವ್ಯ ಸ್ವಾಗತದ ಕುರಿತು ಮಾತನಾಡಿದ ಪಟೇಲ್, ಅಮೆರಿಕದಲ್ಲಿರುವ ಭಾರತೀಯರ ದೃಷ್ಟಿಕೋನದಲ್ಲಿ ಮೋದಿಯವರು ಭಾರತದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಮಧ್ಯಮ ವರ್ಗದ ಜನರಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)