Short Circuit : ಶಾರ್ಟ್ ಸರ್ಕ್ಯೂಟ್... ಇತ್ತೀಚೆಗೆ ಈ ಪದವನ್ನು ನಾವು ಹೆಚ್ಚಾಗಿ ಕೇಳುತ್ತಿದ್ದೇವೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗಳು, ವಾಹನಗಳು, ಕಚೇರಿಗಳು ಇತ್ಯಾದಿಗಳು ಸುಟ್ಟುಹೋಗಿರುವ ಅನೇಕ ವರದಿಗಳನ್ನು ನಾವು ನೋಡಿದ್ದೇವೆ. ಆದರೆ, ಇದು ಏಕೆ ಸಂಭವಿಸುತ್ತದೆ ಎಂದು ಹೆಚ್ಚಿನ ಮಂದಿಗೆ ತಿಳಿದೇ ಇಲ್ಲ. ನಿಮ್ಮ ಮನೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚಾದಾಗ ಈ ಅಪಾಯ ಸಂಭವಿಸುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.
ನಾವು ಪ್ರತಿದಿನ ಮನೆಯಲ್ಲಿ ಬಳಸುವ ಎಲೆಕ್ಟ್ರಿಕ್ ಸಾಧನಗಳಲ್ಲಿ, ಆಪರೇಟಿಂಗ್ ಕರೆಂಟ್ ನಿರೀಕ್ಷಿತ ಆಂಪಿಯರ್‌ಗಳನ್ನು ಮೀರಿದರೆ, ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇರುತ್ತದೆ.
ಈ ಶಾರ್ಟ್ ಸರ್ಕ್ಯೂಟ್ ಅನೇಕ ವಿದ್ಯುತ್ ಅಪಘಾತಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ವಿದ್ಯುತ್ ವಿಷಯಕ್ಕೆ ಬಂದಾಗ ನಾವು ಯಾವುದೇ ತಪ್ಪುಗಳನ್ನು ಮಾಡಬಾರದು. ಇಲ್ಲದಿದ್ದರೆ, ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ, ಶಾರ್ಟ್ ಸರ್ಕ್ಯೂಟ್ ತಪ್ಪಿಸಲು ಏನು ಮಾಡಬೇಕೆಂದು ನಾವೀಗ ತಿಳಿದುಕೊಳ್ಳೋಣ.
ವಿದ್ಯುತ್ ಅನ್ನು ಸಾಮಾನ್ಯವಾಗಿ ಆಂಪಿಯರ್‌ಗಳಲ್ಲಿ ಅಳೆಯಲಾಗುತ್ತದೆ ಎಂಬುದು ತಿಳಿದಿರುವ ಸತ್ಯ. ಅನೇಕ ಸಾಧನಗಳ ಮೇಲೆ ಅದರ ಕಾರ್ಯಾಚರಣಾ ವಿದ್ಯುತ್ ಪ್ರವಾಹವನ್ನು ಬರೆಯಲಾಗಿರುತ್ತದೆ. ನಿರೀಕ್ಷಿತ ಸಾಮಾರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್ ರವಾನೆಯಾದರೆ, ಅವು ಹೆಚ್ಚು ಬಿಸಿಯಾಗಬಹುದು ಅಥವಾ ಸುಡಬಹುದು.
ಇದನ್ನೂ ಓದಿ: ಈ 3 ರಾಶಿಯವರು ಹುಲಿಯಂತಹ ಗುಣಗಳನ್ನು ಹೊಂದಿರುತ್ತಾರಂತೆ… ಅದೇ ಅವರ ಯಶಸ್ಸಿಗೆ ಕಾರಣವಂತೆ! Zodiac Signs
ಉದಾಹರಣೆಗೆ, ಗೀಸರ್‌ನ ಕಾರ್ಯಾಚರಣಾ ವಿದ್ಯುತ್ ಪ್ರವಾಹವು 15 ಆಂಪಿಯರ್‌ಗಳು. ಒಂದು ವೇಳೆ ಅದನ್ನು ಮೀರಿದರೆ, ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತದೆ.
ನೀವು ಒಂದು ವಿದ್ಯುತ್ ಸಾಕೆಟ್‌ಗೆ ಬಹು ಪ್ಲಗ್‌ಗಳನ್ನು ಪ್ಲಗ್ ಮಾಡಿ ಹಲವು ರೀತಿಯ ವಿದ್ಯುತ್ ಉಪಕರಣಗಳನ್ನು ಏಕಕಾಲದಲ್ಲಿ ಬಳಸಿದರೆ, ಕರೆಂಟ್ ಲೋಡ್ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಇದು ಕೂಡ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು.
ನೀವು ಮಾಡಬೇಕಾದ ಕೆಲಸ ಏನೆಂದರೆ, ಮನೆಯಲ್ಲಿರುವ ಗೃಹೋಪಯೋಗಿ ಉಪಕರಣಗಳನ್ನು ವಿಭಿನ್ನ ಸ್ವಿಚ್‌ಗಳ ಮೂಲಕ ಸಂಪರ್ಕಿಸುವುದು ಮತ್ತು ಬಳಸುವುದು ಉತ್ತಮ. ಆಗ ಮಾತ್ರ ನೀವು ಈ ಅಪಾಯದಿಂದ ಹೊರಬರಬಹುದು. ಇಲ್ಲದಿದ್ದರೆ, ನೀವು ನಿಮ್ಮ ಸ್ವಂತ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತೀರಿ. ಹೀಗಾಗಿ, ಜಾಗರೂಕರಾಗಿರಿ. (ಏಜೆನ್ಸೀಸ್)