ನ್ಯೂಸ್

ಮುಂದಿನ ಚೀಫ್ ಮಿನಿಸ್ಟರ್​ ಅಂತ ಹೇಳ್ಬೇಡಿ ಎಂದು ಶಾಸಕರಿಗೆ ಮನವಿ ಮಾಡ್ತೀನಿ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನಡುವೆ ಯಾರು ಸಿಎಂ ಪದವಿಗೆ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ. ಈ ಮಧ್ಯೆ ಸಿಎಂ ಯಾರು ಅನ್ನೋದನ್ನ ಹೈಕಮಾಂಡ್​ ನಿರ್ಧಾರ ಮಾಡುತ್ತೆ. ನನಗೆ ಸಿಎಂ ಆಗೋಕೆ ಅರ್ಜೆಂಟಿಲ್ಲ ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ನಾನು ಯಾವುದಕ್ಕೂ ರಿಯಾಕ್ಟ್ ಮಾಡಲ್ಲ ಎಂದರು.

"ನಾನು ಯಾವತ್ತೂ ಮುಖ್ಯಮಂತ್ರಿ ಆಗಬೇಕು ಅಂತ ಹೇಳಲ್ಲ. ಶಾಸಕರು ಹೇಳ್ತಿದ್ದಾರೆ. ಅವರಿಗೆ ಹಾಗೆ ಹೇಳಬೇಡಿ ಅಂತ ಮನವಿ ಮಾಡ್ತೀನಿ. ಮುಂದಿನ ಚೀಫ್ ಮಿನಿಸ್ಟರ್ ಎಂದು ಹೇಳಕ್ಕೆ ಹೋಗಬೇಡಿ ಎಂದು ಶಾಸಕರಿಗೆ ಮನವಿ ಮಾಡ್ತೀನಿ" ಎಂದು ಸಿದ್ದರಾಮಯ್ಯ ಹೇಳಿದರು.