ನ್ಯೂಸ್

2024ಕ್ಕೆ​ ರಿಲೀಸ್​ ಆಗಲಿದೆಯೇ 'ಸಲಾರ್'?; ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಮತ್ತು ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿಬರಲು ಸಜ್ಜಾಗಿರುವ ಬಹುನಿರೀಕ್ಷಿತ 'ಸಲಾರ್- ಸೀಜ್​ ಫೈರ್'​ ರಿಲೀಸ್​ ದಿನಾಂಕದಲ್ಲಿ ಇದೀಗ ಸಾಕಷ್ಟು ಗೊಂದಲ ಎದುರಾಗಿದ್ದು, ಈ ಕುರಿತು ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ.

ಈ ಹಿಂದೆ ಹೊಂಬಾಳೆ ಫಿಲಂಸ್​ ತಿಳಿಸಿದಂತೆ ಚಿತ್ರವು ಇದೇ ಸೆಪ್ಟೆಂಬರ್ 28 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿತ್ತು. ಆದ್ರೆ, ಚಿತ್ರದ ವಿಎಫ್​ಎಕ್ಸ್​ ಕೆಲಸಗಳಲ್ಲಿ ಒಂದಷ್ಟು ಬದಲಾವಣೆಯ ಅಗತ್ಯವಿದೆ ಎಂದು ನಿರ್ಧರಿಸಿದ ಪ್ರಶಾಂತ್​, ರಿಲೀಸ್​ ದಿನಾಂಕವನ್ನು ಮುಂದೂಡಿದ್ದರು.

ತದನಂತರ ಸಾಮಾಜಿಕ ಜಾಲತಾಣಗಳಲ್ಲಿ 'ಸಲಾರ್'​ 2024ಕ್ಕೆ ಬಿಡುಗಡೆಯಾಗಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿತು. ಪ್ರಭಾಸ್​ ನಟನೆಯ ಈ ಸಿನಿಮಾವನ್ನು ಚಿತ್ರತಂಡ ಮುಂದಿನ ವರ್ಷಕ್ಕೆ ರಿಲೀಸ್​ ಮಾಡಲಿದೆಯೇ ಎಂಬ ಗೊಂದಲಗಳು ಪ್ರಭಾಸ್​ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದೀಗ ಈ ಕುರಿತು ಹೊಸ ಅಪ್ಡೇಟ್​ವೊಂದು ರಿಲೀಸ್​ ಡೇಟ್​ ಬಗ್ಗೆಯಿರುವ ಗೊಂದಲಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಶಾಂತ್ ನೀಲ್ ಪತ್ನಿ ಲಿಖಿತ ರೆಡ್ಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಡಿದ ಪೋಸ್ಟ್​ವೊಂದು​ ಚಿತ್ರವು ಡಿಸೆಂಬರ್ 22, 2023 ರಂದು ಬಿಡುಗಡೆಗೊಳ್ಳಲಿದೆ ಎಂಬ ಸುಳಿವನ್ನು ನೀಡಿದೆ. ಇದರ ಬೆನ್ನಲ್ಲೇ ಮತ್ತೊಂದು ವರದಿ, 'ಸಲಾರ್'​ ಇದೇ ಸೆಪ್ಟೆಂಬರ್ 29 ರಂದು ರಿಲೀಸ್​ ಆಗಲು ಸಜ್ಜಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ ಎಂದು ತಿಳಿಸಿದೆ.

ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರ ತಾರಾಗಣವಿದೆ. ಪ್ಯಾನ್ ಇಂಡಿಯಾ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದೆ,(ಏಜೆನ್ಸೀಸ್).