Wife Murder: ಕಳೆದ ಆರು ತಿಂಗಳಲ್ಲಿ ಮಹಿಳೆಯರು ತಮ್ಮ ಗಂಡನನ್ನು ಭೀಕರ, ಬರ್ಬರವಾಗಿ ಪ್ರಿಯಕರನ ಜತೆಗೂಡಿ ಕೊಲೆಗೈಯುವ ಪ್ರಕರಣಗಳು ದೇಶದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿವೆ. ಇದೇ ಸಮಯದಲ್ಲಿ ಗಂಡ, ತನ್ನ ಪತ್ನಿಯನ್ನು ಹತ್ಯೆ ಮಾಡುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಈ ಸಾಲಿಗೆ ಇಲ್ಲೊಂದು ಘಟನೆ ಸೇರಿದೆ.
ಇದನ್ನೂ ಓದಿ: ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಗಳ ಬಳಿ ದುಡ್ಡೇ ಇಲ್ವಂತೆ… ಅಪ್ಪನ ಋಣ ಬೇಕಿಲ್ಲ ಎಂದ ಪುತ್ರಿ! Elon Musk
ಮೃತ ಮಹಿಳೆಯನ್ನು ಕುಸುಮ ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೇವ್ ಮತ್ತು ಕುಸುಮ ಜೋಡಿಗೆ ಒಂದು ವರ್ಷದ ಮಗುವಿದೆ. ತನ್ನ ಗಂಡನಿಗೆ ತಿಳಿಯದೆ ಆಗಾಗ್ಗೆ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದ ಕುಸುಮ ಮೇಲೆ ಪತಿಗೆ ಅನುಮಾನ ಮೂಡಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಬುಧವಾರ (ಸೆ.24) ಕೂಡ ಇದೇ ವಿಷಯಕ್ಕೆ ದಂಪತಿ ಮಧ್ಯೆ ಜಟಾಪಟಿ ನಡೆದಿದ್ದು, ಯಾರೊಂದಿಗೆ ಮಾತನಾಡುತ್ತಿದ್ದೆ ಎಂದು ಪತಿ ಕೇಳಿದ್ದ. ಇದಕ್ಕೆ ಉತ್ತರಿಸದ ಪತ್ನಿಯನ್ನು ದೇವ್ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ವರದಿಯಾಗಿದೆ. ಕೊಲೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಸುಮ ಹೆತ್ತವರು ಮತ್ತು ಸಂಬಂಧಿಕರು ಆಗ್ರಹಿಸಿದ್ದಾರೆ,(ಏಜೆನ್ಸೀಸ್).