ಹೈದರಾಬಾದ್: ರಾತ್ರಿ 11 ಆದರೂ ಇನ್ನು ಯಾರ ಜತೆ ಪೋನ್ನಲ್ಲಿ(Phone) ಮತಾನಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಕ್ಕೆ ಗಂಡನನ್ನೇ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಇಲ್ಲಿನ ವಿಕಾರಾಬಾದ್ನಲ್ಲಿ ಸೋಮವಾರ ನಡೆದಿದೆ. ಅಲ್ಲದೆ, ಬುದ್ಧಿ ಹೇಳಬೇಕಿದ್ದ ಆಕೆಯ ತಂದಯೇ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ.
ಇದನ್ನೂ ಓದಿ:ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ವಿರೋಧ, ಮೋದಿ-ಟ್ರಂಪ್ ಪ್ರತಿಕೃತಿ ದಹಿಸಿ ಹೋರಾಟ, ರಾಜ್ಯ ರೈತ ಸಂಘದಿಂದ ಅಭಿಯಾನ
ಮಲ್ಕಾಪುರದ ರೆಡ್ಡಿಪಲ್ಲಿ ವೆಂಕಟೇಶ್ (33) ಮೃತ. ಮೃತನ ಪುತ್ರರು ತಮ್ಮ ತಂದೆಯನ್ನು ತಾಯಿ ಮತ್ತು ಅಜ್ಜ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಡಿಎಸ್ಪಿಗೆ ತಿಳಿಸಿದ್ದಾರೆ. ಇದರೊಂದಿಗೆಆರೋಪಿಗಳನ್ನು ಬಂಧಿಸಿ ರಿಮಾಂಡೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಂಕಟೇಶ್, ಅದೇ ಮಂಡಲದ ಕೋಟ್ಲಾಪುರ ಗ್ರಾಮದ ಜಯಶ್ರೀ ಅವರನ್ನು 11 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಈಶ್ವರ್ಪ್ರಸಾದ್ ಮತ್ತು ಸುಕುಮಾರ್ ಎಂಬ ಮಕ್ಕಳಿದ್ದಾರೆ. ಕೆಲ ಭಿನ್ನಭಿಪ್ರಾಯಗಳಿಂದ 4 ವರ್ಷಗಳಿಂದೆಯೇ ಗಂಡ-ಹೆಂಡತಿ ದೂರವಾಗಿದ್ದರು. ಇತ್ತೀಚಿಗೆ ಎರಡು ಕುಟುಂಬಗಳ ಸಂಧಾನದಿಂದ ಮತ್ತೆ ಒಂದಾಗಿದ್ದರು. ಭಾನುವಾರ ರಾತ್ರಿ ಬೋನಾಲ್ ಹಬ್ಬ ಕಾರಣದಿಂದ ಹೊರಗೆ ಹೋಗಿದ್ದ ವೆಂಕಟೇಶ್, 11 ಗಂಟೆ ಮೇಲೆ ಮನೆಗೆ ಬಂದಿದ್ದಾರೆ. ಪತ್ನಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಗಮನಿಸಿದ ವೆಂಕಟೇಶ್ ಪತ್ನಿ ಜಯಶ್ರೀಗೆ ಬುದ್ಧಿವಾದ ಹೇಳಿದ್ದಾನೆ.
ಇದರಿಂದ ಕೋಪಗೊಂಡ ಜಯಶ್ರಿ, ತಡರಾತ್ರಿ ವೆಂಕಟೇಶ್ ಮಲಗಿರುವಾಗ ಕತ್ತು ಹಿಸುಕಿ ಕೊಂದಿದ್ದಾಳೆ. ಇದನ್ನು ನೋಡಿದಮ ಮಕ್ಕಳು ವೆಂಕಟೇಶ್ ಸಂಬಂಧಿಕರಿಗೆ ತಿಳಿಸಿದ್ದಾರೆ. ಇದರಿಂದ ದೂರು ನೀಡಿದ ಹಿನ್ನೆಲೆ ತನಿಖೆ ಕೈಗೊಂಡು ವಿಚಾರಣೆ ಮಾಡಿದ್ದಾರೆ.(ಏಜೆನ್ಸೀಸ್)