Husband Death: ಪತ್ನಿಯ ದೌರ್ಜನ್ಯ, ಮಾನಸಿಕ ಹಿಂಸೆ ತಾಳಲಾರದ ಪತಿರಾಯ, ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಸಂಗಾರೆಡ್ಡಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಇಸ್ರೇಲ್ ದಾಳಿ ಬೆನ್ನಲ್ಲೇ ವಾಯುಪ್ರದೇಶ ನಿರ್ಬಂಧಿಸಿದ ಇರಾನ್: 16 Air India ವಿಮಾನಗಳ ಮಾರ್ಗ ಬದಲಾವಣೆ! Air India flights
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಪುಲ್ಕಲ್ ಮಂಡಲದ ಕಪ್ಪರಿತಲ ಮೂಲದ ನವೀನ್ ಕುಮಾರ್ (29) ಸಾವಿಗೀಡಾದ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಕೆಲಸ ಮಾಡುತ್ತಿದ್ದ ನವೀನ್, ಮೂರು ವರ್ಷಗಳ ಹಿಂದೆಯಷ್ಟೇ ಸ್ವರೂಪ ರಾಣಿಯನ್ನು ಮದುವೆ ಆಗಿದ್ದ. ಸುಖಕರ ಸಂಸಾರ ನಮ್ಮದಾಗಲಿದೆ ಎಂದು ಭಾವಿಸಿ, ನೂರಾರು ಕನಸು ಕಂಡವನ ಬಾಳು ಪತ್ನಿಯಿಂದಲೇ ಅಂತ್ಯಗೊಂಡಿದೆ.
ಮೂರು ವರ್ಷದಿಂದ ಮಕ್ಕಳಿಲ್ಲ ಎಂದು ಕೊರಗಿನಿಂದಲೇ ಜೀವನ ಸಾಗಿಸುತ್ತಿದ್ದ ದಂಪತಿ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ಪದೇ ಪದೇ ಜಗಳಗಳು ನಡೆಯುತ್ತಿತ್ತು. ಈ ವಿಚಾರ ತಾರಕಕ್ಕೇರಿದ ಬೆನ್ನಲ್ಲೇ ಹಿರಿಯರ ಸಮ್ಮುಖದಲ್ಲಿ ಇಬ್ಬರಿಗೂ ಪಂಚಾಯತಿ ನಡೆಸಿ, ಬುದ್ಧಿ ಮಾತುಗಳನ್ನು ಹೇಳಿ ಕಳಿಸಲಾಗಿತ್ತು. ಇಷ್ಟಾದರೂ ಇಬ್ಬರ ನಡುವಿನ ವೈಮನಸ್ಸು ಅಂತ್ಯ ಕಾಣಲಿಲ್ಲ. ದಂಪತಿ ನಡುವೆ ಮತ್ತೆ ಜಟಾಪಟಿ ಭುಗಿಲೆದ್ದಿತು.
ಇದನ್ನೂ ಓದಿ: ‘ಚಿನ್ನ’ ಚಿಂತೆಗೆ ದೂಡಿತು ‘ಇನ್ನ’! ಒಂದು ಲಕ್ಷ ರೂ. ಗಡಿದಾಟಿದ ಗೋಲ್ಡ್ ಬೆಲೆ; ಹೀಗಿದೆ ಇಂದಿನ ದರ ಪಟ್ಟಿ | Gold Rates
ಸ್ವರೂಪ ರಾಣಿ ಬೈಗುಳ, ಛೀಮಾರಿ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತಿದ್ದ ನವೀನ್, ಅದಾಗಲೇ ಸಾಯುವ ಹಂತ ತಲುಪಿದ್ದ. ಇದೆಲ್ಲದರ ನಡುವೆಯೇ ಈ ವರ್ಷದ ಜೂನ್ 6ರಂದು ಗಂಡನ ಮನೆ ತೊರೆದು ತನ್ನ ತವರಿಗೆ ಹೋಗಿದ್ದ ಸ್ವರೂಪ, ದೂರ ಹೋದ ಬಳಿಕ ಹಲವು ಬಾರಿ ಗಂಡನಿಗೆ ದೂರವಾಣಿ ಕರೆ ಮಾಡಿದ್ದಳು. ಆದ್ರೆ, ಇದ್ಯಾವುದಕ್ಕೂ ನವೀನ್ ಪ್ರತಿಕ್ರಿಯಿಸಲಿಲ್ಲ. ಕಡೆಗೆ ಜೂ.10ರ ಸಂಜೆ 6 ಗಂಟೆಗೆ ತನ್ನ ಚಿಕ್ಕಪ್ಪನಿಗೆ ಘಟನೆ ವಿವರಿಸಿದ ಸ್ವರೂಪ, ಪತಿ ಬಗ್ಗೆ ಮಾಹಿತಿ ಪಡೆಯುವಂತೆ ತಿಳಿಸಿದ್ದಳು.
ಈ ವೇಳೆ ನವೀನ್ಗಾಗಿ ಹುಡುಕಾಟ ನಡೆಸಿದ ಮನೆಯವರು, ಆತನ ರೂಮ್ ಬಾಗಿಲು ಒಳಗಿನಿಂದ ಲಾಕ್ ಆಗಿದ್ದನ್ನು ಗಮನಿಸಿದ್ದಾರೆ. ಬಾಗಿಲು ಹೊಡೆದು ಒಳ ಪ್ರವೇಶಿಸಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನವೀನ್ ಮೃತದೇಹ ಪತ್ತೆಯಾಗಿದೆ. ಇದೇ ಸಮಯದಲ್ಲಿ ಪೊಲೀಸರಿಗೆ ಆತನ ರೂಮ್ನಲ್ಲಿ ಡೆತ್ನೋಟ್ ಪತ್ರ ಸಿಕ್ಕಿದ್ದು, ಅದರಲ್ಲಿ 'ಪತ್ನಿಯ ಮಾನಸಿಕ ಕಿರುಕುಳ ಮತ್ತು ಸಾಲಬಾಧೆಯೇ ನನ್ನ ಸಾವಿಗೆ ಕಾರಣ' ಎಂದು ನವೀನ್ ಬರೆದಿರುವುದು ದೃಢವಾಗಿದೆ.
ಇದನ್ನೂ ಓದಿ: ಬುಕರ್ ಪ್ರಶಸ್ತಿ ಆತ್ಮವಿಮರ್ಶೆಗೆ ಪ್ರೇರಣೆಯಾಗಲಿ; ಬಾನು ಮುಷ್ತಾಕ್ಗೆ ನಾಗರಿಕ ಸನ್ಮಾನದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಆಶಯ
ಮೃತ ನವೀನ್ ತಂದೆ ಮಲ್ಲೇಶಂ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).