ನ್ಯೂಸ್

VIDEO| ಪತ್ನಿಯ ಜುಟ್ಟು ಹಿಡಿದು ಊರೆಲ್ಲಾ ಎಳೆದಾಡಿ ಥಳಿಸಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?

ಪಟನಾ: ಮಹಿಳೆಯೊಬ್ಬಳನ್ನು ಆಕೆಯ ಪತಿರಾಯ ಜುಟ್ಟು ಹಿಡಿದು ಊರೆಲ್ಲಾ ಎಳೆದಾಡಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಘಟನೆಯು ಬಿಹಾರದ ವೈಶಾಲಿ ಜಿಲ್ಲೆಯ ಹುಸೈನಾ ಖುರ್ದ್​ ಗ್ರಾಮದಲ್ಲಿ ಜೂನ್​ 24ರಂದು ನಡೆದಿದ್ದು, ವಿಡಿಯೋ ವೈರಲ್​ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಜೂನ್​ 25ಕ್ಕೆ ನಿಗದಿಯಾಗಿದ್ದ ತನ್ನ ಪತಿಯ ಎರಡನೇ ಮದುವೆ ವಿಚಾರ ಮುಂಚೆಯೇ ಮಹಿಳೆಗೆ ತಿಳಿಯುತ್ತದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಈಗಾಗಲೇ ತನ್ನ ಪತಿಗೆ ಅಧಿಕೃತವಾಗಿ ಮದುವೆಯಾಗಿದೆ ಎಂದು ಎಲ್ಲರ ಎದುರು ಹೇಳುತ್ತಾಳೆ. ಈ ವಿಚಾರ ವಧುವಿನ ಮನೆಯವರಿಗೆ ತಿಳಿದು ಮದುವೆಯನ್ನು ರದ್ದು ಮಾಡುತ್ತಾರೆ.

ಇದರಿಂದ ಕುಪಿತಗೊಂಡ ಪತಿರಾಯ ಮಹಿಳೆಯನ್ನು ಆಟೋ ರಿಕ್ಷಾದಿಂದ ಹೊರಗೆಳೆದು ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಬಳಿಕ ಆಕೆಯ ಜುಟ್ಟು ಹಿಡಿದು ಊರೆಲ್ಲ ಎಳೆದಾಡಿ ಥಳಿಸುತ್ತಾನೆ. ಈ ವೇಳೆ ಪಾಪಿ ಪತಿಯ ನೆರವಿಗೆ ಕೆಲ ಸ್ಥಳೀಯರು ಸಹ ಸಾಥ್​ ನೀಡಿ ಆಕೆಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕುತ್ತಾರೆ.

ಸಂತ್ರಸ್ತೆ ಮಹಿಳೆಯನ್ನು ಮುಜಾಫರ್​ ನಗರದವಳೆಂದು ಗುರುತಿಸಲಾಗಿದೆ. ಆಕೆಯ ಮೇಲೆ ಹಲ್ಲೆ ಮಾಡಿದವರ ಗುರುತಿನ್ನು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)