ಹೆಂಡತಿಯನ್ನು ಬಾಡಿಗೆಗೆ ನೀಡುವುದಾಗಿ ಹೇಳಿದ ಪತಿರಾಯ
- ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವೀಕ್ಷಣೆ ಪಡೆಯಬೇಕೆಂಬ ಹಂಬಲ
- ಹೆಂಡತಿನ್ನೇ ಬಾಡಿಗೆಗೆ ನೀಡುವುದಾಗಿ ಹೇಳಿದ ಪತಿ
- ವೈರಲ್ ವಿಡಿಯೋಗೆ ನೆಟ್ಟಿಗರಿಂದ ಮಂಗಳಾರತಿ
Social Media: ಪ್ರಪಂಚದಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಲು ಅಥವಾ ತಮ್ಮಲ್ಲಿರುವ ಪ್ರತಿಭೆಗಳನ್ನು ಜನರಿಗೆ ತಲುಪಿಸುವ ವೇದಿಕೆಯಾಗಿ ಈ ಸಾಮಾಜಿಕ ಜಾಲತಾಣ ಅಥವಾ ಸೋಶಿಯಲ್ ಮೀಡಿಯಾ (Social Media) ಹುಟ್ಟಿಕೊಂಡಿತು. ಆದರೆ ಇವತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆಗಳಿಗಿಂತ ಅಶ್ಲೀಲ ಸಾಹಿತ್ಯ, ವಿಡಿಯೋ ಅಥವಾ ಹಾಸ್ಯದ ಹೆಸರಿನಲ್ಲಿ ಸೊಂಟದ ಕೆಳಗಿನ ಪದಗಳ ಬಳಕೆಯ ಕಂಟೆಂಟ್ಗಳೇ ಲಕ್ಷಾಂತರ ಜನರನ್ನು ತಲುಪುತ್ತಿದೆ.
ಇಂಹತದ್ದೆ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ವಿಡಿಯೋವೊಂದರಲ್ಲಿ ಗಂಡ ತನ್ನ ಹೆಂಡತಿನ್ನು ಬಾಡಿಗೆಗೆ ನೀಡುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.
ವಿಡಿಯೋನಲ್ಲಿ ಏನಿದೆ?
ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಒಬ್ಬ ವ್ಯಕ್ತಿಯು ನೋಡಿ.. ಅಣ್ಣ-ತಮ್ಮಂದಿರೆ, ಇವಳು ನನ್ನ ಹೆಂಡತಿ, ಈಗಿನ ಕಾಲದಲ್ಲಿ ಎಲ್ಲಾ ವಸ್ತುಗಳ ಬೆಲೆಯು ಹೆಚ್ಚಾಗಿದೆ, ಆದರೆ ನಾನು ಆರ್ಥಿಕವಾಗಿ ಬಡನಿದ್ದೇನೆ, ಹೀಗಾಗಿ ನನ್ನ ಹೆಂಡತಿಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನಾನು ಇವಳನ್ನು ಬಾಡಿಗೆಗೆ ಇಡಬೇಕೆಂದು ತೀರ್ಮಾನಿಸಿದ್ದೆನೆ. ನಿಮಗೇನಾದರೂ ನನ್ನ ಹೆಂಡತಿ ಬಾಡಿಗೆಗೆ ಬೇಕಿದ್ದರೆ ಕೂಡಲೇ ಸಂಪರ್ಕಿಸಿ ಎಂದು ವಿಡಿಯೋನಲ್ಲಿ ಹೇಳಿದ್ದನು ಕೇಳಬಹುದಾಗಿದೆ.
ನೆಟ್ಟಿಗರಿಂದ ಮಂಗಳಾರತಿ
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇದು ದಾಂಪತ್ಯವೆಂಬ ಪವಿತ್ರ ಬಂಧವನ್ನು ಈತ ವ್ಯಾಪಾರವಾಗಿ ಪರಿಗಣಿಸಿದ್ದಾನೆ ಎಂದು ತೀವ್ರ ವಿರೋಧ ಕೇಳಿಬಂದಿದೆ.
ಇವನ ಆಕೆಯ ಗಂಡನಲ್ಲ ಬದಲಿಗೆ ರಾಕ್ಷಸ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮೊದಲು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸು ಎಂದು ಆ ಮಹಿಳೆಗೆ ಇನ್ನೊಬ್ಬರು ಸಲಹೆ ನೀಡಿದ್ದಾರೆ.
ಇದೆಲ್ಲಾ ಒಂದು ಗಿಮಿಕ್
ಇನ್ನೂ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು, ಈ ವಿಡಿಯೋ ಒಂದು ಸೋಶಿಯಲ್ ಮೀಡಿಯಾ ಸ್ಟಂಟ್ ಆಗಿದೆ, ಕೇವಲ ತನ್ನ ವಿಡಿಯೋಗೆ ಹೆಚ್ಚಿನ ವೀಕ್ಷಣೆ ಬರಲಿ ಎಂಬ ಉದ್ದೇಶದಿಂದ ಅವನು ಹೀಗೆ ಹೇಳಿದ್ದಾನೆ ಎಂದು ನೆಟ್ಟಿಗರು ಹೇಳಿದ್ದಾರೆ. ಆದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆಯನ್ನು ಮತ್ತು ಪಾಲೋವರ್ಸ್ಗಳನ್ನು ಹೆಚ್ಚಿಸಿಕೊಳ್ಳಲು ಈ ಮಟ್ಟಕ್ಕೆ ಇಳಿಯಬೇಕೆ ಎನ್ನುವುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ, (ಏಜನ್ಸೀಸ್).