Brahma Muhurta:ಶಾಸ್ತ್ರಗಳು ಮತ್ತು ನಮ್ಮ ಪೂರ್ವಿಕರು ದಿನಾಲೂ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಬೇಗ ಎಳುವಂತೆ ಸಲಹೆ ನೀಡುತ್ತಾರೆ. ಬ್ರಹ್ಮಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವುರಿಂದ ಆರೋಗ್ಯ ಮತ್ತು ಅದೃಷ್ಟವನ್ನು ಪಡೆಯುತ್ತೇವೆ ಅಲ್ಲದೆ, ದಿನವಿಡೀ ಚೈತನ್ಯಶೀಲರಾಗಿರುತ್ತೇವೆ ಎಂದು ನಂಬಲಾಗಿದೆ. ಬ್ರಹ್ಮಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ಏನೆಲ್ಲಾ ಲಾಭಗಳು ಸಿಗಲಿವೆ ಎಂಬುದರ ಬಗ್ಗೆ ತಿಳಿಯೋಣ..
ಬ್ರಹ್ಮ ಎಂದರೆ ದೇವರು.. ಮುಹೂರ್ತ ಎಂದರೆ ಶುಭ ಸಮಯ.. ಅಂದರೆ ದೇವರ ಶುಭ ಸಮಯ ಎಂದರ್ಥ. ರಾತ್ರಿ ಮುಗಿಯುವ ಸ್ವಲ್ಪ ಹಿಂದಿನ ಸಮಯ ಬ್ರಹ್ಮ ಮುಹೂರ್ತ. ಬ್ರಹ್ಮ ಮುಹೂರ್ತವು ಸೂರ್ಯೋದಯಕ್ಕೆ ಸುಮಾರು ಒಂದೂವರೆ ಗಂಟೆ ಮೊದಲು ಬರುತ್ತದೆ, ಈ ಸಮಯದಲ್ಲಿ ಎಚ್ಚರಗೊಳ್ಳುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜೋತಿಷ್ಯ ಪ್ರಕಾರ, ಈ ಸಮಯ ಬೆಳಿಗ್ಗೆ 4 ರಿಂದ 5.30 ರವರೆಗೆ ಎಂದು ಹೇಳಲಾಗಿದೆ.
ಬೆಳಿಗ್ಗೆ ಎದ್ದ ನಂತರ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಅಂಗೈಗಳನ್ನು ನೋಡುವುದು, ಈ ಸಂಪ್ರದಾಯವನ್ನು ಕರ ದರ್ಶನ ಎಂದು ಕರೆಯಲಾಗುತ್ತದೆ. ಇದಾದ ನಂತರ, ಹಾಸಿಗೆಯಿಂದ ನಮ್ಮ ಪಾದಗಳನ್ನು ಕೆಳಗೆ ಇಡುವ ಮೊದಲು, ನಾವು ಭೂ ತಾಯಿಯಿಂದ ಕ್ಷಮೆ ಕೇಳಬೇಕು, ಏಕೆಂದರೆ ನಾವು ಭೂ ತಾಯಿಯ ಮೇಲೆ ನಮ್ಮ ಪಾದಗಳನ್ನು ಇಡಲಿದ್ದೇವೆ. ಸ್ನಾನದ ನಂತರ ಉದಯಿಸುತ್ತಿರುವ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಪೂಜೆ ಮಾಡಿ, ಧ್ಯಾನ ಮಾಡಿ, ಮಂತ್ರಗಳನ್ನು ಪಠಿಸಬೇಕು ಎಂಬುವುದು ಸಂಪ್ರದಾಯ.
*ಬೆಳಗ್ಗೆ ಬ್ರಹ್ಮಮುಹೂರ್ತದ ಸಮಯದಲ್ಲಿ ಎಳುವುರಿಂದ ನಿಮ್ಮ ಸುತ್ತಮುತ್ತಲಿನ ಸಮಯ ಪ್ರಶಾಂತತೆ ಮತ್ತು ಶುದ್ಧತತೆಯಿಂದ ಕೂಡಿರುತ್ತದೆ.
*ಬೆಳಗ್ಗೆ ಬೇಗ ಎದ್ದು ವಾಕಿಂಗ್ ನಡೆಯುವುದರಿಂದ ಅನೇಕ ರೋಗಗಳು ತಡೆಯಬಹುದು. ಹಾಗಾಗಿ, ವೈದ್ಯರು ನಡೆದಾಡಲು ಸಲಹೆ ನೀಡುತ್ತಾರೆ.
*ನಿಯಮಿತ ನಡಿಗೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ, ಹೃದಯ ಆರೋಗ್ಯ ವೃದ್ಧಿಸುತ್ತದೆ.
*ನಾವು ಪ್ರತಿದಿನ ಬೆಳಿಗ್ಗೆ ಬೇಗನೆ ಏಳಲು ಪ್ರಾರಂಭಿಸಿದಾಗ, ಸ್ವಲ್ಪ ಸಮಯದ ನಂತರ ನಾವು ರಾತ್ರಿಯೂ ಬೇಗನೆ ನಿದ್ರಿಸಲು ಪ್ರಾರಂಭಿಸುತ್ತೇವೆ. ಬೇಗ ಮಲಗುವುದು ಮತ್ತು ಬೇಗ ಏಳುವುದು ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ.
*ಬೆಳಿಗ್ಗೆ ಧ್ಯಾನ ಮಾಡುವುದು ಹೆಚ್ಚು ಪ್ರಯೋಜನಕಾರಿ ಏಕೆಂದರೆ ಈ ಸಮಯದಲ್ಲಿ ಪರಿಸರ ಶಾಂತ ಮತ್ತು ಶುದ್ಧವಾಗಿರುತ್ತದೆ ಮತ್ತು ಅಂತಹ ಸಮಯದಲ್ಲಿ ಧ್ಯಾನ ಮಾಡುವಾಗ ಏಕಾಗ್ರತೆ ಹಾಗೇ ಇರುತ್ತದೆ. ಧ್ಯಾನದ ಮೂಲಕ, ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ ಮತ್ತು ಆಲೋಚನೆಗಳು ಶುದ್ಧವಾಗಿರುತ್ತವೆ.(ಏಜೆನ್ಸೀಸ್)