ನ್ಯೂಸ್

ಗೌತಮ್​ ಅದಾನಿಗೆ ಮಗ್ಗಲುಮುಳ್ಳಾಗಿ ಕಾಡಿದ್ದ ಹಿಂಡೆನ್​ಬರ್ಗ್ ಸಂಸ್ಥೆಗೆ ಬೀಗ! ಕಾರಣ ಹೀಗಿದೆ | Hindenburg Research

ಮೋಹನ್​ ಶೆಟ್ಟಿ

Hindenburg Research: ಈ ಹಿಂದೆ ಅದಾನಿ ಗ್ರೂಪ್ ಆಫ್ ಕಂಪನಿ ವಿರುದ್ಧ ತನ್ನ ಸ್ಫೋಟಕ ವರದಿಗಳ ಮೂಲಕ ದೊಡ್ಡ ಸಮರವೇ ಸಾರಿದ್ದ ಅಮೆರಿಕಾ ಮೂಲದ ಹೆಸರಾಂತ ಶಾರ್ಟ್​ ಸೆಲ್ಲರ್​ ಹಿಂಡೆನ್​ಬರ್ಗ್​ ರಿಸರ್ಚ್​, ಇದೀಗ ದಿಢೀರ್​ ಎಂಬಂತೆ ತನ್ನೆಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಅದಾನಿ ಸಮೂಹ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದ ಹಿಂಡೆನ್​ಬರ್ಗ್​ ವರದಿಗಳು, ಅಂದಿನ ಮಟ್ಟಕ್ಕೆ ಜಾಲತಾಣಗಳಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿ, ಅದಾನಿ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇಂತಹ ಹಿಂಡೆನ್​ಬರ್ಗ್​ ರಿಸರ್ಚ್​ ಇದೀಗ ತನ್ನ ಸಂಸ್ಥೆಯನ್ನು ಮುಚ್ಚುವುದಾಗಿ ಹೇಳಿರುವುದು ಅನೇಕರಲ್ಲಿ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಕೂಡ ಹರಿದಾಡಿವೆ.

ಈ ಗೊಂದಲಗಳಿಗೆ ಸ್ವತಃ ಹಿಂಡೆನ್​ಬರ್ಗ್ ಸಂಸ್ಥಾಪಕ ನಾಥನ್ ಆಂಡರ್ಸನ್ ಸ್ಪಷ್ಟನೆ ನೀಡಿದ್ದು, "2017ರಲ್ಲಿ ತನ್ನ ರಿಸರ್ಚ್​ ಆರಂಭಿಸಿದ್ದ ಹಿಂಡೆನ್​ಬರ್ಗ್​ ಸಂಸ್ಥೆ, ಕಳೆದ ವರ್ಷಗಳಲ್ಲಿ ಎದುರಿಸಿದ ಒಂದಷ್ಟು ಚರ್ಚೆಗಳು ಮತ್ತು ಚಿಂತನೆಗಳ ಬಳಿಕ ಮುಚ್ಚುವ ನಿರ್ಧಾರವನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.

7 ವರ್ಷಗಳಲ್ಲಿ 7 ದೊಡ್ಡ ಸಂಸ್ಥೆಗಳು!

ಹಿಂಡೆನ್​ಬರ್ಗ್​ ರಿಸರ್ಚ್​ ಸಂಸ್ಥೆ ತನ್ನ ಸ್ಫೋಟಕ ವರದಿಗಳನ್ನು ಮುಂದಿಡುವ ಮೂಲಕ ದೊಡ್ಡ ದೊಡ್ಡ ಸಂಸ್ಥೆಗಳನ್ನು ಟಾರ್ಗೆಟ್​ ಮಾಡಿ, ಅದರ ಷೇರುಗಳನ್ನು ನೆಲಕಚ್ಚುವಂತೆ ಮಾಡಿದ್ದು ಮರೆಯಲಾಗದು. ಅಸಲಿಗೆ ಕಳೆದ 7 ವರ್ಷಗಳಲ್ಲಿ ಯಾವೆಲ್ಲಾ ದೊಡ್ಡ ಸಂಸ್ಥೆಗಳನ್ನು ಹಿಂಡೆನ್​ಬರ್ಗ್​ ತನ್ನ ವರದಿಯಲ್ಲಿ ಬೆನ್ನುಬಿಡದ ಬೇತಾಳದಂತೆ ಕಾಡಿತ್ತು ಎಂಬುದರ ವಿವರ ಹೀಗಿದೆ ನೋಡಿ.

1. ಅದಾನಿ ಸಾಗಾ (2023)

2. ಸೆಬಿ ಮುಖ್ಯಸ್ಥರ ವಿರುದ್ಧದ ಆರೋಪಗಳು (2023)

3. ನಿಕೋಲಾ ಕಾರ್ಪೊರೇಷನ್ (2020)

4. ಇಕಾನ್ ಎಂಟರ್‌ಪ್ರೈಸಸ್ ಎಲ್‌ಪಿ ಪ್ರಕರಣ (2023 - 2024)

5. ಬ್ಲಾಕ್ ಇಂಕ್ ವಿರುದ್ಧದ ಆರೋಪಗಳು (2023)

6. ದಿ ಟ್ವಿಟರ್ ಟೇಲ್ (2022)

7. ಜೆ & ಜೆ ಪರ್ಚೇಸಿಂಗ್​ ಪೊಂಜಿ ಪ್ರಾಜೆಕ್ಟ್​ (2022), (ಏಜೆನ್ಸೀಸ್).