ನ್ಯೂಸ್

ಹೀಗೇಕೆ ಮಾಡಿದೆ ಎಂದು ಕೂಗುತ್ತಾ ಪ್ರಿಯತಮೆಯನ್ನು ಬರ್ಬರವಾಗಿ ಕೊಂದ ಪಾಗಲ್​ ಪ್ರೇಮಿ

ಮುಂಬೈ: ಆಘಾತಕಾರಿ ಘಟನೆಯೊಂದಲ್ಲಿ ವ್ಯಕ್ತಿಯೋರ್ವ ತನ್ನ ಮಾಜಿ ಪ್ರಿಯತಮೆಯನ್ನು ನಡುರೆಸ್ತೆಯಲ್ಲಿ ಸ್ಪ್ಯಾನರ್​ನೊಂದಿಗೆ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯು ಮಹಾರಾಷ್ಟ್ರದ ರಾಜಧಾನಿ ಮುಂಬೈನ ವಸೈಯ ಪೂರ್ವ ಚಿಂಚ್ಪಾಡಾದಲ್ಲಿ ನಡೆದಿದ್ದು, ಕೊಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮೃತರನ್ನು ಆರತಿ ಯಾದವ್​ ಎಂದು ಗುರುತಿಸಲಾಗಿದ್ದು, ಆರೋಪಿ ರೋಹಿತ್​ ಯಾದವ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಜನರು ಸುಮ್ಮನೆ ನಿಂತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಆರೋಪಿ ರೋಹಿತ್ ದೂರದಿಂದ ಸ್ಪ್ಯಾನರ್​ ಹಿಡಿದು ಓಡಿ ಬರುವುದನ್ನು ನೋಡಬಹುದಾಗಿದೆ. ಫುಟ್​ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿರುವ ಸಂತ್ರಸ್ತೆ ಅರ್ಪಿತಾ ಮೇಲೆ ಏಕಾಏಕಿ ದಾಳಿ ಮಾಡುತ್ತಾನೆ. ಈ ವೇಳೆ ರಸ್ತೆಯಲ್ಲಿದ್ದ ಜನರು ಸಂತ್ರಸ್ತೆಯ ನೆರವಿಗೆ ಧಾವಿಸದೆ ಸುಮ್ಮನೆ ನಿಂತಿರುವುದನ್ನ ನೋಡಬಹುದಾಗಿದೆ. ಬಳಿಕ ಒಬ್ಬ ವ್ಯಕ್ತಿಯು ಬಿಡಿಸಲು ಮುಂದಾದಾಗ ಆತನಿಗೆ ಆರೋಪಿ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಹೀಗೇಕೆ ಮಾಡಿದೆ ಎಂದು ಆಕೆಯ ಶವದ ಬಳಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಆರೋಪಿ ರೋಹಿತ್​ ಹಾಗೂ ಕೊಲೆಯಾದ ಅರ್ಪಿತಾ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವು ಹಿಂದೆ ಇಬ್ಬರು ಕಾರಣಾಂತರಗಳಿಂದ ಬೇರ್ಪಟ್ಟಿದ್ದರು. ಇತ್ತೀಚಿಗೆ ಅರ್ಪಿತಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ಕೋಪಗೊಂಡ ರೋಹಿತ್​ ಸಿಟ್ಟಿನಿಂದ ಆಕೆಯ ಮೇಲೆ ಸ್ಪ್ಯಾನರ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹತ್ಯೆಗೆ ಬಳಸಲಾಗಿದ್ದ ಆಯುಧವನ್ನು ವಶಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.