ನ್ಯೂಸ್

ರಷ್ಯಾ ಜನರು ಹಾಲಿನಲ್ಲಿ ಜೀವಂತ ಕಪ್ಪೆಗಳನ್ನು ಇಡುವುದೇಕೆ? ಇಲ್ಲಿದೆ ನೋಡಿ ಅಚ್ಚರಿಯ ಕಾರಣ | Frogs In Milk

Frogs In Milk : ಪ್ರಾಚೀನ ಕಾಲದಲ್ಲಿ ಜನರು ಆಹಾರವನ್ನು ಸಂರಕ್ಷಿಸಲು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದರು. ಯಾವುದೇ ಆಹಾರವನ್ನಾಗಲಿ ಹೆಚ್ಚು ದಿನ ಇಡಲಾಗುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ರೆಫ್ರಿಜರೇಟರ್ ಇದೆ. ಇದರ ಪ್ರಾಥಮಿಕ ಉದ್ದೇಶವೆಂದರೆ ಹಾಲು ಮತ್ತು ಇತರ ಆಹಾರಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಸಂರಕ್ಷಿಸುವುದು.

ಅಂದಹಾಗೆ ಹಾಲು ಸೇರಿದಂತೆ ಇನ್ನಿತರ ಆಹಾರಗಳನ್ನು ಸಾವಿರಾರು ವರ್ಷಗಳಿಂದ ಮನುಷ್ಯರು ಸೇವಿಸುತ್ತಿದ್ದಾರೆ. ಬಹಳ ವರ್ಷಗಳ ಹಿಂದೆ ಹಾಲನ್ನು ಹೇಗೆ ಸಂರಕ್ಷಿಸಿ ಇಡುತ್ತಿದ್ದರು ಎಂದು ಎಂದಾದರೂ ಯೋಚಿಸಿದ್ದೀರಾ? ಈ ಲೇಖನದಲ್ಲಿ ರೆಫ್ರಿಜರೇಟರ್​ ಆವಿಷ್ಕಾರಕ್ಕೂ ಮೊದಲು ರಷ್ಯನ್ನರು ಹಾಲನ್ನು ಸಂರಕ್ಷಿಸಲು ಬಳಸಿದ ವಿಚಿತ್ರ ತಂತ್ರ ಮತ್ತು ಅದರ ಹಿಂದಿನ ವಿಜ್ಞಾನವನ್ನು ತಿಳಿದುಕೊಳ್ಳೋಣ.

ರಷ್ಯಾದವರು ಕಪ್ಪೆಯನ್ನು ಬಳಸಿದ್ದಾರೆಯೇ?

ಹಾಲು ಕೆಡದಂತೆ ರಕ್ಷಣೆ ಮಾಡಲು ರಷ್ಯನ್ನರು ಜೀವಂತ ಕಪ್ಪೆಯನ್ನು ಹಾಲಿನ ಪಾತ್ರೆಯಲ್ಲಿ ಇಡುತ್ತಿದ್ದರು. ಈ ತಂತ್ರವು ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಖಚಿತವಾಗಿಲ್ಲ. ಆದರೆ. ರಷ್ಯನ್ನರು ಅದನ್ನು ಬಲವಾಗಿ ನಂಬಿದ್ದರು. ಕಪ್ಪೆಗಳು ತಮ್ಮ ಚರ್ಮದ ಮೂಲಕ ಬ್ಯಾಕ್ಟೀರಿಯಾ ಮತ್ತು ಆ್ಯಂಟಿಫಂಗಲ್ ಅಂಶಗಳನ್ನು ಸ್ರವಿಸುತ್ತವೆ ಎಂಬುದು ಈಗ ವೈಜ್ಞಾನಿಕ ಸಂಶೋಧನೆಯ ಮೂಲಕ ಸಾಬೀತಾಗಿದೆ.

ರಷ್ಯಾದ ರಸಾಯನಶಾಸ್ತ್ರಜ್ಞರ ನೇತೃತ್ವದ ತಂಡವು ಹೊಸ ಔಷಧ ಸಂಯುಕ್ತಗಳನ್ನು ಕಂಡುಹಿಡಿಯಲು ಕಪ್ಪೆಗಳ ಗ್ರಂಥಿಗಳನ್ನು ಒಡೆಯಲು ಪ್ರಯತ್ನಿಸಿದೆ. ಕಪ್ಪೆಗಳು ಹಲ್ಲು ಹಾಗೂ ಉಗುರುಗಳನ್ನು ಹೊಂದಿಲ್ಲ. ಆದ್ದರಿಂದ, ಅವುಗಳ ಚರ್ಮದ ಸ್ರವಿಸುವಿಕೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂಬುದಕ್ಕೆ ಈಗ ವೈಜ್ಞಾನಿಕ ಪುರಾವೆಗಳಿವೆ.

ರಷ್ಯಾ ಜನರು ಕಪ್ಪೆಗಳನ್ನು ಸಾಕುವುದರ ಹಿಂದಿನ ಮೂಲ ಕಾರಣವನ್ನು ವಿಜ್ಞಾನಿಗಳು ಅರ್ಥಮಾಡಿಕೊಳ್ಳದಿದ್ದರೂ, ಕಪ್ಪೆಯ ನೈಸರ್ಗಿಕ ತಂಪಾದ, ತೇವಾಂಶದ ಸಂವೇದನೆಯಿಂದಾಗಿ ಅವರು ಹಾಲನ್ನು ಸಂರಕ್ಷಿಸಲು ಕಪ್ಪೆಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ.

ಹಾಲನ್ನು ತಾಜಾವಾಗಿಡಲು ಕಪ್ಪೆಗಳ ಬಳಕೆಯು ಸ್ವಲ್ಪ ವಿಚಿತ್ರ ಎನಿಸಿದರೂ ಪ್ರಾಚೀನ ರಷ್ಯನ್ನರಲ್ಲಿ ಕಪ್ಪೆಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. (ಏಜೆನ್ಸೀಸ್​)