ಭಾರತ ಯುವ ರಾಷ್ಟ್ರ. ಆದರೆ ನಾವು ಭೌತಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಯುವಕರಾಗಬೇಕು. ಅಂದರೆ ಸದಾ ಸಕಾರಾ ತ್ಮಕ ಮನೋಭಾವ, ನಿರಂತರ ಕಲಿಯುವ ಆಸಕ್ತಿ, ಉತ್ತಮವಾದ ಚಿಂತನೆ ಗಳತ್ತ ಮನಸ್ಸನ್ನು ಹರಿಸುವುದು, ಸ್ವಾವಲಂಬನೆ, ಇತ್ಯಾದಿ. ನಾಲ್ಕು ವರ್ಷಗಳಿಂದ ಐರ್ಲ್ಯಾಂಡ್ನಲ್ಲಿ ವಾಸಿಸುತ್ತಿದ್ದೇನೆ. ಯುರೋಪಿನ ಹಲವು ದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ನಾನು ಕಂಡ ಒಂದು ಪ್ರಮುಖ ವಿಷಯವೆಂದರೆ, ಇಲ್ಲಿನ ಯುವಕರು 17-18ವರ್ಷ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಬದುಕಲು ಯೋೕಚಿಸುತ್ತಾರೆ. ಶಾಲಾ ಕಾಲೇಜಿನ ಶುಲ್ಕ ಹಾಗೂ ಜೀವನ ನಿರ್ವಹಣೆಯ ಕನಿಷ್ಟ ಹಣವನ್ನು ಪಾಲಕರಿಂದ ಪಡೆಯುತ್ತಾರೆ. ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಾರೆ. ಸ್ವಯಂ ಸಂಪಾದನೆಯನ್ನೇ ಮೋಜು-ಮಸ್ತಿಗೋ, ತಿರುಗಾಡಲೋ ಬಳಸುತ್ತಾರೆ. ಶಿಕ್ಷಕರು ಯಾವುದೇ ಹೋಮ್ ವರ್ಕ್,
ಅಸೈನ್ಮೆಂಟ್ ಕೊಟ್ಟರೆ ಪ್ರಾಮಾಣಿಕವಾಗಿ ಮಾಡುತ್ತಾರೆ, ಅಂತರ್ಜಾಲ ದಿಂದ ಕಾಪಿ ಹೊಡೆಯುವುದಿಲ್ಲ. ಉನ್ನತ ವ್ಯಾಸಂಗ ಇಷ್ಟವಿಲ್ಲದಿದ್ದರೆ, ಕಟ್ಟಡ ಕೆಲಸ, ಮರಗೆಲಸ ಇತ್ಯಾದಿಗಳಲ್ಲಿ ತೊಡಗಿ ಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ. ಯೌವನಾವಸ್ಥೆಗೆ ತಲುಪಿದ ಮೇಲೆ ತಂದೆ-ತಾಯಿಯ ಬಳಿ ಹಣ ಕೇಳುವುದು ನಾಚಿಕೆಯ ವಿಷಯ ಇವರಿಗೆ. ಅನಿವಾಸಿ ಭಾರತೀಯ ಮಕ್ಕಳೂ ಹೆಚ್ಚಾಗಿ ಹಾಗೆಯೇ ವರ್ತಿಸುತ್ತಾರೆ. ಇನ್ನು ಉನ್ನತ ವ್ಯಾಸಂಗಕ್ಕೆಂದು ಬಂದಿರುವ ಯುವಕ-ಯುವತಿಯರು, ಭಾರತದಲ್ಲಿ ಉತ್ತಮ ಕೆಲಸ ಮಾಡಿದ್ದರೂ ಜೀವನದ ನಿರ್ವಹಣೆಗೆ, ಬಿಡುವಿನ ಸಮಯದಲ್ಲಿ ಮಾಲುಗಳಲ್ಲಿ, ಹೋಟೆಲ್ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನಕ್ಕೆ ಪ್ರಯತ್ನ ಮಾಡುತ್ತಾರೆ.
ಆದರೆ ಭಾರತದಲ್ಲಿರುವ ಅನೇಕ ಯುವಕ-ಯುವತಿಯರು ಈ ರೀತಿಯ ಆಲೋಚನೆಗಳನ್ನು ಮಾಡುತ್ತಿಲ್ಲ. ಅವರು ಸ್ವಾವಲಂಬಿ ಜೀವನ ನಡೆ ಸುವ ಪ್ರಯತ್ನ ಮಾಡುತ್ತಿಲ್ಲ ಎಂದು ನಾನು ಹೇಳುತ್ತಲ್ಲ. ದೊಡ್ಡ ಮೊತ್ತದ ಯುವ ಸಮೂಹ ಈ ರೀತಿಯ ಸ್ವಾವಲಂಬಿ ಆಲೋಚನೆಗಳನ್ನೇಕೆ ತಮ್ಮ ವ್ಯಕ್ತಿ ತ್ವದ ಭಾಗವಾಗಿ ಬೆಳಸಿಕೊಳ್ಳಬಾರದು ಎಂಬುದು ನನ್ನ ಆಶಯ ಮತ್ತು ಅಭಿಪ್ರಾಯ. ಈ ರೀತಿಯ ಆಲೋಚನೆ ಮತ್ತು ಅನುಷ್ಠಾನದಿಂದ ನಮ್ಮ, ದೇಶದ ಭವಿಷ್ಯ ಮತ್ತಷ್ಟು ಸುಭದ್ರವಾಗಿ ನಿರ್ವಿುಸಬಹುದಲ್ಲವೆ?