ನ್ಯೂಸ್

BBK S10: ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್; ಐವರಲ್ಲಿ ಯಾರಿಗೆ ಮನೆಯಿಂದ ಗೇಟ್​ಪಾಸ್​?

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಮೊದಲ ವಾರದ ಕಿಚ್ಚನ ಜತೆ ಕಾರ್ಯಕ್ರಮಕ್ಕೆ ಆಗಮಿಸಿದ ನಟ, ನಿರೂಪಕ ಕಿಚ್ಚ ಸುದೀಪ್, ಪಂಚಾಯಿತಿ ಕಟ್ಟೆಗೆ ಹ್ಯಾಂಡ್‌ಸಮ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆಯ ಸದಸ್ಯರು ಸೇರಿದಂತೆ ವೀಕ್ಷಕರ ಗಮನ ಸೆಳೆದರು.

ಸದ್ಯ ಶನಿವಾರದ ಸಂಚಿಕೆಯ ಕಡೆಯಲ್ಲಿ ಐವರು ಸ್ಪರ್ಧಿಗಳನ್ನು ಭಾನುವಾರದ ಸಂಚಿಕೆಗೆ ಉಳಿಸಿರುವ ಸುದೀಪ್​, ಯಾರು ಉಳಿಯಲಿದ್ದಾರೆ ಮತ್ತು ಯಾರು ಹೊರ ನಡೆಯಲಿದ್ದಾರೆ ಎಂಬ ಸಂಗತಿಯನ್ನು ಇಂದಿನ ಎಪಿಸೋಡ್​ನಲ್ಲಿ ಘೋಷಿಸಲಿದ್ದಾರೆ.

ವಾರದ ಕಥೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದ ಸುದೀಪ್​, ಮನೆಯಿಂದ ಹೊರಹೋಗಲು ನಾಮಿನೇಟ್​ ಆಗಿದ್ದ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್, ಮೈಕಲ್​, ಸಿರಿ, ಸ್ನೇಕ್ ಶ್ಯಾಮ್​, ತನಿಷಾ, ನೀತು ವನಜಾಕ್ಷಿ, ಕಾರ್ತಿಕ್ ಪೈಕಿ ಸಂತೋಷ್, ಕಾರ್ತಿಕ್​, ತನಿಷಾ ಮೂವರನ್ನು ಸುದೀಪ್​ ಸೇಫ್ ಮಾಡಿದರು. ಸದ್ಯ ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಮನೆಯಿಂದ ಹೊರ ಹೋಗುವ ಪಟ್ಟಿಯಲ್ಲಿರುವ ಉಳಿದ ಸ್ಪರ್ಧಿಗಳು.

ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಈ ಐವರಲ್ಲಿ ಯಾರೆಲ್ಲ ಸೇಫ್‌? ಆಗಲಿದ್ದಾರೆ, ಯಾರು ಮನೆಯಿಂದ ನೇರವಾಗಿ ಹೊರಬೀಳುತ್ತಾರೆ? ಎಂಬುದನ್ನು ಭಾನುವಾರದ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.