ನ್ಯೂಸ್

'ಕೈ'​ ಪ್ರತಿಭಟನೆಯಲ್ಲಿ ಮಿಂಟಾ ದೇವಿ ಫೋಟೋ! ಪ್ರಿಯಾಂಕಾ ಗಾಂಧಿ ಟಿ-ಶರ್ಟ್​ ಮೇಲಿದ್ದ ಮಹಿಳೆ ಯಾರು? | Minta Devi

ಮೋಹನ್​ ಶೆಟ್ಟಿ

Minta Devi: ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದ ಇಂಡಿಯಾ ಕೂಟ ಮಂಗಳವಾರ (ಆ.12) ಸಂಸತ್ತಿನ ಹೊರಗೆ 'ಮಿಂಟಾ ದೇವಿ' ಎಂಬ ಹೆಸರಿನಲ್ಲಿ ಮುದ್ರಿಸಿದ ಬಿಳಿ ಟಿ-ಶರ್ಟ್‌ಗಳನ್ನು ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಬಿಹಾರದಲ್ಲಿ ಮತದಾರರ ವಂಚನೆಗೆ ಸಂಬಂಧಿಸಿದ ಪ್ರತಿಭಟನೆ ಇದಾಗಿದೆ ಎಂದು ಪಕ್ಷ ಹೇಳಿಕೊಂಡಿದೆ. ಈ ಪ್ರತಿಭಟನೆಯಲ್ಲಿ ಪಕ್ಷದ ನಾಯಕರು ಧರಿಸಿದ್ದ ಮಿಂಟಾ ದೇವಿ ಅಂಗಿ ಇದೀಗ ಹಲವರ ಗೊಂದಲಕ್ಕೆ ಕಾರಣವಾಗಿದೆ.

ಯಾರು ಈ ಮಿಂಟಾ ದೇವಿ?

ಮಿಂಟಾ ದೇವಿ ಎಂಬ 124 ವರ್ಷದ ಮಹಿಳೆ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಇಂದು, ಇಂಡಿಯಾ ಬ್ಲಾಕ್ ನಕಲಿ ಮತದಾರರ ಫೋಟೋ ಮುದ್ರಿಸಲಾದ ಟಿ-ಶರ್ಟ್‌ಗಳನ್ನು ಧರಿಸಿ, ಪ್ರತಿಭಟನಾ ಮೆರವಣಿಗೆ ನಡೆಸಿತು. ಅಂಕಿಅಂಶಗಳ ಪ್ರಕಾರ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 115 ವರ್ಷ ವಯಸ್ಸಿನವರು. ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಮಹಿಳೆ 124 ವರ್ಷ ವಯಸ್ಸಿನವರು. ಇದು ಇಡೀ ಮತದಾರರ ಪಟ್ಟಿಯೇ ವಂಚನೆ ಎಂಬುದನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.

ಈ ಪ್ರದರ್ಶನವು ವಿರೋಧ ಪಕ್ಷದ ನಾಯಕರು ಆಯೋಜಿಸಿದ್ದ ಪ್ರತಿಭಟನೆಯ ಭಾಗವಾಗಿತ್ತು. ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಚುನಾವಣಾ ಆಯೋಗವು ಅಂತಹ ದೋಷಗಳು ಸಂಭವಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿ, ಇದೊಂದು 'ಮತದಾರರ ವಂಚನೆ' ಎಂದು 'ಕೈ' ಬಣ್ಣಿಸಿದೆ,(ಏಜೆನ್ಸೀಸ್).