ನ್ಯೂಸ್

ಲೋಕಸಭೆ ಚುನಾವಣೆ; ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನೆಡೆ

ವಾರಣಾಸಿ: 18ನೇ ಸಾರ್ವತ್ರಕ ಚುನಾವಣೆಯ ಫಲಿತಾಂಶ ಇಂದು (ಜೂನ್​ 04) ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಮ್ಯಾಜಿಕ್​ ನಂಬರ್​ನತ್ತ ದಾಪುಗಾಲಿಟ್ಟಿದೆ.

ಪ್ರಧಾನಿ ನರೇಂದ್ರ ಸ್ಪರ್ಧಿಸಿರುವ ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರೈ 12,000 ಮತಗಳ ಮುನ್ನಡೆ ಸಾಧಿಸಿದ್ದು, ಬಿಜೆಪಿ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಮತ ಎಣಿಕೆ ಮುಂದುವರೆದಿದ್ದು, ಪ್ರಧಾನಿ ಮೋದಿ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

543 ಸ್ಥಾನಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭೆ ಕ್ಷೇತ್ರವು ಅತ್ಯಂತ ಹೈವೋಲ್ಟೇಜ್​ ಕ್ಷೇತ್ರವಾಗಿದ್ದು, 2014ರಿಂದಲೂ ಪ್ರಧಾನಿ ಮೋದಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.