ಹೊಸ ಕಾರು ಖರೀದಿಸಿದರೆ ಲಾಸ್? ಹಳೇ ಕಾರು ಖರೀದಿಸಿದರೆ ಲಾಭ ಜಾಸ್ತಿ?
ನಿಮ್ಮ ಬಜೆಟ್ಗೆ ತಕ್ಕಂತೆ ಕಾರನ್ನು ಖರೀದಿಸಿದರೆ ಏನೆಲ್ಲ ಪ್ರಯೋಜನ?
ಕೇವಲ ಹಣದ ವಿಷಯ ಮಾತ್ರವಲ್ಲ, ಈ ವಿಚಾರಗಳನ್ನು ತಪ್ಪದೇ ನೆನಪಿನಲ್ಲಿಡಿ
Car Purchase: ಹೊಸ ಕಾರು ಖರೀದಿಸುವುದು ಕೆಲವರಿಗಲ್ಲ, ಹಲವರ ಬಹುದಿನಗಳ ಕನಸು ಎಂದರೆ ಖಂಡಿತ ತಪ್ಪಾಗಲಾರದು. ಕೊಳ್ಳಬೇಕು ಎಂಬ ನಿರ್ಧಾರವೇನೋ ಫಿಕ್ಸ್ ಆಗಿರುತ್ತದೆ. ಆದ್ರೆ, ಹೊಸದೋ ಅಥವಾ ಹಳೆಯದ್ದೋ (ಸೆಕೆಂಡ್ಸ್) ಎಂಬ ಗೊಂದಲ ಮಾತ್ರ ಸಿಕ್ಕಾಪಟ್ಟೆ ಕಾಡುತ್ತಿರುತ್ತದೆ. ಇದೊಂದು ಕಾರಣದಿಂದ ಅನೇಕರು ಈ ವರ್ಷದಲ್ಲಿ ಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದವರು ಇನ್ನೆರೆಡು ವರ್ಷ ಕಳೆದರೂ ಖರೀದಿಯಿಂದ ಕಂಪ್ಲೀಟ್ ದೂರ ಉಳಿದು ಬಿಡುತ್ತಾರೆ.
ಈಗಿನ ಕಾಲಘಟ್ಟದಲ್ಲಿ ಸಾಕಷ್ಟು ದುಬಾರಿ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಬಳಸಿಕೊಂಡು ಮಾರುಕಟ್ಟೆಗೆ ಅತ್ಯಾಕರ್ಷಕ ಲಕ್ಸುರಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಲ್ಲೂ, ಇತ್ತೀಚಿನ ವೈಶಿಷ್ಟ್ಯಗಳು ಮತ್ತು ವಾರಂಟಿಯನ್ನು ಹೊಂದಿರುವ ಕಾರುಗಳ ಮೇಲಿನ ಮೋಹನ ಜನರಲ್ಲಿ ವ್ಯಾಪಕವಾಗಿ ಹೆಚ್ಚುತ್ತಿವೆ. ಆದರೆ, ಇದೇ ಹಳೆಯ ಕಾರಿನಲ್ಲಿ, ನೀವು ಕಡಿಮೆ ಬೆಲೆಗೆ ಉತ್ತಮ ಮಾಡೆಲ್ ಅನ್ನು ಖರೀದಿಸಬಹುದು. ನಿಮ್ಮ ಬಜೆಟ್ನಲ್ಲಿ ಅಗತ್ಯಗಳಿಗೆ ಯಾವುದು ಸರಿಹೊಂದುತ್ತದೆ? ಅಂದರೆ, ಹೊಸ ಕಾರು ಅಥವಾ ಬಳಸಿದ ಕಾರು? ಎಂಬುದರ ಬಗ್ಗೆ ಮೊದಲು ನಿಮಗೆ ಸ್ಪಷ್ಟತೆ ಇರಬೇಕು. ಆನಂತರ ಯಾವೆಲ್ಲ ವಿಷಯಗಳು ಗೊತ್ತಿರುವುದು ಮುಖ್ಯ ಎಂಬುದರ ವಿವರ ಹೀಗಿದೆ ನೋಡಿ.
ಹೊಸ ಕಾರನ್ನು ಖರೀದಿಸುವುದು ಎಂದರೆ ಮೂಲಭೂತವಾಗಿ ಎಲ್ಲವೂ ಸರಿ ಎಂದೇ ಅರ್ಥ. ಮಾರುಕಟ್ಟೆಯಲ್ಲಿ ಹೊಸ ಬಣ್ಣದೊಂದಿಗೆ ಮಿರ ಮಿರ ಮಿಂಚುವ ಕಾರನ್ನು ಕೊಳ್ಳುವಾಗ ಯಾವುದೇ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕಂಪನಿಯ ವಾರಂಟಿ ಸಹ ಲಭ್ಯವಿರುತ್ತದೆ. ಇದರೊಂದಿಗೆ, ವಾರಂಟಿ ಅಡಿಯಲ್ಲಿ ಬರುವ ಕೆಲವು ದುರಸ್ತಿ ವೆಚ್ಚಗಳಿಂದ ನೀವು ನಿಶ್ಚಂತೆ ಪರಿಹಾರವನ್ನೂ ಪಡೆಯಬಹುದು.
ಇಷ್ಟಲ್ಲದೇ, ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಮಾಡೆಲ್ ಮತ್ತು ವೆರಿಯೆಂಟ್ಗಳನ್ನು ಆಯ್ಕೆ ಮಾಡಬಹುದು. ಎಷ್ಟು ಏರ್ಬ್ಯಾಗ್ಗಳು, ಪಾರ್ಕಿಂಗ್ ಕ್ಯಾಮರಾಗಳು ಮತ್ತು ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಯೋಚಿಸಿ ತಗೋಬಹುದು. ನೀವು ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾರನ್ನು ಇಟ್ಟುಕೊಳ್ಳಲು ಬಯಸಿದ್ದೇ ಆದರೆ, ಹೊಸ ಕಾರು ಅತ್ಯುತ್ತಮ ಆಯ್ಕೆ. ಆದರೆ, ಹೊಸ ಕಾರಿನ ಬೆಲೆ ಮಾತ್ರ ಇಲ್ಲಿ ಮುಖ್ಯವಲ್ಲ. ನೀವು ನೋಂದಣಿ, ವಿಮೆ ಮತ್ತು ಇತರ ಶುಲ್ಕಗಳನ್ನು ಸೇರಿಸಿದಾಗ ಆನ್-ರೋಡ್ ಬೆಲೆ ಡಬಲ್ ಆಗುತ್ತದೆ ಎಂಬುದು ನೆನಪಿರಲಿ.
ನಿಮ್ಮ ಬಜೆಟ್ ಕಡಿಮೆಯಿದ್ದರೆ, ಉಪಯೋಗಿಸಿದ ಕಾರು ಉತ್ತಮ ಆಯ್ಕೆಯಾಗಿದೆ. ನೀವು ವೈಶಿಷ್ಟ್ಯಗಳೊಂದಿಗೆ ಹಳೆಯ ಮಾಡೆಲ್ ಅನ್ನು ಖರೀದಿಸಬಹುದು ಮತ್ತು ಹೊಸ ಕಾರಿನ ಬೆಲೆಗೆ ಹತ್ತಿರವಿರುವ ಬಜೆಟ್ ಫ್ರೆಂಡ್ಲಿ ಕಾರನ್ನು ನೋಡಬಹುದು. ಒಳ್ಳೆಯ ಕಂಡೀಷನ್ ವಾಹನಗಳನ್ನು ಅಂದರೆ, ಮುಖ್ಯವಾಗಿ ಎರಡರಿಂದ ನಾಲ್ಕು ವರ್ಷ ಹಳೆಯದಾದ ಕಾರುಗಳನ್ನು ಆಯ್ದುಕೊಳ್ಳುವುದು ಉತ್ತಮ. ಹಾಗಂತ, ಕಡಿಮೆ ಬೆಲೆಗೆ ಲಭ್ಯವಿದೆ ಎಂದು ತಕ್ಷಣವೇ ಖರೀದಿಸಬೇಡಿ. ಕಾರು ಹೊರಗಿನಿಂದ ಲಕ್ಸುರಿಯಾಗಿ ಕಂಡರೂ, ಇಂಜಿನ್ ಅಥವಾ ಗೇರ್ಬಾಕ್ಸ್ನಲ್ಲಿ ಸಮಸ್ಯೆಗಳಿರುವ ಸಾಧ್ಯತೆಗಳಿವೆ.
ಖರೀದಿಸುವ ಮೊದಲು, ವಿಶ್ವಾಸಾರ್ಹ ಮೆಕ್ಯಾನಿಕ್ ಮೂಲಕ ಕಾರನ್ನು ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಿ. ಇಂಜಿನ್, ಬ್ರೇಕ್ಗಳು, ಟೈರ್ಗಳು, ಬ್ಯಾಟರಿ, ಎಸಿ ಮತ್ತು ವಾಹನದ ಕಾರ್ಯಕ್ಷಮತೆಯನ್ನು ಪರಿಶೀಲಿಸಿ. ಅಪಘಾತದ ಇತಿಹಾಸ (ಆ್ಯಕ್ಸಿಡೆಂಟ್ ಹಿಸ್ಟರಿ) ಮತ್ತು ಪ್ರವಾಹ ಹಾನಿಯ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿ.
ಬಳಸಿದ ಕಾರನ್ನು ಖರೀದಿಸುವಾಗ, ಖರೀದಿ ಬೆಲೆಗೆ ಹೆಚ್ಚುವರಿಯಾಗಿ ರಿಪೇರಿ, ಸರ್ವಿಸ್ ಮತ್ತು ಟೈರ್ ಬದಲಾವಣೆಯಂತಹ ವೆಚ್ಚಗಳಿಗಾಗಿ ನೀವು ಬಜೆಟ್ ಬಳಸಿಕೊಳ್ಳಬೇಕಿರುತ್ತದೆ. ಸೇವಾ ದಾಖಲೆಗಳು, ಮೀಟರ್ ಗೇಜ್ ರೀಡಿಂಗ್ಗಳು, ವಿಮೆ ವಿವರಗಳು ಮತ್ತು ಮಾಲಿನ್ಯ ಪ್ರಮಾಣಪತ್ರವನ್ನು ಪರಿಶೀಲಿಸಿ. ಅಲ್ಲದೆ, ವಾಹನ ನೋಂದಣಿ ದಾಖಲೆಗಳು, ಬಾಕಿ ಇರುವ ಸಾಲಗಳು ಮತ್ತು ಇತರ ಬಾಕಿಗಳತ್ತ ಒಮ್ಮೆ ಕಣ್ಣಾಡಿಸಿ. ಕಾರನ್ನು ಖರೀದಿಸಿದ ನಂತರ, ಮಾಲೀಕತ್ವದ ವರ್ಗಾವಣೆ ಮತ್ತು ವಿಮೆಯಲ್ಲಿ (ಇನ್ಶೂರೆನ್ಸ್) ಹೆಸರು ಬದಲಾವಣೆಯನ್ನು ಪೂರ್ಣಗೊಳಿಸಲು ಮರೆಯದಿರಿ.
ನೀವು ದೀರ್ಘಾವಧಿಯ ಬಳಕೆ, ವಾರಂಟಿ ಮತ್ತು ಹೊಸ ವೈಶಿಷ್ಟ್ಯಗಳನ್ನು ಬಯಸಿದರೆ, ಹೊಸ ಕಾರನ್ನು ಖರೀದಿಸುವುದೇ ಬೆಸ್ಟ್. ಕಡಿಮೆ ಬಜೆಟ್ನಲ್ಲಿ ಒಳ್ಳೆಯ ಮಾಡೆಲ್ ಬಯಸಿದರೆ, ನೀವು ಸೆಕೆಂಡ್ ಹ್ಯಾಂಡ್ ಕಾರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅದುವೇ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು. ಅಂತಿಮವಾಗಿ, ಕಾರಿನ ಬೆಲೆಯನ್ನು ಮಾತ್ರವಲ್ಲದೆ ನಿರ್ವಹಣಾ ವೆಚ್ಚಗಳು, ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ಅಗತ್ಯಗಳನ್ನು ಪರಿಗಣಿಸಿ. ಆಗ ಮಾತ್ರ, ನಿಮ್ಮ ಹಣಕ್ಕೆ ಸೂಕ್ತವಾದ ಕಾರನ್ನು ನೀವು ಆಯ್ಕೆ ಮಾಡಲು ಸಾಧ್ಯ,(ಏಜೆನ್ಸೀಸ್).