ರಾತ್ರೋ ರಾತ್ರಿ ಬದಲಾಯ್ತು ಈಕೆಯ ಅದೃಷ್ಟ! 2 ಕೋಳಿ ಕೇಳಿದ್ದ ಅನಾಥ ಯುವತಿಯ ಮದುವೆಗೆ ಹರಿದುಬಂತು ಜನಸಾಗರ | Orphaned Wedding

ಆಕೆಯ ಈ ಕೋರಿಕೆ ಇಡೀ ದೇಶವನ್ನೇ ಭಾವುಕಗೊಳಿಸಿದ್ದು ನಿಜಕ್ಕೂ ಅಚ್ಚರಿ. ಮದುವೆ ದಿನವನ್ನು ಗೊತ್ತು ಮಾಡಿಕೊಂಡ ಜನರು, ಆಕೆಯ ಮದುವೆಯನ್ನು ಅದ್ಧೂರಿಯಾಗಿ ಈಡೇರಿಸಿರುವುದಕ್ಕೆ ಇದೀಗ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋಗಳೇ ಸಾಕ್ಷಿ.
Orphaned Wedding
Published on: 

Orphaned Wedding: ಅನಾಥ ಯುವತಿಯೊಬ್ಬಳು ತನಗೆ ಅಣ್ಣ-ತಮ್ಮ ಮತ್ತು ಪೋಷಕರು ಅಂತ ಯಾರೂ ಇಲ್ಲ. ಮುಂದಿನ ದಿನಗಳಲ್ಲಿ ನನ್ನ ಮದುವೆಯಿದೆ. ಅದಕ್ಕೆ ಯಾರಾದರೂ ಒಂದೆರೆಡು ಕೋಳಿಯನ್ನು ದಾನ ಮಾಡಿದರೆ, ಊಟಕ್ಕೆ ಬರುವವರಿಗೆ ಉಣಬಡಿಸಲು ಸಾಧ್ಯವಾಗುತ್ತದೆ ಎಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದೇ ತಡ ದೇಶದ ಹಲವೆಡೆಯಿಂದ ಯುವತಿಗೆ ದುಬಾರಿ ಉಡುಗೊರೆಗಳ ಜತೆ ಜನರು ಆಕೆಯ ವಿವಾಹಕ್ಕೆ ಆಗಮಿಸಿ, ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿಕೊಟ್ಟಿದ್ದಾರೆ.

ಮದುವೆಗೆ ಎರಡು ದಿನಗಳ ಮುಂಚೆ ಸ್ಥಳೀಯ ಟಿವಿ ನಿರೂಪಕರೊಬ್ಬರ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ ಇಂದು ಯುವತಿಯ ಅದೃಷ್ಟವನ್ನೇ ಬದಲಾಯಿಸಿದೆ. ಜೀವನದಲ್ಲಿ ನಿಮಗೆ ಏನು ಬೇಕು? ಎಂಬ ಪ್ರಶ್ನೆಗೆ ಉತ್ತರಿಸಿದ ಯುವತಿ, ನನ್ನ ಮದುವೆಗೆ ಬರುವ ಅತಿಥಿಗಳಿಗೆ ಊಟ ಬಡಿಸಲು ಯಾರಾದರೂ ಎರಡು ಕೋಳಿಗಳನ್ನು ದಾನ ಮಾಡಬೇಕೆಂದು ಗೋಳಿಟ್ಟಳು. ಆಕೆಯ ಈ ಕೋರಿಕೆ ಇಡೀ ದೇಶವನ್ನೇ ಭಾವುಕಗೊಳಿಸಿದ್ದು ನಿಜಕ್ಕೂ ಅಚ್ಚರಿ. ಮದುವೆ ದಿನವನ್ನು ಗೊತ್ತು ಮಾಡಿಕೊಂಡ ಜನರು, ಆಕೆಯ ಮದುವೆಯನ್ನು ಅದ್ಧೂರಿಯಾಗಿ ಈಡೇರಿಸಿರುವುದಕ್ಕೆ ಇದೀಗ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋಗಳೇ ಸಾಕ್ಷಿ.

ಯುವತಿ ಮದುವೆಗೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಸಾವಿರಾರು ಮಂದಿ ಭೇಟಿ ನೀಡಿದ್ದು, ಆಕೆಯ ಮದುವೆಗೆ ಖುದ್ದಾಗಿ ಹಾಜರಿ ಹಾಕಿ, ದುಬಾರಿ ಮೌಲ್ಯದ ಉಡುಗೊರೆಗಳನ್ನು ಕೊಟ್ಟು ಶುಭಹಾರೈಸಿದ್ದಾರೆ. ವರದಿಗಳ ಪ್ರಕಾರ, ಆಕೆಯ ಮನೆಯಲ್ಲಿ ಇಡಲು ಸಾಧ್ಯವಾಗದಷ್ಟು ಉಡುಗೊರೆಗಳನ್ನು ಗೊತ್ತೇ ಇಲ್ಲದ ವ್ಯಕ್ತಿಗಳು ನೀಡಿರುವುದು ನಿಜಕ್ಕೂ ಆಶ್ಚರ್ಯಕರವೇ. ಒಬ್ಬ ಉದ್ಯಮಿಯಂತು ಆಕೆಗೆ ಅಮೂಲ್ಯವಾದ ಆಭರಣಗಳನ್ನು ಗಿಫ್ಟ್​ ರೂಪದಲ್ಲಿ ನೀಡಿದ್ದಾರೆ.

Also Read
ಏಕಲವ್ಯ, ಧನಂಜಯ, ಸುಗ್ರೀವ... ಈ ಬಾರಿಯ ನಾಡಹಬ್ಬದಲ್ಲಿ ಚಿನ್ನದ ಅಂಬಾರಿ ಹೊರಲು ಪ್ರಶಾಂತ ಆನೆ ಆಯ್ಕೆ! | Mysuru Dasara
Orphaned Wedding

ಅಸಲಿಗೆ, ವಧುವಿನ ಹೆಸರು ಶಹರಾಜಾದ್. ಆಕೆ ಒಬ್ಬ ಅನಾಥೆ. ಉತ್ತರ ಆಫ್ರಿಕಾದ ಅಲ್ಜೀರಿಯಾ ದೇಶದವಳು ಎನ್ನಲಾಗಿದೆ. ಮದುವೆಗೆ ಎರಡು ದಿನಗಳ ಮೊದಲು, ಟಿವಿ ನಿರೂಪಕರೊಬ್ಬರು ಕೇಳಿದ ಪ್ರಶ್ನೆಗೆ ಆಕೆ ನೀಡಿದ ಉತ್ತರಕ್ಕೆ ಇಡೀ ಅಲ್ಜೀರಿಯಾ ದೇಶವೇ ಸ್ಪಂದಿಸಿತು. ದೇಶದ ಜನತೆಯೇ ಯುವತಿಯ ಮದುವೆಗೆ ಸಾಕ್ಷಿಯಾಯಿತು. ಅಲ್ಜೀರಿಯಾದಲ್ಲಿ ನಡೆದ ಅತ್ಯಂತ ಜನಸಂದಣಿಯಿಂದ ಕೂಡಿದ ಮತ್ತು ಉತ್ಸಾಹಭರಿತ ವಿವಾಹ ಸಮಾರಂಭ ಇದಾಗಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net