ನವದೆಹಲಿ: ವಾಟ್ಸ್ಯಾಪ್ನಲ್ಲಿ ತಲೆನೋವು ಎಂದರೆ ಫಾರ್ವರ್ಡ್ ಮೇಸೇಜ್ಗಳು ಎಂದುಕೊಳ್ಳುತ್ತಿರಾದರೆ, ಅವುಗಳು ಹೊರಬಿದ್ದಿದ್ದು ಎಲ್ಲಿಂದ? ಮೂಲವಾದರೂ ಯಾವುದು ಎಂಬುದನ್ನು ಇನ್ನು ಮೇಲೆ ಸುಲಭವಾಗಿ ಕಂಡುಕೊಳ್ಳಬಹುದು.
ಹೌದು...! ಇನ್ನುಮುಂದೆ ವಾಟ್ಸ್ಯಾಪ್ನಲ್ಲಿ 'ಸರ್ಚ್ ದಿ ವೆಬ್' ಆಪ್ಷನ್ ಇರಲಿದೆ. ಯಾವುದೇ ಫಾರ್ವಡ್ ಮೇಸೇಜ್ಗಳಲ್ಲಿರುವ ಮಾಹಿತಿಯ ಮೂಲ ಯಾವುದು ಎಂಬುದು ಗೊತ್ತಾಗಲಿದೆ.
ವಾಟ್ಸ್ಯಾಪ್ನ ಲೇಟೆಸ್ಟ್ ವರ್ಷನ್ನಲ್ಲಿ ಇಂಥದ್ದೊಂದು ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ ಇದು ಬ್ರೆಜಿಲ್, ಇಟಲಿ, ಐರ್ಲೆಂಡ್, ಮೆಕ್ಸಿಕೋ, ಸ್ಪೇನ್, ಇಂಗ್ಲೆಂಡ್ ಹಾಗೂ ಅಮೆರಿಕದಲ್ಲಿ ಲಭ್ಯವಿದೆ.
ವಾಟ್ಸ್ಯಾಪ್ನಲ್ಲಿ ಬಹಳಷ್ಟು ಬಾರಿ ಹರಿದಾಡುವ ಮೇಸೇಜ್ಗಳ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚುವ ಸರಳ ಅವಕಾಶ ಕಲ್ಪಿಸುವುದರಿಂದ ಅದರ ಸುದ್ದಿ ಮೂಲ ಅಥವಾ ಮಾಹಿತಿ ಮೂಲ ಯಾವುದೆಂದು ಕಂಡುಕೊಳ್ಳಬಹುದು ಎಂದು ವಾಟ್ಸ್ಯಾಪ್ ತಿಳಿಸಿದೆ.
ಇದನ್ನೂ ಓದಿ; ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ; ಒಂದೇ ಕುಟುಂಬದ 13 ಜನ ಪಾಸ್
ಮೇಸೇಜ್ ನೋಡದೆ ಅಥವಾ ಅದನ್ನು ಇನ್ನೊಬ್ಬರಿಗೆ ಕಳುಹಿಸದೇ ತಮ್ಮ ಬ್ರೌಸರ್ಗಳ ಮೂಲಕ ಅಪ್ಲೋಡ್ ಮಾಡುವ ಅವಕಾಶ ಇದರಲ್ಲಿರಲಿದೆ. ಸದ್ಯ ಭಾರತದಲ್ಲಿ ಈ ಸೌಲಭ್ಯ ಯಾವಾಗ ಲಬ್ಯವಾಗಲಿದೆ ಎಂಬುದನ್ನು ಕಂಪನಿ ತಿಳಿಸಿಲ್ಲ. ಆದರೆ, ಆದಷ್ಟು ಶೀಘ್ರ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಇದಲ್ಲದೇ, ಬೇರೆ ಬೇರೆ ಡಿವೈಸ್ಗಳಲ್ಲಿ ಒಂದೇ ಅಕೌಂಟ್ ಮೂಲಕ ಲಾಗಿನ್ ಆಗುವ ಸೌಲಭ್ಯವನ್ನು ಕಲ್ಪಿಸುವ ಕುರಿತು ವಾಟ್ಸ್ಯಾಪ್ ಕಾರ್ಯೋನ್ಮುಖವಾಗಿದೆ.