ನ್ಯೂಸ್

ಕಾಕ್​​ಪಿಟ್​​ನಲ್ಲಿ ಪೈಲಟ್​ಗಳು ಏನೆನೆಲ್ಲ ಮಾಡ್ತಾರೆ? ಕೇಳಿದರೆ ಭಯ ಹುಟ್ಟುತ್ತದೆ...ಮುಜುಗರವೂ !

lakshmihegde

ಬಹುಪಾಲು ಸಮಯವನ್ನು ವಿಮಾನದ ಮೇಲೆಯೇ ಕಳೆಯುವ ಪೈಲಟ್​​ಗಳು ಏನೆಲ್ಲ ಮಾಡುತ್ತಾರೆ? ಕಾಕ್​​ಪಿಟ್​​ನಲ್ಲಿ ಕುಳಿತುಕೊಂಡು ಹೇಗೆ ಕಾಲಕಳೆಯುತ್ತಾರೆ ಎಂಬುದನ್ನು ಜಗತ್ತಿನಾದ್ಯಂತ ಇರುವ ಹಲವು ಪೈಲಟ್​​ಗಳು ಹೇಳಿಕೊಂಡಿದ್ದಾರೆ.

ಚೆಸ್​ ಆಡುವುದು...ವಿಮಾನವನ್ನು ಅಪಾಯಕಾರಿಯಾಗಿ ಲ್ಯಾಂಡ್​ ಮಾಡಲು ಒಬ್ಬರಿಗೊಬ್ಬರು ಚಾಲೆಂಜ್​ ಮಾಡಿಕೊಳ್ಳುವುದು ಸಾಮಾನ್ಯವಂತೆ.

ಅಮೆರಿಕ ಮೂಲಕ ಪ್ರಶ್ನೋತ್ತರ ತಾಣವಾದ Quora ದಲ್ಲಿ ಅನೇಕ ಪೈಲಟ್​​ಗಳು ಇದನ್ನೆಲ್ಲ ಮುಚ್ಚುಮರೆ ಇಲ್ಲದೆ ಹಂಚಿಕೊಂಡಿದ್ದಾರೆ. ಆದರೆ ವಿಮಾನದ ಕಾಕ್​ಪಿಟ್​​ನಲ್ಲಿ ತಾವು ಮಾಡುವುದನ್ನೆಲ್ಲ ಪೈಲಟ್​​ಗಳು ಹೇಳಿಕೊಂಡಿದ್ದನ್ನು ಕೇಳಿದರೆ ಪ್ರಯಾಣಿಕರಿಗೆ ತುಸು ಆತಂಕವಾಗದೆ ಇರದು.

ಸಾಮಾನ್ಯವಾಗಿ ಸುದೀರ್ಘ ಪ್ರಯಾಣ ಮಾಡಬೇಕಾದಾಗ ಕ್ಯಾಪ್ಟನ್​​ಗಳು ಹೇಗೆ ಸಮಯ ಕಳೆಯುತ್ತಾರೆ? ಬೇಸರ ಹೇಗೆ ಕಳೆಯುತ್ತಾರೆ ಎಂಬುದು ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಅನೇಕ ಪೈಲಟ್​​ಗಳು ಓಪನ್​ ಆಗಿ ಉತ್ತರಿಸಿದ್ದಾರೆ.

ಕೆಲವೊಮ್ಮೆ ನಮಗೆ ತುಂಬ ಬೇಸರವಾಗುತ್ತದೆ. ಆಗ ನಮ್ಮನಮ್ಮಲ್ಲೇ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತೇವೆ. ನಾವು ನಿಜಕ್ಕೂ ಮಾಡಬಾರದು, ಅಂಥ ಕೆಲಸಗಳ ಬಗ್ಗೆ ಚಾಲೆಂಜ್ ಮಾಡಿಕೊಳ್ಳುತ್ತೇವೆ. ಅಂದರೆ ಥ್ರೋಟಲ್​​ನ್ನು ಮುಟ್ಟದೆ ಪೈಲಟ್​ ಎಷ್ಟು ದೂರದವರೆಗೆ ವಿಮಾನವನ್ನು ಕೊಂಡೊಯ್ಯಬಹುದು ಅಥವಾ ಹೇಗೆ ಲ್ಯಾಂಡ್ ಮಾಡಬಹುದು ಎಂಬ ವಿಚಾರದಲ್ಲಿ ಬೆಟ್​ ಕಟ್ಟಲಾಗುತ್ತದೆ. ನಾವೂ ಇದನ್ನು ಮಾಡಿದ್ದೇವೆ ಎಂದು ಅಮೆರಿಕದ ಓರ್ವ ಪೈಲಟ್​ ಝುಮ್​ವಾಲ್ಟ್​ ಹೇಳಿದ್ದಾರೆ. ಆದರೆ ಇದು ನಿಜಕ್ಕೂ ಅಪಾಯಕಾರಿ. ವಿಮಾನ ಲ್ಯಾಂಡ್​ ಆಗುವ ಸಂದರ್ಭದಲ್ಲಿ ಅದರ ವೇಗ ನಿಯಂತ್ರಣ ಮಾಡಲು ಥ್ರೋಟಲ್​ ಅತ್ಯಗತ್ಯ. ಅದನ್ನು ಪೈಲಟ್​​ಗಳು ಮುಟ್ಟದೆ ವಿಮಾನ ಲ್ಯಾಂಡ್​ ಮಾಡುವುದು ತೀವ್ರ ಅಪಾಯಕಾರಿ ಎಂದೂ ಅವರು ಹೇಳಿದ್ದಾರೆ.

ಬರೀ ಇದಷ್ಟೇ ಅಲ್ಲ. ಇಂಥ ಹಲವು ಅನೇಕ ಅಪಾಯಕಾರಿ ಸವಾಲುಗಳನ್ನು ಪರಸ್ಪರ ನಮ್ಮಲ್ಲೇ ಹಾಕಿಕೊಳ್ಳಲಾಗುತ್ತದೆ. ಇದರಲ್ಲಿ ಒಂದು ಥ್ರಿಲ್​ ಸಿಗುತ್ತದೆ ಎಂದವರು ತಿಳಿಸಿದ್ದಾರೆ.

ಹಾಗೇ ಫಿಲ್ ಸೀಲಿ ಎಂಬ ಪೈಲಟ್​ ಮತ್ತೊಂದು ವಿಷಯ ಹೇಳಿದ್ದಾರೆ. ಕೆಲವೊಮ್ಮೆ ಮೋಡಗಳನ್ನು ನೋಡಿನೋಡಿ ಬೇಸರ ಹುಟ್ಟುತ್ತದೆ. ಆಗೆಲ್ಲ, ವಿಮಾನದೊಳಗೆ ಇರುವ ಪ್ರಯಾಣಿಕರನ್ನು ನೋಡುತ್ತ ಕಾಲ ಕಳೆಯುತ್ತೇವೆ. ಅವರನ್ನೆಲ್ಲ ಗಮನಿಸುತ್ತ ಕುಳಿತರೆ ಸಮಯ ಸರಿದದ್ದು ಗೊತ್ತಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.

ಹಾಗೇ ಇನ್ನೋರ್ವ ಪೈಲಟ್​ ತನ್ನ ಸ್ನೇಹಿತನೋರ್ವ ಬೇಸರ ಕಳೆಯಲು ಮಧ್ಯದಲ್ಲೇ ಸಣ್ಣ ನಿದ್ರೆಗೆ ಜಾರುತ್ತಿದ್ದ ಎಂಬ ಭಯ ಹುಟ್ಟಿಸುವ ವಿಚಾರವನ್ನೂ ತಿಳಿಸಿದ್ದಾರೆ. ಆತ ಆಟೋ ಪೈಲಟ್​ ಮೋಡ್​ಗೆ ಸ್ವಿಚ್​ ಆನ್​ ಮಾಡಿ ತಾನು ಸ್ವಲ್ಪ ಸಮಯ ನಿದ್ದೆಗೆ ಜಾರುತ್ತಿದ್ದ. ಯಾವಾಗ ವಿಮಾನ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದಂತೆ ಎಚ್ಚರಗೊಳ್ಳುತ್ತಿದ್ದ. ಆದರೆ ಇದೂ ಕೂಡ ಒಳ್ಳೆಯದಲ್ಲ ಎಂದವರು ತಿಳಿಸಿದ್ದಾರೆ.

ಪೈಲಟ್​ ಡೇನಿಯಲ್ ಹಿಕ್​ಮ್ಯಾನ್​ ಎಂಬುವರು ಇನ್ನೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಒಂದಷ್ಟು ಪೈಲಟ್​​ಗಳು ಎರೋಪ್ಲೇನ್​ ಮೇಲೆಯೇ ಸೆಕ್ಸ್​ ಮಾಡುತ್ತಿದ್ದರು. ಈಗಲೂ ಕೆಲವರು ಹಾಗೆ ಮಾಡುತ್ತಾರೆ ಎಂಬ ಮುಜುಗರದ ವಿಷಯವನ್ನೂ ತಿಳಿಸಿದ್ದಾರೆ. ಕೆಲವರು ಮದ್ಯ ಸೇವಿಸುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಇದನ್ನೂ ಓದಿ: ಪ್ರಣಬ್​ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ; ಶ್ವಾಸಕೋಶದ ಸೋಂಕು ಉಲ್ಬಣ

ಈಗ ಇಷ್ಟೆಲ್ಲ ಕೇಳಿದ ಮೇಲೆ ಪ್ರಯಾಣಿಕರಲ್ಲೂ ಆತಂಕ ಶುರುವಾಗಿದೆ. (ಏಜೆನ್ಸೀಸ್​)