ನ್ಯೂಸ್

ಮೋದಿ ಗ್ಯಾರಂಟಿಯಲ್ಲಿ ಯಾರ್‍ಯಾರಿಗೆ ಏನೇನು?

Webdesk - Manjunatha B

ಪ್ರಧಾನಿ ನರೇಂದ್ರ ಮೋದಿ ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಮಹಿಳೆಯರು, ರೈತರು, ಯುವಕರು, ಹಿರಿಯ ನಾಗರಿಕರು ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದು, ಏನೆಲ್ಲ ಭರವಸೆ ನೀಡಲಾಗಿದೆ ಎಂಬುದರ ವಿವರ ಇಲ್ಲಿದೆ.

ಬಡವರು
  • ಉಚಿತ ಪಡಿತರ ಯೋಜನೆ ಐದು ವರ್ಷ ವಿಸ್ತರಣೆ.
  • ಬೆಲೆಯನ್ನು ಸ್ಥಿರಗೊಳಿಸಲು, ಬಡವರ ಆಹಾರ ಪದ್ಧತಿಗಳನ್ನು ರಕ್ಷಿಸಲು ಬೇಳೆಕಾಳುಗಳು, ಖಾದ್ಯ ತೈಲಗಳು,ತರಕಾರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಗಮನ.
  • ಉಚಿತ ಆರೋಗ್ಯ ಸೇವೆಗಳಿಗಾಗಿ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ.
  • ಪ್ರಧಾನಮಂತ್ರಿ ಆವಾಸ್ ಯೋಜನೆ ವಿಸ್ತರಣೆ.
  • ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ.
  • ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಚಿತ ಸೌರ ವಿದ್ಯುತ್ ಒದಗಿಸುವ ಮೂಲಕ ವಿದ್ಯುತ್ ಬಿಲ್​ಗಳನ್ನು ಶೂನ್ಯಗೊಳಿಸುವುದು.
ಮಹಿಳೆಯರು
  • ಗ್ರಾಮೀಣ ಮಹಿಳೆಯರಿಗಾಗಿ ಲಖ್​ಪತಿ (ಲಕ್ಷಾಧಿಪತಿ) ದೀದಿ ಸ್ವ-ಸಹಾಯ ಗುಂಪು ಉಪಕ್ರಮದ ವಿಸ್ತರಣೆ.
  • ಸೇವಾ ವಲಯಕ್ಕೆ ಮಹಿಳಾ ಸ್ವ- ಸಹಾಯ ಗುಂಪುಗಳ ಸಂಯೋಜನೆ ಮತ್ತು ಅವರ ಮಾರುಕಟ್ಟೆ ಪ್ರವೇಶ ಹೆಚ್ಚಳ.
  • ಉದ್ಯೋಗಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿ ಸಲು ಮಹಿಳಾ ಹಾಸ್ಟೆಲ್​ಗಳು, ಶಿಶುವಿಹಾರ ಗಳಂಥ ಮೂಲಸೌಕರ್ಯಗಳ ಅಭಿವೃದ್ಧಿ.
  • ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆ ಯರಿಗಾಗಿ ಹೆಚ್ಚಿನ ಶೌಚಗೃಹಗಳ ನಿರ್ವಣ.
  • ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆ ಮೇಲೆ ಕೇಂದ್ರೀಕರಿಸಿದ ಆರೋಗ್ಯ ಸೇವೆಗಳ ವಿಸ್ತರಣೆ.
  • ಸಂಸತ್ತು,ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಖಚಿತಪಡಿಸಲು ನಾರಿ ಶಕ್ತಿ ವಂದನ್ ಅಧಿನಿಯಮ್ ಜಾರಿ.
ಮೂಲಸೌಕರ್ಯ
  • ಪ್ರಯಾಣಿಕರ, ಸರಕು ಸಾಗಣೆ ಯ ಸಾಮರ್ಥ್ಯವನ್ನು ಹೆಚ್ಚಿ ಸಲು ರೈಲ್ವೆ ಜಾಲದ ವಿಸ್ತರಣೆ.
  • ಕವಚ ರೈಲು ರಕ್ಷಣಾ ವ್ಯವಸ್ಥೆ
  • ರೈಲ್ವೆ ನಿಲ್ದಾಣಗಳ ಅಭಿವೃದ್ಧಿ.
  • ವಂದೇ ಸ್ಲೀಪರ್ ರೈಲುಗಳ ವಿಸ್ತರಣೆ.
  • ಮೆಟ್ರೋ ಜಾಲ ವಿಸ್ತರಣೆ.
  • ಗ್ರಾಮೀಣ ರಸ್ತೆ ಸಂಪರ್ಕದ ವಿಸ್ತರಣೆ.
  • ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರಗಳ ಸುತ್ತ ವರ್ತಲ ರಸ್ತೆಗಳು.
  • ಎಲೆಕ್ಟ್ರಿಕ್ ವಾಹನಗಳ ಪ್ರಚಾರ, ಚಾರ್ಜಿಂಗ್ ಕೇಂದ್ರ ಸ್ಥಾಪನೆ.
  • ಹೆಚ್ಚು ವಿಮಾನ ನಿಲ್ದಾಣಗಳ ನಿರ್ವಣ, ಸೇವೆಗಳ ವಿಸ್ತರಣೆ.
  • ವಾಟರ್ ಮೆಟ್ರೋ ವಿಸ್ತರಣೆ, ಸ್ವದೇಶಿ ಹಡಗು ಉದ್ಯಮದ ನಿರ್ವಣ.
ಹಿರಿಯ ನಾಗರಿಕರು
  • ಹಿರಿಯ ನಾಗರಿಕರನ್ನು ಒಳಗೊಳ್ಳಲು ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ.
  • ರಾಷ್ಟ್ರೀಯ ಹಿರಿಯ ನಾಗರಿಕರ ಪೋರ್ಟಲ್ ಮೂಲಕ ಹಿರಿಯ ನಾಗರಿಕರಿಂದ ಜ್ಞಾನ ವಿನಿಮಯಕ್ಕೆ ಅನುಕೂಲ ಕಲ್ಪಿಸುವುದು.
  • ಸಾಮಾಜಿಕ ಭದ್ರತೆ ಪ್ರಯೋಜನಗಳು ಮತ್ತು ಇತರ ಸೇವೆಗಳು ಮನೆಬಾಗಿಲಿಗೆ ಸುಗಮವಾಗಿ ತಲುಪುವುದನ್ನು ಖಚಿತಪಡಿಸುವುದು.
ಯುವಜನರು
  • ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ತಡೆಯಲು ಕಾನೂನುಗಳ ಅನುಷ್ಠಾನ.
  • ಪಾರದರ್ಶಕ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದು.
  • ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ವಿಸ್ತರಣೆ.
  • ಉದ್ಯೋಗಾವಕಾಶಗಳ ಸೃಷ್ಟಿ.
  • ಪ್ರವಾಸೋದ್ಯಮ ಕ್ಷೇತ್ರವನ್ನು ವಿಸ್ತರಿಸುವ ಮೂಲಕ ಉದ್ಯೋ ಗಗಳನ್ನು ಒದಗಿಸುವುದು.
ರೈತರು
  • ರೈತರಿಗೆ ವರ್ಷಕ್ಕೆ -ಠಿ; 6,000 ನೀಡಿಕೆ ಮುಂದುವರಿಕೆ.
  • ತಂತ್ರಜ್ಞಾನದ ಬಳಕೆಯಿಂದ ಬೆಳೆ ವಿಮಾ ಯೋಜನೆಯ ಬಲವರ್ಧನೆ.
  • ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಕಾಲಿಕ ಹೆಚ್ಚಳದ ಮುಂದುವರಿಕೆ.
  • ನೈಸರ್ಗಿಕ ಕೃಷಿ ಮತ್ತು ವೈವಿಧ್ಯಮ ಯ ಬೆಳೆಗಳಿಗೆ ಹೆಚ್ಚಿನ ಗಮನ.
ಸಣ್ಣ ವ್ಯಾಪಾರಗಳು
  • ಸುಲಭವಾಗಿ ಲಭ್ಯವಿರುವ ಕಾರ್ಯ ಬಂಡವಾಳ (ರ್ವಂಗ್ ಕ್ಯಾಪಿಟಲ್).
  • ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ವಿಸ್ತರಣೆ.
  • ಸಣ್ಣ ವ್ಯಾಪಾರಗಳಿಗೆ ನಿಯಮ ಗಳು ಮತ್ತು ನಿಬಂಧನೆಗಳ ಸರಳೀಕರಣ.
ಆಡಳಿತ
  • ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಕೆ.
  • ರಾಜ್ಯ ನೀತಿಯ ನಿರ್ದೇಶಕ ತತ್ವವಾಗಿ ಏಕರೂಪ ನಾಗರಿಕ ಸಂಹಿತೆ ಜಾರಿ.
  • ನ್ಯಾಯಾಲಯಗಳಲ್ಲಿನ ವ್ಯಾಜ್ಯಗಳ ತ್ವರಿತ ಪರಿಹಾರಕ್ಕಾಗಿ ರಾಷ್ಟ್ರೀಯ ದಾವೆ ನೀತಿ ರೂಪಣೆ.
ಪರಂಪರೆ
  • ಪ್ರವಾಸಿತಾಣಗಳ ಅಭಿವೃದ್ಧಿ.
  • ಅಯೋಧ್ಯೆಯ ಸಮಗ್ರ ಅಭಿವೃದ್ಧಿ
  • ಭಾರತೀಯ ಹಸ್ತಪ್ರತಿಗಳ ಅಧ್ಯಯನ, ಡಿಜಿಟಲೀಕರಣದ ಮುಂದುವರಿಕೆ.
  • ವಿದೇಶಿ ಭಾಷೆಗಳಿಗೆ ಭಾರತೀಯ ಸಾಹಿತ್ಯ ಕೃತಿಗಳ ಅನುವಾದ.
  • ಭಾರತೀಯ ಪುರಾತತ್ವ ಸರ್ವೆಕ್ಷಣಾ ಲಯ ಸ್ಮಾರಕಗಳ ಅಭಿವೃದ್ಧಿ.
  • ಭಾರತೀಯ ಮದುವೆಗಳ ವೈಭವದ ಪ್ರದರ್ಶನಕ್ಕೆ ‘ಭಾರತದಲ್ಲಿ ವಿವಾಹ ವಾಗಿ’ (ವೆಡ್ ಇನ್ ಇಂಡಿಯಾ) ಅಭಿಯಾನಕ್ಕೆ ಉತ್ತೇಜನ.
ಸುರಕ್ಷಿತ ಭಾರತಕ್ಕಾಗಿ
  • ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಭಾರತದ ಸೈಬರ್ ಭದ್ರತೆಯ ಹೆಚ್ಚಳ.
  • ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಾಮರ್ಥ್ಯ ಹೆಚ್ಚಳ.
  • ಎಡಪಂಥೀಯ ಉಗ್ರವಾದ ವನ್ನು ಕೊನೆಗೊಳಿಸುವುದು.
  • ಹೊಸ ದಂಡ ಸಂಹಿತೆಯ ಅನುಷ್ಠಾನ.
  • ಮಾದಕದ್ರವ್ಯಗಳ ವಿರುದ್ಧ ಹೋರಾಡಲು ತಂತ್ರಜ್ಞಾನ, ಕಾನೂನು ಚೌಕಟ್ಟು ಮತ್ತು ಬೇಹುಗಾರಿಕೆ ಬಳಕೆ.
ಕಾರ್ವಿುಕರು
  • ಕನಿಷ್ಠ ವೇತನದ ಪರಿಶೀಲನೆ.
  • ಸಂಘಟಿತ ವಲಯದ ಕಾರ್ವಿು ಕರಿಗೆ ವಿಮಾ ಯೋಜನೆಗಳು ಮತ್ತು ಅವುಗಳ ಲಾಭ ಪಡೆ ಯಲು ಡಿಜಿಟಲ್ ವಿಧಾನಗಳು.
  • ತಾತ್ಕಾಲಿಕ ಕೆಲಸಗಾರರು ಸೇರಿ ದಂತೆ ಅಸಂಘಟಿತ ವಲಯದ ಕಾರ್ವಿುಕರಿಗೆ ನೆರವಾಗಲು ಇ- ಶ್ರಮ್ ಪೋರ್ಟಲ್​ನ ವಿಸ್ತರಣೆ.
  • ಹಬ್ಬ ಹರಿದಿನಗಳಲ್ಲಿ ವಲಸೆ ಕಾರ್ವಿುಕರಿಗೆ ವಿಶೇಷ ರೈಲುಗಳನ್ನು ಒದಗಿಸುವುದು.
  • ಟ್ರಕ್ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉತ್ತಮ ಸೌಲಭ್ಯಗಳು.
ಜಾಗತಿಕ ಸಂಬಂಧಗಳು
  • ದಕ್ಷಿಣ ಗೋಳಾರ್ಧದ ಪ್ರಮುಖ ಧ್ವನಿಯಾಗಿ ಭಾರತದ ಸ್ಥಾನದ ಬಲಪಡಿಸುವಿಕೆ.
  • ಭಾರತದ ಮಾನವೀಯ ಪರಿಹಾರ, ವಿಪತ್ತು ಸ್ಪಂದನೆ ಕಾರ್ಯಕ್ರಮಗಳನ್ನು ಮುಂದುವರಿಸುವ ಮೂಲಕ ಮೊದಲ ಪ್ರತಿಸ್ಪಂದಕರಾಗಲು ಗಮನ.
  • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಪಡೆಯಲು ಬದ್ಧತೆ.
  • ಜಾಗತಿಕ ಭಯೋತ್ಪಾದನೆಯ ವಿರುದ್ಧ ಒಮ್ಮತವನ್ನು ರೂಪಿಸಲು, ಭಯೋತ್ಪಾದಕರ ಹಣದ ಮೂಲ ಹತ್ತಿಕ್ಕುವ ಪ್ರಯತ್ನಗಳ ಮುಂದುವರಿಕೆ.
  • ಭಾರತದ ರಾಜತಾಂತ್ರಿಕ ಜಾಲದ ವಿಸ್ತರಣೆ.
  • ಭಾರತದ ಬೆಳವಣಿಗೆ,ಸಮೃದ್ಧಿಯಲ್ಲಿ ಅನಿವಾಸಿ ಭಾರತೀಯರನ್ನು ಒಳಗೊಳ್ಳುವುದು.
ಸಂಕಲ್ಪಪತ್ರದ ಮೂಲಕ ಜನಸಾಮಾನ್ಯರಿಗೆ ಅಭಯ: ‘ನಿಮ್ಮ ಖರ್ಚಿನ ಬಗ್ಗೆ ಯೋಚಿಸಬೇಡಿ; ನಾನಿದ್ದೇನೆ’ ಎನ್ನುತ್ತಾರೆ ಭಾಜಪ ಸಂಕಲ್ಪಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ. ಹಾಗೆಯೇ, ನೀವು ಪರಾವಲಂಬಿ ಆಗಬೇಡಿ; ಸ್ವಾಭಿಮಾನಿ ಆಗಿ. ನಿಮ್ಮ ದುಡಿಮೆಗೆ ನಾವು ದಾರಿ ತೋರಿಸುತ್ತೇವೆ. ಹಣ ಕೊಡುತ್ತೇವೆ. ನೀವು ದುಡಿಯಿರಿ. ಬೇರೆಯವರಿಗೂ ಕೆಲಸ ಕೊಡಿ ಎನ್ನುವುದು ಮೋದಿ ಅವರ ಹಾದಿ. ನಿಮ್ಮ ಬದುಕು ಚೆನ್ನಾಗಿರಬೇಕು. ನಾವು ದುಡ್ಡು ಕೊಡುತ್ತೇವೆ; ನಿಮ್ಮ ಖರ್ಚು ಕಡಿಮೆ ಮಾಡಿ, ನಿಮಗೆ ದುಡ್ಡು ಉಳಿಸುತ್ತೇವೆ. ನಿಮ್ಮ ಬದುಕಿಗೆ ನಾವು ಆಸರೆ ಆಗುತ್ತೇವೆ. ಇದು ಅವರ ಮಂತ್ರ.

ನಿಮಗೆ ಬೇಕಾದ ದವಸಧಾನ್ಯ ನಾವು ಕೊಡುತ್ತೇವೆ. ನೀವು ಹಸಿದಿರಬಾರದು; ನಮಗೆ ಅದು ಮುಖ್ಯ ಎಂದು ಮೋದಿ ಅವರು 5 ವರ್ಷ 80 ಕೋಟಿ ಜನರಿಗೆ ಅನ್ನಭಾಗ್ಯ ನೀಡಿದ್ದಾರೆ. ಅಡುಗೆಗೆ ಎಲ್​ಪಿಜಿ ಗ್ಯಾಸ್ ನೀಡಿದ್ದಾರೆ. ‘ಅನಾರೋಗ್ಯವಾದರೆ ನಾನಿದ್ದೇನೆ’ ಎಂದು ಆಯುಷ್ಮಾನ್ ಭಾರತ ನೀಡಿದ್ದಾರೆ. 70 ವರ್ಷ ದಾಟಿದವರಿಗೆ ಈ ಆರೋಗ್ಯಭಾಗ್ಯ ವಿಸ್ತರಿಸಿದ್ದಾರೆ.

ಮತ್ತೊಂದು ಮಹಾನ್ ಯೋಜನೆ ಎಂದರೆ ಸೌರಭಾಗ್ಯ. ಸೌರಶಕ್ತಿ ಮೂಲಕ ಮನೆಮನೆಗೆ ವಿದ್ಯುತ್ ಭಾಗ್ಯ ನೀಡುತ್ತಾರೆ ಅವರು. ಅವರು ಹೇಳಿದ್ದನ್ನು ಈವರೆಗೆ ಮಾಡಿದ್ದಾರೆ. ಇದನ್ನೂ ಮಾಡುತ್ತಾರೆ. ಆ ಗ್ಯಾರಂಟಿ ನಮ್ಮ ಜನರಲ್ಲಿದೆ. ಮನೆಮನೆಗೆ ವಿದ್ಯುತ್ ಎಂಬುದರ ಅರ್ಥ ದೊಡ್ಡದಿದೆ. ಇಲ್ಲಿ ನಿಮ್ಮ ಖರ್ಚನ್ನು ಉಳಿಸುವುದರ ಮೂಲಕ ನಿಮಗೆ ಹಣವನ್ನು ಪ್ರತಿ ತಿಂಗಳೂ ಸಿಗುವಂತೆ ಮಾಡಿರುವುದು ಮೋದಿ ಬುದ್ಧಿವಂತಿಕೆ ಮಾತ್ರವಲ್ಲ, ಉತ್ತಮ ಆರ್ಥಿಕ ನೀತಿ ಇಲ್ಲಿದೆ.

ನಿಮ್ಮ ಜೇಬಿನಲ್ಲಿ ಹಣ ಉಳಿಸುವ ಬುದ್ಧಿವಂತಿಕೆ ಇದು. ಇಲ್ಲಿ ಸೋರಿಕೆ ಇಲ್ಲ; ಮನೆಮನಗೆ ಉಳಿತಾಯ ಹೋಗುತ್ತದೆ. ರಾಜ್ಯ ಸರ್ಕಾರಗಳು ವಿದ್ಯುತ್ ಖರೀದಿಸಿ ಮನೆಮನೆಗೆ ನೀಡುತ್ತವೆ. ಇದೊಂದು ದೊಡ್ಡ ಅವ್ಯವಹಾರದ ಹುತ್ತ. ಪೂರೈಕೆಯಲ್ಲಿ ಮೋಸ, ಖರೀದಿಯಲ್ಲಿ ಮೋಸ, ಗೃಹಸೌರ ವಿದ್ಯುತ್ ಭಾಗ್ಯದಿಂದ ರಾಜ್ಯ ಸರ್ಕಾರಗಳು ಸಾಲ ಮಾಡುವುದು ಕಡಿಮೆ ಆಗುತ್ತದೆ. ಬಡ್ಡಿ ಖರ್ಚು ಇಳಿಯುತ್ತದೆ. ರಾಜ್ಯ ಬಜೆಟ್​ನ ಆರೋಗ್ಯ ಉತ್ತಮ ಆಗುತ್ತದೆ.

ಮುಖ್ಯವಾದ ವಿಚಾರ ಅಂದರೆ ದುಡಿಮೆಗೆ ಹಳ್ಳಿಗಾಡಿನಲ್ಲೇ ಹೆಚ್ಚು ದಾರಿಗೆ ಅವಕಾಶ ನೀಡುವುದು. ಹಲವು ದಾರಿಗಳಲ್ಲಿ ಹಳ್ಳಿಗರಿಗೆ ಪಶುಪಾಲನೆ ಇತ್ಯಾದಿಗಳ ಮೂಲಕ ಹೆಚ್ಚು ಹಣ ನೀಡುವುದು ಉತ್ತಮ ಉದ್ದೇಶವಾಗಿದೆ. ‘ನೀವು ದುಡಿಯಿರಿ. ಉಳಿದವರಿಗೂ ದುಡಿಮೆಗೆ ನೀವು ಹಾದಿ ತೋರಿ. ನಾವು ದುಡ್ಡು ಕೊಡುತ್ತೇವೆ’- ಇದು ಉದ್ಯೋಗಮಂತ್ರವಾಗಿದೆ. ಮೋದಿ ಸಂಕಲ್ಪಪತ್ರದಲ್ಲಿ ಜನರ ಬದುಕಿಗೆ ಸುರಕ್ಷಾಚಕ್ರವಾಗುವುದು ಭಾಜಪ ಸಂಕಲ್ಪಪತ್ರದ ಸ್ಪಷ್ಟ ಉದ್ದೇಶ. ಇದು ಮಾತ್ರವಲ್ಲ, ಆಂತರಿಕ ಶತ್ರುಗಳು ಹಾಗೂ ಬಾಹ್ಯ ಶತ್ರುಗಳು ಯಾರೇ ಇದ್ದರೂ ಅಂಥ ಶಕ್ತಿಗಳನ್ನು ಬಗ್ಗುಬಡಿಯುತ್ತೇವೆ ಎಂಬುದರ ಮೂಲಕ ದೇಶಕ್ಕೆ ಮೋದಿ ಸುರಕ್ಷಾ ಚಕ್ರ ಇದೆ ಎಂಬುದನ್ನು ಸ್ಪಷ್ಟವಾಗಿ ಇಲ್ಲಿ ತಿಳಿಸಲಾಗಿದೆ. ದೇಶದ ಸುರಕ್ಷಾ ಚಕ್ರದ ಮಾತು ಭಾಜಪ ಮಾತ್ರ ಆಡಬಹುದು. ಉಳಿದ ಪಕ್ಷಗಳಲ್ಲಿ ಅಂಥ ಲಕ್ಷ್ಯವೂ ಇಲ್ಲ. ಮನಸ್ಸು ಇಲ್ಲ.