Vasthu tips | ವಾಸ್ತು ಮತ್ತು ಬಣ್ಣಗಳಿಗೆ ಪರಸ್ಪರ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಮನೆಯ ವಾಸ್ತುವಿಗೆ ತಕ್ಕಂತಹ ಬಣ್ಣಗಳನ್ನು ಆರಿಸಿಕೊಳ್ಳುವುದು ತುಂಬಾ ಮುಖ್ಯ. ಮನೆಯ ಬಣ್ಣಗಳು ಅಲ್ಲಿ ವಾಸಿಸುವ ಜನರ ಸಂತೋಷ, ಭಾವನೆ ಮತ್ತು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಶಕ್ತಿಯನ್ನು ಪ್ರಚೋದಿಸುತ್ತದೆ ಮತ್ತು ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡುತ್ತದೆ.
ಸೂಕ್ತವಾದ ಬಣ್ಣವನ್ನು ಆರಿಸಿಕೊಂಡರೆ ಮನೆಗೆ ಸಕಾರಾತ್ಮಕ ಶಕ್ತಿ ಬರಲು ನೆರವಾಗುತ್ತದೆ. ಸರಿಯಾದ ಬಣ್ಣಗಳನ್ನು ಬಳಸುವುದರಿಂದ, ನಾವು ಮನೆಯ ವಾತಾವರಣವನ್ನು ಸುಧಾರಿಸುವುದ ಜೊತೆಗೆ ಸಂತೋಷ ಮತ್ತು ಶಾಂತಿಯನ್ನು ತಂದುಕೊಳ್ಳಬಹುದು ಎಂದು ನಂಬಲಾಗಿದೆ.
ಬಣ್ಣಕ್ಕೆ ವಿಶೇಷ ಮಹತ್ವವಿದೆ ಬಣ್ಣಗಳು ಗ್ರಹಗಳಿಂದ ನಿಯಂತ್ರಿಸಲ್ಪಡುತ್ತವೆ. ಪ್ರತಿಯೊಂದು ಬಣ್ಣದ ಹಿಂದೆಯೂ ಒಂದು ಗ್ರಹ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಬಣ್ಣಗಳು ನಮ್ಮ ಜೀವನದ ಮೇಲೆ ಸಂಪೂರ್ಣ ಪರಿಣಾಮ ಬೀರುವಂತೆಯೇ ಗ್ರಹಗಳು ನಮ್ಮ ಜೀವನದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ.
ಮಕ್ಕಳ ಅಧ್ಯಯನಕ್ಕಾಗಿ ಕೊಠಡಿಗಳನ್ನು ಹಳದಿ, ಹಸಿರು ಅಥವಾ ಕಿತ್ತಳೆ ಬಣ್ಣಗಳಿಂದ ಅಲಂಕರಿಸಬಹುದು. ಸೋಮಾರಿ ಮಕ್ಕಳ ಕೋಣೆಗೆ ಕೆಂಪು ಅಥವಾ ಕಿತ್ತಳೆ ಬಣ್ಣ ಉತ್ತಮ ಎಂದು ಹೇಳಲಾಗಿದೆ. ನಿಮ್ಮ ಮಗುವು ಸಕ್ರಿಯವಾಗಿದ್ದರೆ ಹಸಿರು ಮತ್ತು ಹಳದಿ ಬಣ್ಣವನ್ನು ಬಳಸಬೇಕು. ಮಗುವಿನ ಕೋಣೆಯಲ್ಲಿರುವ ಪರದೆಗಳು ಮತ್ತು ಹಾಸಿಗೆಗಳು ತಿಳಿ ಬಿಳಿ ಅಥವಾ ಹಸಿರು ಬಣ್ಣದ್ದಾಗಿರಬೇಕು.
ಮಲಗುವ ಕೋಣೆ ಅಂದರೆ ವಿವಾಹಿತರ ಕೋಣೆಯಾಗಿದೆ. ಇದು ಮದುವೆಯಾಗಲು ಬಯಸುವ ವ್ಯಕ್ತಿಯ ಕೋಣೆಯಾಗಿದ್ದರೆ, ನೀವು ಅದಕ್ಕೆ ಬಿಳಿ ಬಣ್ಣ ಹಚ್ಚಬಹುದು. ಮಲಗುವ ಕೋಣೆಯನ್ನು ಹುಡುಗಿಯ ಸನ್ನಿಹಿತ ಮದುವೆಗಾಗಿ ಮಾಡಿದ್ದರೆ, ನೀವು ಅದರಲ್ಲಿ ಗುಲಾಬಿ ಅಥವಾ ತಿಳಿ ಹಳದಿ ಬಣ್ಣವನ್ನು ಬಳಸಬಹುದಾಗಿದೆ.
ಅಡುಗೆಮನೆ ದಕ್ಷಿಣದಲ್ಲಿದ್ದರೆ ಅದಕ್ಕೆ ಕೆಂಪು ಅಥವಾ ಕಿತ್ತಳೆ ಬಣ್ಣವನ್ನು ಸಿಂಪಡಿಸಬೇಕು.
ಮನೆಯ ಮುಖ್ಯಸ್ಥರು 30 ರಿಂದ 45 ವರ್ಷ ವಯಸ್ಸಿನವರಾಗಿದ್ದರೆ, ಕೋಣೆಯ ಬಣ್ಣ ತಿಳಿ ಕಿತ್ತಳೆ, ಗುಲಾಬಿ, ತಿಳಿ ಗುಲಾಬಿ ಅಥವಾ ಕೆಂಪು ಬಣ್ಣದಿಂದ ಕೂಡಿರಬೇಕು. 45 ರಿಂದ 60 ವರ್ಷದೊಳಗಿನ ವೃದ್ಧರ ಕೋಣೆಗೆ ಹಳದಿ ಅಥವಾ ಬಿಳಿ ಬಣ್ಣವನ್ನು ಬಳಿಯಬೇಕು.
ಮನೆಯಲ್ಲಿ ಶನಿ ಮತ್ತು ರಾಹು ವಾಸಿಸುವುದರಿಂದ ಕಪ್ಪು, ನೇರಳೆ ಹಾಗೂ ನೀಲಿ ಬಣ್ಣಗಳನ್ನು ಹಚ್ಚಬಾರದು. ಇದು ಮನೆಯ ಜನರಲ್ಲಿ ಸೋಮಾರಿತನ, ಸ್ವಾರ್ಥ, ಕಿರಿಕಿರಿ, ನಕಾರಾತ್ಮಕತೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.
(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.