ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ರನ್ನು ನೋಡಲು ಶನಿವಾರ (ಆಗಸ್ಟ್ 31) ಪತ್ನಿ ವಿಜಯಲಕ್ಷ್ಮೀ ಆಗಮಿಸಿದ್ದರು. ಪತಿಯನ್ನು ನೋಡಲು ಬಂದಾಗ ಮೂರು ಬ್ಯಾಗುಗಳಲ್ಲಿ ಅಗತ್ಯೆ ವಸ್ತುಗಳನ್ನು ತಂದಿದ್ದರು. ವಿಜಯಲಕ್ಷ್ಮಿ ಅವರನ್ನು ಒಳಗೆ ಬಿಡುವ ಮುನ್ನ ಪೊಲೀಸರು ಪರಿಶೀಲನೆ ಮಾಡಿ, ಅವರು ತಂದ ವಸ್ತುಗಳನ್ನು ಸಹ ಪರಿಶೀಲನೆ ಮಾಡಿದರು. ಆದರೆ ಒಂದು ವಸ್ತುವನ್ನು ಮಾತ್ರ ವಾಪಸ್ ಕಳುಹಿಸಿದ್ದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಿಸನ್ ಡಿಐಜಿ ಟಿ. ಶೇಷ ಅವರು, ವಿಜಯಲಕ್ಷ್ಮಿ ಅವರು ದರ್ಶನ್ಗಾಗಿ ಡ್ರೈ ಫ್ರೂಟ್ಸ್, ಸೋಪು, ಶಾಂಪು, ಪೇಸ್ಟುಗಳನ್ನು ತಂದಿದ್ದರು. ಬಟ್ಟೆಗಳನ್ನು ಸಹ ತಂದಿದ್ದರು. ಒಂದು ಬ್ಲಾಂಕೆಟ್ ತಂದಿದ್ದರು ಅದನ್ನು ನಾವು ವಾಪಸ್ ಕಳುಹಿಸಿದ್ದೇವೆ. ಬೆಡ್ಶೀಟ್ ಹಾಸಿಗೆಗಳನ್ನು ಹೊರಗಿನಿಂದ ಕೊಡುವಂತಿಲ್ಲ. ಜೈಲಿನ ಹಾಸಿಗೆ ಬೆಡ್ಶೀಟ್ಗಳನ್ನೇ ಬಳಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ ಎಂದು ದರ್ಶನ್ ಹೇಳಿದ್ದಾರೆ. ಈ ಬಗ್ಗೆ ಮೆಡಿಕಲ್ ರೆಕಾರ್ಡ್ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಅದನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ಅದನ್ನು ಒದಗಿಸುತ್ತೇವೆ. ಇದ್ದರೆ ದರ್ಶನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್ಗೂ ಕೊಡಿಸುತ್ತೇವೆ ಎಂದು ಪ್ರಿಸನ್ ಡಿಐಜಿ ಶೇಷ ಅವರು ತಿಳಿಸಿದ್ದಾರೆ.