ನವದೆಹಲಿ: ಪ್ರೀತಿಸಿದವರಿಗೋಸ್ಕರ ಅಥವಾ ಸಂಗಾತಿಗಾಗಿ ದೇಶಾಂತರ ಹೋಗುವವರನ್ನು ನಾವೆಲ್ಲಾ ಪ್ರಸ್ತುತ ಕಾಲಘಟ್ಟದಲ್ಲಿ ನೋಡಿದ್ದೇವೆ. ಅದರಲ್ಲೂ ಆನ್ಲೈನ್ ವ್ಯವಸ್ಥೆಗಳು ಬಹಳ ವೇಗವಾಗಿರುವ ಈ ಡಿಜಿಟಲ್ ಯುಗದಲ್ಲಿ ಪ್ರೀತಿಸಿದ ಜೀವಕ್ಕಾಗಿ ದೇಶದಿಂದ ದೇಶಕ್ಕೆ ಹಾರುವವರ ಪ್ರಸಂಗಗಳು ತೀರ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಇದಕ್ಕೆ ಕಳೆದ ವರ್ಷಗಳಲ್ಲಿ ನಡೆದಿರುವ ಕೆಲವು ಘಟನೆಗಳೇ ಜ್ವಲಂತ ಸಾಕ್ಷಿ . ಆದರೆ. ಇಂತಹ ಘಟನೆ ಪ್ರಾಣಿ (Whale) ಸಂಕುಲಗಳಲ್ಲಿಯೂ ನಡೆಯುತ್ತದೆ ಎಂದರೆ ನಂಬ್ತೀರಾ? ಇಲ್ಲ ಅಂದರೂ ಇದು ನಂಬುವಂತ, ನಂಬಲೇಬೇಕಾದ ವಿಷಯವೇ.
ಇದನ್ನೂ ಓದಿ: ಬಿಸಿ ನೀರಿಗಾಗಿ ವ್ಯಕ್ತಿಯ ಜುಗಾಡ್ ಟ್ರಿಕ್ Video Viral; ಹೊಟ್ಟೆ ಹುಣ್ಣಾಗುವಂತೆ ನಗಾಡಿದ ನೆಟ್ಟಿಗರು
ವಿಶ್ವದಲ್ಲಿ ಯಾವುದಾದರೂ ಅತೀ ದೊಡ್ಡ ಪ್ರಾಣಿ ಇದೆಯೇ? ಎಂಬ ಪ್ರಶ್ನೆಗೆ ಕೇಳಿಬರುವ ಉತ್ತರವೇ ತಿಮಿಂಗಿಲ. ಇಂತಹ ದೈತ್ಯ ಪ್ರಾಣಿಯೊಂದು ತನ್ನ ಸಂಗಾತಿಗಾಗಿ ಬರೋಬ್ಬರಿ 13 ಸಾವಿರ ಕಿಲೋಮಿಟರ್ ಪ್ರಯಾಣಿಸಿದೆ ಎಂಬ ವಿಷಯ ಸದ್ಯ ಅಂತರ್ಜಾಲದಲ್ಲಿ ತೇಲಾಡುವ ನೆಟ್ಟಿಗರನ್ನು ಭಾರೀ ಅಚ್ಚರಿಗೆ ದೂಡಿದೆ. ಈ ತಿಮಿಂಗಲ ಲೈಂಗಿಕ ಕ್ರಿಯೆ ನಡೆಸಲು ತನ್ನ ಸಂಗಾತಿಯನ್ನು ಕಡಲಾಳದಲ್ಲಿ ಹುಡುಕುತ 13,000 ಕಿಮೀ ಪ್ರಯಾಣಿಸಿದೆ. ವಿಶೇಷ ಎಂದರೆ ಇದು 2013ರಲ್ಲಿ ಕೊಲಂಬಿಯಾದ ಪೆಸಿಫಿಕ್ ಮಹಾಸಾಗರದ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಗಂಡು ಹಂಪ್‌ಬ್ಯಾಕ್ ತಿಮಿಂಗಿಲ ಎಂದು ವರದಿ ಪ್ರತ್ಯೇಕವಾಗಿ ಉಲ್ಲೇಖಿಸಿದೆ.
2013ರಲ್ಲಿ ಕೊಲಂಬಿಯಾದ ಪೆಸಿಫಿಕ್ ಮಹಾಸಾಗರದಿಂದ 2022ರಲ್ಲಿ ಹಿಂದೂ ಮಹಾಸಾಗರದ ಜಾಂಜಿಬಾರ್ ಬಳಿ ಈ ತಿಮಿಂಗಲ ಕಾಣಿಸಿಕೊಂಡಿದ್ದು, ಒಟ್ಟು 09 ವರ್ಷಗಳ ಅವಧಿಯಲ್ಲಿ 13,046 ಕಿಮೀ ಈಜಿಕೊಂಡು ಸಾಗಿದೆ ಎಂದು ವರದಿಯಾಗಿದೆ. ಸಾವಿರಾರು ಕಿಲೋಮೀಟರ್ಗಳ ಪ್ರಯಾಣಿಸಿರುವ ದೈತ್ಯ ತಿಮಿಂಗಲ, ತನ್ನ ಸಂಗಾತಿಯ ಹುಡುಕಾಟದಲ್ಲಿ ಹೊಸ ದಾಖಲೆಯನ್ನೇ ಬರೆದಿರುವುದು ಮತ್ತೊಂದು ಅಚ್ಚರಿ ಸಂಗತಿ ಎಂದೇ ಹೇಳಬಹುದು.
ಪ್ರಸ್ತುತ ಈ ತಿಮಿಂಗಿಲವು ಆಫ್ರಿಕಾದ ಜಂಜಿಬಾರ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಪೆಸಿಫಿಕ್ ಮತ್ತು ಭಾರತೀಯ ಸಾಗರಗಳ ನಡುವೆ ಪ್ರಯಾಣಿಸಿದ ಗಂಡು ಹಂಪ್‌ಬ್ಯಾಕ್ ತಿಮಿಂಗಲ ಇದೇ ಮೊದಲು. ಇದು ವಲಸೆಯಲ್ಲಿ ದಾಖಲೆಗೊಂಡ ಪ್ರಥಮ ತಿಮಿಂಗಲ" ಎನ್ನಲಾಗಿದೆ. ಸದ್ಯದ ಮಟ್ಟಿಗೆ ಹಂಪ್‌ಬ್ಯಾಕ್ ತಿಮಿಂಗಲದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿದ್ದು, ಸುದ್ದಿ ಜಾಲತಾಣಗಳಲ್ಲಿ ಈ ವಿಷಯ ಸದ್ಯ ವ್ಯಾಪಕವಾಗಿ ಸದ್ದು ಮಾಡುತ್ತಿದೆ,(ಏಜೆನ್ಸೀಸ್).