ನ್ಯೂಸ್

ಈ ರಾಶಿಯವರಿಗೆ ಶನಿಯು ಲಾಭ-ಕೀರ್ತಿ ತರುತ್ತಾನೆ: ವಾರಭವಿಷ್ಯ

ಮೇಷ

ಏಪ್ರಿಲ್ 28ರಂದು ಶನಿಯು ಏಕಾದಶಕ್ಕೆ ತಾತ್ಕಾಲಿಕವಾಗಿ ಬಂದು ನಿಮಗೆ ಏಕಾದಶ ಸ್ಥಾನ ಫಲ ಕೊಡುತ್ತಾನೆ. ದ್ವಾದಶದಲ್ಲಿ ಗುರು ಇರುವುದರಿಂದ, ಗುರುಬಲ ನಿಮ್ಮಿಂದ ದೂರ ಸರಿದಿದೆ. ವೈಯಕ್ತಿಕ ಜೀವನದಲ್ಲಿ ಮಾಡುವ ಕೆಲಸಗಳಲ್ಲಿ, ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿಮಗೆ ಏನು ತೊಂದರೆ ಇಲ್ಲದೆ ಮುಂದೆ ಸಾಗಬೇಕಾದರೆ ಗುರು ದತ್ತನ ಅನುಗ್ರಹ ಅವಶ್ಯಕ.

ವೃಷಭ

ವೃಷಭ ರಾಶಿಗೆ ದಶಮದಲ್ಲಿ ಶನಿ, ಏಕಾದಶದಲ್ಲಿ ಗುರು ಇದ್ದು, ಸರ್ವರನ್ನೂ ರಕ್ಷಣೆ ಮಾಡುವವನು ಗುರು ಒಬ್ಬನೇ. ಅಂತಹ ಗುರು ಕರ್ನಾಟಕದ ಗಂಧರ್ವಪುರದಲ್ಲಿ ನೆಲೆಸಿದ್ದಾನೆ. ಭಕ್ತರ ಕೋರಿಕೆ ಈಡೇರಿಸುವವನು ಗುರು ದತ್ತ. ಅವನು ಇಲ್ಲಿ ನೆಲೆಸಿ ನಿಮಗೆ ರಕ್ಷಣೆ ನೀಡುತ್ತಾನೆ. ಅಲ್ಲಿಗೆ ತೆರಳಿ ಏಕಾದಶದ ಗುರುವಿರುವ ಸಮಯವನ್ನು ಸರಿಯಾಗಿ ಉಪಯೋಗಿಸಿ.

ಮಿಥುನ

ದಶಮದಲ್ಲಿ ಗುರು ಇದ್ದು, ಅಷ್ಟಮ ಶನಿ ಸ್ವಲ್ಪ ಸಮಯ ದೂರ ಸರಿದು ನಿಮ್ಮ ದುಃಖದುಮ್ಮಾನಗಳನ್ನು ದೂರ ಮಾಡುತ್ತಾನೆ. ಆಗಸ್ಟ್ 12ರಂದು ಮತ್ತೆ ಹಿಂದೆ ಬಂದು ಅಷ್ಟಮ ಸಂಚಾರ ಮುಂದುವರಿಸುತ್ತಾನೆ. ಶನಿಗೆ ಪೂಜೆ ಮುಂದುವರಿಯಲಿ. ಷಣ್ಮುಖನನ್ನು ಸ್ವಾಮಿ ಮಲೈ ಕ್ಷೇತ್ರದಲ್ಲಿ ದರ್ಶಿಸಿ.

ಕಟಕ

ಸಪ್ತಮದಿಂದ ಶನಿ, ಗುರುವು ನವಮಕ್ಕೆ ಬಂದು ನಿಮ್ಮ ಸಂಕಷ್ಟ ಗಳನ್ನೂ ಬಿಡಿಸಿ ಸುಖ ನೀಡುತ್ತಾನೆ. ನೀವು ಪಾರ್ವತಿಸಹಿತ ಸಾಂಬಸದಾಶಿವನನ್ನು ಪ್ರಾರ್ಥಿಸಿ. ನಿರ್ಮಲ ಮನಸ್ಸು, ಧೈರ್ಯವೂ ನಿಮ್ಮನ್ನು ಕಾಪಾಡುತ್ತದೆ. ದೇಹವನ್ನು ಬಳಲದಂತೆ ನೋಡಿಕೊಳ್ಳಿ.

ಸಿಂಹ

ಆರರ ಶನಿ, ಏಳರ ಗುರು ಸ್ಥಾನ ಪಲ್ಲಟವಾಗಿದ್ದರೂ, ಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಕಷ್ಟಗಳು ಬಂದರೂ ದೈವಾನುಗ್ರಹದ ರಕ್ಷಣೆ ಇದೆ. ಸಪ್ತಮ ಶನಿ ಕೆಡುಕು ಉಂಟು ಮಾಡದಿದ್ದರೂ ಕೆಲ ಮಾರ್ಗ ತೋರಿ ಮುನ್ನಡೆಸುತ್ತಾನೆ. ದೃಢವಾದ ಭಕ್ತಿ ಇರಬೇಕು. ಮನಸ್ಸನ್ನು ಕಟ್ಟಿ ಹಾಕಲು ಗುರುಚರಿತ್ರೆಯನ್ನು ಪಾರಾಯಣ ಮಾಡಿ.

ಕನ್ಯಾ

ನೀವು ಹಿಂದೆ ಕಷ್ಟಗಳನ್ನು ಸಹಿಸಿ ಕೆಲವೊಂದು ಪಾಠ ಕಲಿತಿದ್ದಿರಿ. ಜೀವನವನ್ನು ಹೇಗೆ ನಡೆಸಬೇಕೆಂದು ಈಗ ಅರ್ಥವಾಗಿದೆ. ಶನಿಯು ಪಾಠ ಕಲಿಸಲು ಜೀವನದಲ್ಲಿ ಮೂರು ಬಾರಿ ಸಂಚರಿಸುತ್ತಾನೆ. ಸಮಯವನ್ನು ಸದುಪಯೋಗಪಡಿಸಿ, ಎಲ್ಲ ವಿಧದ ಸುಖ ಪಡೆದು ದಾನಧರ್ಮ ಮಾಡಿ.

ತುಲಾ

ಷಷ್ಟದಲ್ಲಿ ಗುರು ಇದ್ದು, ಪಂಚಮ ಶನಿ ಸ್ಥಾನಪಲ್ಲಟ ವಾದರೂ ಈ ಸ್ಥಿತಿ ಆಗಸ್ಟ್ 12ರವರೆಗೆ ಮಾತ್ರವೇ. ಮತ್ತೆ ಹಿಂದಿರುಗಿ ಬಂದು ಮಕರ ರಾಶಿಯನ್ನು ಸೇರು ತಾನೆ. ಸಂಯಮ, ಸತ್ಯಸಂಕಲ್ಪ, ಉಪಕಾರ ಸ್ಮರಣೆ ಇರಬೇಕು. ಶನಿ ಸ್ತೋತ್ರ ಪಾರಾಯಣ ಮಾಡಿ.

ವೃಶ್ಚಿಕ

ಪಂಚಮದಲ್ಲಿ ಗುರು ಸ್ಥಿತನಾಗಿದ್ದು, ಹಣಕಾಸು ವಿಚಾರದಲ್ಲಿ ನಿಮ್ಮನ್ನು ಯಶಸ್ವಿಯಾಗಿಸಿ, ನಿಮ್ಮ ಋಣಭಾರ ತೀರಿಸಲು ವೃಶ್ಚಿಕ ರಾಶಿಯ ಒಡೆಯನಾದ ಷಣ್ಮುಖನೇ ಗುರು ರೂಪದಲ್ಲಿ ಬಂದು ಸಮೃದ್ಧಿಯಾದ ಧನ ಕೊಟ್ಟು ಅನೇಕ ಕಷ್ಟ, ಸಮಸ್ಯೆಗಳನ್ನು ಪರಿಹರಿಸುತ್ತಾನೆ. ಮನಶಾಂತಿಯನ್ನು ಜೀವನದಲ್ಲಿ ಕೊಡುತ್ತಾನೆ. ಚತುರ್ಥ ಶನಿಗೆ ಶನಿ ಅಷ್ಟೋತ್ತರ ಪಠಿಸಿ.

ಧನು

ನಾವು ಬಯಸಿದ್ದೇ ಬೇಕು ಎಂಬುದು ಮನುಷ್ಯನ ಸಂಕಲ್ಪ. ದೇವರು ಕೊಟ್ಟದನ್ನು ಸದುಪಯೋಗ ಮಾಡಿಕೊಂಡರೆ ಪರಮಾತ್ಮ ಮೆಚ್ಚುತ್ತಾನೆ. ಗುರು ಅದಕ್ಕೆ ಒಳ್ಳೆಯದನ್ನೇ ಮಾಡುತ್ತಾನೆ. ಮೂರುವರೆ ತಿಂಗಳುಗಳ ಕಾಲ ಶನಿಯು ತೃತೀಯಕ್ಕೇ ಬಂದು ಕೀರ್ತಿಪತಾಕೆ ಹಾರಿಸಿ ಯಶಸ್ಸು ನೀಡುತ್ತಾನೆ. ಶಿವಧ್ಯಾನ ಮಾಡಿದವನಿಗೆ ಶನಿ ಕಾಟವಿಲ್ಲ.

ಮಕರ

ಗುರುವಿನ ಮೂರನೇ ಮನೆಯ ಸಂಚಾರ ಹಾಗೂ ಮಕರ ಬಿಟ್ಟು ಕುಂಭಕ್ಕೆ ಹೋಗುವ ಶನಿ, ಜನ್ಮ ಶನಿ ತಾಪವನ್ನು ಕಡಿಮೆ ಮಾಡುತ್ತಾನೆ. ಆದರೂ ಇನ್ನೂ 2 ವರ್ಷಗಳ ಕಾಲ ಶನಿ ಸಂಚಾರ ಇದ್ದು, ಮಾಡುವ ಕೆಲಸದಲ್ಲಿ ಎಚ್ಚರ ಮತ್ತು ರಕ್ಷಣೆಯನ್ನು ನೀಡುತ್ತಾನೆ. ಲಾಭ, ಕೀರ್ತಿಯನ್ನು ತರುತ್ತಾನೆ.

ಕುಂಭ

ದ್ವಾದಶ ಶನಿ 12ನೇ ಮನೆಯಿಂದ ಜನ್ಮಸ್ಥಾನದಲ್ಲಿ ಬರುತ್ತಾನೆ ಹಾಗೂ ಎರಡನೇ ಮನೆಯಲ್ಲಿ ಗುರು ಇದ್ದಾನೆ. ನಿಮ್ಮ ಜೀವನದಲ್ಲಿ ಶ್ರೇಯಸ್ಸನ್ನು, ಸಂಪಾದನೆಯನ್ನು ಕಂಡು ನಿಷ್ಠುರ ಮಾತು ಆಡುವವರನ್ನು, ನಿಮಗೆ ತೊಂದರೆ ಕೊಟ್ಟು ದ್ವೇಷಿಸುವವರನ್ನು ದೂರ ಸರಿಸುತ್ತಾನೆ. ಗುರುವಾಯೂರಪ್ಪನಿಗೆ ಪೂಜಿಸಿ.

ಮೀನ

ಜನ್ಮ ಗುರು, ದ್ವಾದಶಕ್ಕೇ ಬರುವ ಶನಿ ನಿಮ್ಮನ್ನು ಸ್ವಲ್ಪ ಕಾಲ ಚಿಂತೆಗೆ ಈಡು ಮಾಡಿ, ಮತ್ತೆ ಏಕಾದಶಕ್ಕೇ ಬಂದು ಶ್ರೇಯಸ್ಸು ಉಂಟಾಗಿ ಚಿತ್ತಶುದ್ಧಿ ಆಗುತ್ತದೆ. ಆದರೆ ಆಗಸ್ಟ್ 12ರವರೆಗಿನ ಶನಿಯ ಕಾಲವನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗಿ. ನಂಜನಗೂಡಿನ ಶ್ರೀಕಂಠೇಶ್ವರನನ್ನು ಪೂಜಿಸಿ.