ಮೇಷದಲ್ಲಿ ರಾಹು ಇದ್ದು ದ್ವಾದಶದಲ್ಲಿ ಗುರು ಇದ್ದಾನೆ. ವಹಿವಾಟುಗಳನ್ನು ಶುದ್ಧತೆ, ಸತ್ಯತೆಯಿಂದ ಕಾಪಾಡಿಕೊಂಡು ಹೋಗಿ. ನಿಮ್ಮನ್ನು ಚಕ್ರ ವ್ಯೂಹಕ್ಕೆ ಸಿಲುಕಿಸಿ ಮುಂದಿನ ದಿನಗಳಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಭವವಿದೆ. ಜಾಗರೂಕರಾಗಿರಿ. ಶನಿ ಏಕದಶಕ್ಕೆ ಬರುವವರೆಗೂ ಕಾಯಿರಿ. ಸದ್ಯದಲ್ಲಿ ಯಾರನ್ನು ಪರೀಕ್ಷಿಸದೆ ನಂಬಬೇಡಿ. ಸುಬ್ರಮಣ್ಯನನ್ನು ಪೂಜಿಸಿ ಪ್ರಾರ್ಥಿಸಿ. ಅಷ್ಟೋತರ ಪಾರಾಯಣ ಮಾಡಿ.
ವೃಥಾ ಕೋಪ ತಾಪ ಮಾಡಿಕೊಂಡು ಎಗರಾಡಿದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ತಿಳಿದುಕೊಳ್ಳಿ. ಏಕಾದಶ ಗುರು ಇರುವುದು ಗುರಿ ಮುಟ್ಟಲು ಭದ್ರತೆಯನ್ನು ಕಾಪಾಡಿಕೊಳ್ಳಲು. ಒಂಬತ್ತರ ಶನಿ ಇದ್ದು, ಸಾವಧಾನ ಮತ್ತು ಸಮಾಧಾನ ಒಂದಿದ್ದರೆ ಜಯವು ನಿಮ್ಮದೇ. ದುರ್ಗೆಯನ್ನು, ಸೂರ್ಯನನ್ನು ಪ್ರಾರ್ಥಿಸಿ.
10ರ ಗುರು, ಅಷ್ಟಮ ಶನಿಯ ಸಂಚಾರವು ವಿಶೇಷ ಫಲ ನೀಡುವುದಿಲ್ಲ. ಜಾತಕದಲ್ಲಿ ಗ್ರಹಬಲವು ಚೆನ್ನಾಗಿದ್ದರೆ ಏನನ್ನೂ ಪಡೆಯಬಹುದು. ಆದರೂ ಏಪ್ರಿಲ್ 2023ರಲ್ಲಿ ಗುರು 11ರಲ್ಲಿ ಸಂಚರಿಸುವಾಗ ದೈರ್ಯವಾಗಿ ಮುನ್ನುಗ್ಗಬಹುದು. ನಿಮ್ಮ ಪುಣ್ಯ ವೃದ್ದಿಸಿಕೊಂಡರೆ ಕೆಲಸವೂ ತಾನಾಗಿಯೇ ದೈವ ಸಹಾಯದಿಂದ ಆಗುತ್ತದೆ.
ಸಪ್ತಮ ಶನಿಯು ಏನು ಕೆಟ್ಟದ್ದನ್ನು ನೀಡದಿದ್ದರೂ ವೃಥಾ ಶ್ರಮ ನೀಡುವುದು. ದೇಹಕ್ಕೆ ಆಯಾಸ, ಮನಸ್ಸಿಗೆ ಚಿಂತೆ ಒಳ್ಳೆಯದಲ್ಲ. ನಿಮ್ಮ ರಾಶಿ ಅಧಿಪತಿ ಶಶಿ ತಂಪನ್ನು ಕೊಡುತ್ತಾನೆ. ಉಮಾ ಮಹೇಶ್ವರನನ್ನು ಸದಾ ಪೂಜಿಸಿ. ಹಿರಿಯರಿಗೆ ವಂದಿಸಿ. ಸಣ್ಣ ಮಕ್ಕಳನ್ನು ಪ್ರೀತಿಯಿಂದ ಕಾಣಿ. ತಾನಾಗಿಯೇ ಎಲ್ಲವೂ ಒದಗಿಬರುವುದು.
ಮಖ ನಕ್ಷತ್ರದ ಮಹಾ ನಕ್ಷತ್ರದ ಗುಂಪಿನಲ್ಲಿ ಸೇರಿದೆ. ತತ್ಕಾಲದಲ್ಲಿ ಶನಿ 6ರಲ್ಲಿ ಇದ್ದು, ಡಿಸೆಂಬರ್ 14ರ ಗುರು ವಕ್ರಿ ಆಗಿ ನಿಮ್ಮ ಆಸೆಯನ್ನು ಪೂರ್ಣಗೊಳಿಸುತ್ತದೆ. ಬಂದದ್ದು ಬರಲಿ ಗೋವಿಂದನ ದಯೆ ಇರಲಿ ಎಂಬಂತೆ ಕೊಡುವ ದೈವಕ್ಕೆ ಅನಂತ ಕೈಗಳು. ಗುರುವು ನವಮಕ್ಕೆ ಬಂದರೆ ಇನ್ನೂ ಹೆಚ್ಚು ಫಲ. ಅಪ್ರಾಪ್ತ ಕೆಲಸವೂ ಪ್ರಾಪ್ತವಾಗುತ್ತದೆ.
ಸಾಕ್ಷಾತ್ ಶ್ರೀರಾಮನು ಲಂಕೆಯಲ್ಲಿ ರಾವಣನನ್ನು ಸಂಹರಿಸಿ ಬಂದಾಗ ವಸಿಷ್ಠ ಮಹರ್ಷಿ, ಅಷ್ಟಕನ್ಯೆ ಹಾಗೂ ಷೋಡಶ ಸುಹಾಸಿನಿಯರಿಗೆ ಪೂಜಿಸಿ ಅನಂತರ ಪಟ್ಟಭಿಷೇಕ ಮಾಡಿದರು. ಹೆಣ್ಣು ಮಕ್ಕಳು ಮಂಗಳಾನಂದ ತಂದು ಕೊಡುವ ಮಹೋನ್ನತ ದೈವ ನಿರ್ವಣ. ನೀವು ಈ ವಾರ ಕಳೆದು ಮಾರ್ಗಶಿರ ಮಾಸದಲ್ಲಿ ಗುರುವಾರ ಸುಹಾಸಿನಿಯರಿಗೆ ನಿಮ್ಮ ಕೈಲಾದದ್ದನ್ನು ನೀಡಿ ಆಶೀರ್ವಾದ ಪಡೆಯಿರಿ.
ತುಲಾ ರಾಶಿಯಲ್ಲಿ ಜನಿಸಿದ ನಿಮಗೆ ಗುರು ಸಂಚಾರದಿಂದ ಮುಂದಿನ ದಿನಗಳಲ್ಲಿ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಸೂರ್ಯ ಬರುವುದು ಬೆಳಕು ಕೊಡುವುದಕ್ಕೆ. ಚಂದ್ರನು ತಂಪನ್ನು ಕೊಡುವುದಕ್ಕೆ. ಆದ್ದರಿಂದ ಬುದ್ದಿಯನ್ನು ಉಪಯೋಗಿಸಿ. ಸೂರ್ಯನ ಬೆಳಕಿನ ಗಳಿಗೆಯಲ್ಲಿ ಗಳಿಸಿ. ಚಂದ್ರನ ಬೆಳಕಿನಲ್ಲಿ ಶಾಂತಿ ಯನ್ನೂ ಹೊಂದಿ ಸುಖವಾಗಿರಿ.
ಅಧಿಪತಿ ಕುಜನು ವೃಷಭದಲ್ಲಿ ಇದ್ದು, ಪಂಚಮ ಗುರು ಮಂಗಳದಾಯಕವು. ಎಚ್ಚರಿಕೆಯ ಜೀವನ ಸಾಗಿಸಿದಲ್ಲಿ ನಿಮ್ಮ ಮನಸ್ಸು ಕಟ್ಟಿ ಹಾಕಿ ಮಾತನ್ನು ಕಡಿಮೆ ಮಾಡಿದರೆ ಸಂಪಾದನೆ ಮಾರ್ಗ ಕಾಣುತ್ತದೆ. ಬರಬೇಕಾದ ದುಡ್ಡು ಸಿಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸುಬ್ರಹ್ಮಣ್ಯನ ಪ್ರಾರ್ಥನೆ ಅನಂತವಾಗಿರಲಿ.
ಮನುಷ್ಯನ ಕರ್ಮಗಳಿಗೆ ಅನುಸಾರವಾಗಿ ದೇವರು ಫಲ ನೀಡುತ್ತಾನೆ. ನಿಮಗೆ ಧನ ಬಾಧೆ ಇಲ್ಲ. ಗೃಹ ಬಾಧೆಯೂ ಇಲ್ಲ. ಈ ಸಮಯವು ಚೆನ್ನಾಗಿದ್ದು ಮುಂದಿನ ಜೀವನವನ್ನು ಸಾಗಿಸಲು ನಿಮ್ಮ ದಾರಿಯಲ್ಲಿ ಸಾಗಿರಿ. ಗುರು, ಶನಿ ಬಲವಿದ್ದು, ನಿಮ್ಮನು ಮುನ್ನಡೆಸುತ್ತಾರೆ.
ಮಕರ ರಾಶಿಗೆ ಜನ್ಮದಲ್ಲಿ ಶನಿ ಇದ್ದು ನಿಮ್ಮ ಜನ್ಮ ಶನಿ ಸಂಚಾರ ಮುಗಿಯುತ್ತಿದ್ದು ಬದಲಿ ಜೀವನದಲ್ಲಿ ಬದಲಾವಣೆ ಕಂಡು ನಿರೀಕ್ಷಿಸಿದ ಫಲ ಪಡೆಯುತ್ತೀರಿ. ತಾಳ್ಮೆಯು ಬೇಕು. ಒರಟು ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಪ್ರಾತಃ ಕಾಲದಲ್ಲಿ ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಕುಲ ದೇವರಿಗೆ ಶರಣು ಹೋಗಿ. ಕಾರ್ಯಗಳು ದೈವಬಲದಿಂದ ಸಾಗುತ್ತವೆ.
ದ್ವಾದಶ ಶನಿಯು ಜನ್ಮಕ್ಕೆ ಬರುವುದು ಎರಡೂವರೆ ವರ್ಷ ಶನಿ ಸಂಚಾರ ಮುಗಿಯುವ ಸೂಚನೆ. ಜನ್ಮ ಶನಿ ದುಃಖ ಕೊಡುತ್ತಾನೆ. ಅದು ಬಾರದಂತೆ ಇರಬೇಕಾದರೆ ಅವನ ಪ್ರಾರ್ಥನೆ, ಕುಲದೇವರ ಅನುಗ್ರಹ ಬೇಕು. 2ರಲ್ಲಿ ಗುರುವಿಗೆ ದತ್ತಾತ್ರೇಯನನ್ನು ಪೂಜಿಸಿ. ಒಳ್ಳೆಯ ಫಲ ಪಡೆಯಬಹುದು.
ಏಕಾದಶ ಶನಿ ಇರುವುದರಿಂದ ಶನಿ ಒಬ್ಬನೇ ಸಾಕು ಒಳ್ಳೆಯ ಫಲ ಕೊಡಲು. ಸೂರ್ಯ ಆದಿತ್ಯ ಹೃದಯ ಪಾರಾಯಣದಿಂದ ಆರೋಗ್ಯ ಸ್ಥಿರವಾಗಿಟ್ಟುಕೊಂಡು ಮುಂದೆ ಸಾಗಬಹುದು. ಸಾಲಿಗ್ರಾಮ ಗುರು ನರಸಿಂಹನನ್ನು ಪೂಜಿಸಿದರೆ ಗುರು ಪೂಜೆಯು ಆಯಿತು. ಹಾಗೆಯೇ ನರಸಿಂಹನು ನಿಮ್ಮ ದುಷ್ಟಕ್ಷರ ಅಳಿಸಿ ಶುಭವನ್ನು ನೀಡುವನು.