ಮೇಷ ರಾಶಿಯವರಿಗೆ ಲಗ್ನದಲ್ಲಿ ಗುರು, ರಾಹು ಇರುವುದು ಅಷ್ಟೇನೂ ಶುಭವಾದ ಸಮಯವಲ್ಲ. ಮಿತಿಮೀರಿದ ಕೋಪದಿಂದ ಬುದ್ದಿಯನ್ನು ಹಾಳು ಮಾಡಿಕೊಂಡು ವರ್ತಿಸಿದರೆ ದೊಡ್ಡಬೆಲೆಯನ್ನೇ ತೆರಬೇಕಾಗುತ್ತದೆ. ಯಾವುದೇ ವ್ಯವಹಾರಗಳನ್ನು ಮಾಡುವ ಮೊದಲು ದೈವ ಪ್ರಾರ್ಥನೆ ಅತ್ಯಗತ್ಯ. ಮೌನ ಹಾಗೂ ತಾಳ್ಮೆ ಇರಲಿ . ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ ತಿರುಚಂದೂರಿನಲ್ಲಿ ಸಮುದ್ರದ ದಡದಲ್ಲಿರುವ ಷಣ್ಮುಖನನ್ನು ಪ್ರಾರ್ಥಿಸಿ.
ಹರಿಚಿತ ಸತ್ಯ ಎಂದು ಪುರಂದರದಾಸರು ಹೇಳಿದ್ದಾರೆ. ಪುರಂದರ ವಿಠಲರ ದಾಸವಾಣಿಯು ಎಲ್ಲವೂ ಸತ್ಯವೇ. ಅದನ್ನು ಅರಿತುಕೊಂಡು ಜೀವನವನ್ನು ರೂಪಿಸಿಕೊಂಡರೆ ಏನೇ ಕಷ್ಟ ಬಂದರೂ ಹರಿಯು ನಿಮಗೆ ಬಲವನ್ನು ಕೊಟ್ಟು ಮುಂದೆ ಸಾಗಿಸುತ್ತಾನೆ. 12ರ ಗುರು ಧೋರಣೆಯನ್ನು ಕೊಟ್ಟು ಜನಗಳನ್ನು ಉಪೇಕ್ಷೆ ಮಾಡುವ ಬುದ್ಧಿಯನ್ನು ಕೊಟ್ಟರೂ ತಾಳ್ಮೆಯಿಂದ ಎಲ್ಲರನ್ನು ಸರಿಸಮನಾಗಿ ಕಂಡು ಉಪಕಾರವನ್ನು ಮಾಡಬೇಕು. ದುರ್ಗೆಯನ್ನು ಪೂಜಿಸಿ. ದ್ವಾದಶ ಗುರುವಿಗೆ ಕಡಲೆ ಬೆಳೆಯನ್ನು ದಾನ ಮಾಡಿ.
ನಿಮ್ಮ ಯೋಚನೆ ಲಹರಿಯಲ್ಲಿ ಬಂದಿದ್ದೆಲ್ಲ ಸತ್ಯವಲ್ಲ. ಯೋಚನೆಯು ಸಮುದ್ರದ ಅಲೆಯಂತೆ. ಅದನ್ನು ಬದಿಗಿಟ್ಟು ಸತ್ಯಾಸತ್ಯತೆಯನ್ನು ಅರಿತು ಮುಂದೆ ಸಾಗಿದರೆ ಒಳ್ಳೆಯದು. ಗುರುವಿನ ದಯೆ ಇರಲಿ. ಏಕಾದಶ ಬುಧನಿಂದ ಗಳಿಸಬೇಕಾದರೆ ಗುರುವನ್ನು ಪ್ರಾರ್ಥಿಸಿ ಪೂಜಿಸಿ. ದತ್ತಾತ್ರೇಯ ಅಷ್ಟೋತ್ತರವನ್ನು ಪಾರಾಯಣ ಮಾಡಿ. ಎಲ್ಲವೂ ಶುಭವಾಗುತ್ತದೆ.
ಕಟಕ ರಾಶಿಯು ಗುರುವಿಗೆ ಉಚ್ಚ ಸ್ಥಾನವಾಗಿದೆ. ಈ ರಾಶಿಯಲ್ಲಿ ಜನಿಸಿದವರಿಗೆ ಕಷ್ಟಕಾರ್ಪಣ್ಯ ಬಂದರೂ ಪರಿಪೂರ್ಣವಾದ ರಕ್ಷಣೆಯನ್ನು ಕೊಡುವವನು ಗುರುವೇ. ದೇವರ ದೇವರಾದ ಮಹಾದೇವನನ್ನು ಪೂಜಿಸಿ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ. ಶನಿ ಅಷ್ಟಮದಲ್ಲಿರುವುದರಿಂದ ಪ್ರಾರ್ಥನೆ ಒಂದೇ ಸುಲಭ ಉಪಾಯ. ಎಲ್ಲಾ ಕಷ್ಟ ಪರಿಹಾರಕ್ಕೂ ಹತ್ತರ ಗುರು ಯಥಾವತ್ತಾಗಿ ಇರುವುದರಿಂದ ನಿಮಗೆ ಸಂಕಷ್ಟ ಉಂಟಾಗುವುದಿಲ್ಲ. ಪ್ರತಿನಿತ್ಯ ಗುರು ಚರಿತ್ರೆಯ ಒಂದು ಅಧ್ಯಾಯ ಪಾರಾಯಣ ಮಾಡಿರಿ.
ಇದೇ ಜೂನ್ 19ರಂದು ಶನಿಯು ಹಿಂದಕ್ಕೆ ಬಂದು, ಶನಿಯ 6ನೇ ಮನೆಯ ಯೋಗವನ್ನು ದೇವರ ಪ್ರಾರ್ಥನೆಯಿಂದ ನಡೆಸಿಕೊಂಡು ಹೋಗಬಹುದು. ನವಮ ಗುರು ಏನನ್ನು ಕೊಟ್ಟರೂ ಅದನ್ನು ಉಳಿಸಿಕೊಂಡು ಹೋಗುವ ಕಾಲ. ನಿಮ್ಮ ಮುಗಿಯದ ವ್ಯವಹಾರಗಳು ಅಂತ್ಯವನ್ನು ಕಂಡು ಶುಭವಾಗುವ ಸಮಯ. ಶನಿ ಸ್ತೋತ್ರ ಪಠಿಸಿ. ಸೂರ್ಯನಾರಾಯಣನ ಪ್ರಾರ್ಥನೆ ಇರಲಿ.
6ರ ಶನಿ ಅನಂತವಾಗಿ ಕೊಡುತ್ತಾನೆ. ಸಾಲಿಗರು ಬಂದು ಕಾಲಿಡುವ ಮುನ್ನ ಸಾಲ ಸೋಲವನ್ನು ತೀರಿಸಿಕೊಂಡು ಸುಖವಾದ ಬದುಕು ಹುಡುಕಿಕೊಳ್ಳಿ, ಗುರು, ಹಿರಿಯರನ್ನು ಗೌರವಿಸಿ. ಕೊಡಬೇಕಾದವರಿಗೆ ಕೊಟ್ಟು ಶಾಪ ಮುಕ್ತರಾಗಿ ಬದುಕಿ. ಕೊಡಲು ಶನಿಯಿದ್ದಾಗ ನೀವೇಕೆ ಹೆದರಬೇಕು. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಶನಿಯು ಷಷ್ಟದಲ್ಲಿ ಇದ್ದಾನೆ. ಮಹಾವಿಷ್ಣುವಿನ ಅಷ್ಟೋತ್ತರವನ್ನು ಪಾರಾಯಣ ಮಾಡಿ.
ತುಲಾ ರಾಶಿ ಅಧಿಪತಿ ಶುಕ್ರ. ಗುರುವು ಸಪ್ತಮದಲ್ಲಿ ಶುಭಾಂಶದಲ್ಲಿ ಸುಖವನ್ನು ನೀಡಿದ್ದಾನೆ. ಶುಭಕ್ಕೆ ಅಂತ್ಯವಿಲ್ಲ. ಆದರೆ, ಕಷ್ಟಕ್ಕೆ ಅಂತ್ಯವೂ ಇದೆ. ಅದರ ಮುಂದೆ ಬೆಳಕು ಇದೆ. ಆದ್ದರಿಂದ ನಿಮ್ಮ ಚಿತ್ತವನ್ನು ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಗುರುವನ್ನು ಪ್ರಾರ್ಥಿಸಿ, ಎಲ್ಲವನ್ನೂ ಪಡೆದು ಸುಖವಾಗಿರಬಹುದು.
ಮಿಂಚು, ಮೋಡ, ಮಳೆ ಎಲ್ಲವೂ ಬರುವುದು ಮನುಷ್ಯನ ದಾಹ ನೀಗಲು. ಆಹಾರವಿಲ್ಲದೆ ಇರಬಹುದು. ಆದರೆ, ನೀರಿಲ್ಲದಿದ್ದರೆ ಪ್ರಾಣ ಸಂಕಟ ಉಂಟಾಗುತ್ತದೆ. ಈಗ ನಿಮ್ಮ ವ್ಯವಹಾರಗಳಲ್ಲಿ ಶಾಂತ ಚಿತ್ತರಾಗಿ ಸಾಗಿದರೆ ನಿಮಗೆ ಜಯ ಸಿಗುತ್ತದೆ. ಅಣ್ಣ-ತಮ್ಮಂದಿರಾದ ಷಣ್ಮುಖ ಹಾಗೂ ಗಣಪತಿಯನ್ನು ಪ್ರಾರ್ಥಿಸಿ, ಪೂಜಿಸಿದರೆ ಮಾತ್ರವೇ ನಿಮ್ಮ ಧನ ಬಲ ವೃದ್ಧಿಯಾಗುತ್ತದೆ.
ಸಮಯವು ಚೆನ್ನಾಗಿದ್ದು ಪಂಚಮದಲ್ಲಿ ಗುರು, ತೃತೀಯದಲ್ಲಿ ಶನಿ ಇದ್ದಾನೆ. ಒಂದೇ ದಿನದಲ್ಲಿ ಯಾರೂ ಆಕಾಶವನ್ನು ಮುಟ್ಟಿದವರಿಲ್ಲ. ನೀವು ಅತಿಯಾದ ಮನೋ ವೇಗದಿಂದ ಆಯಾಸ ಮಾಡಿಕೊಳ್ಳದೆ ಆತ್ಮವಿಶ್ವಾಸದಿಂದ ಬೇಕಾದ್ದನ್ನು ಪಡೆಯುವ ಕಾಲವಿದು. ಗುರುವನ್ನು ಪ್ರಾರ್ಥಿಸಿ. ನಿಮ್ಮ ಆತ್ಮರಕ್ಷಣೆಗಾಗಿ ಆರೋಗ್ಯಕ್ಕಾಗಿ ದೈವ ಚಿಂತನೆ ಅತ್ಯಗತ್ಯ. ಶ್ರೀರಾಮಚಂದ್ರನನ್ನು ಪೂಜಿಸಿ, ಗುರು ನರಸಿಂಹನನ್ನು ಪ್ರಾರ್ಥಿಸಿ.
ದಿನವೂ ಕತ್ತಲಾಗುವುದಿಲ್ಲ. ದಿನವೂ ಪೌರ್ಣಮಿಯು ಆಗುವುದಿಲ್ಲ. ಕತ್ತಲು, ಬೆಳಕು ಸರಿ ಸಮಾನವಾಗಿರುತ್ತದೆ. ದ್ವಿತೀಯ ಶನಿಯು ನಿಮ್ಮನ್ನು ಬಳಲಿಸಿ ಕುಗ್ಗಿಸಿರಬಹುದು. ಆದರೂ ನಿಮ್ಮನ್ನು ಉದ್ಧರಿಸಲು ನಿಮಗೆ ವಿಶೇಷ ದೈವಬಲವೇ ಬೇಕಾಗುತ್ತದೆ. ಜತೆಗೆ ನಿಮ್ಮ ಮನೆಯಲ್ಲಿ ಇರುವ ಈಶ್ವರ- ಪಾರ್ವತಿ ಸ್ವರೂಪರಾದ ತಂದೆ- ತಾಯಿಯನ್ನು ಪೂಜಿಸಿ ಅವರ ಆಶೀರ್ವಾದವನ್ನು ಪಡೆದರೆ ಎಲ್ಲವೂ ಸಿಗುತ್ತದೆ. ಆತುರದ ನಿರ್ಧಾರಗಳು ಬೇಡ.
ಶನಿಯು ಲಗ್ನದಲ್ಲಿದ್ದು, ತೃತೀಯದಲ್ಲಿ ಗುರುವಿದ್ದಾನೆ. ಗುರು- ರಾಹು ಸಂಯೋಜನೆಯಲ್ಲಿದ್ದಾನೆ. ಕುಂಭಕ್ಕೆ ಕೈಹಾಕುವ ಮೊದಲು ಎಚ್ಚರಿಕೆ ಇರಬೇಕು. ಬಂಗಾರವೇ ಸಿಗಬಹುದು ಅಥವಾ ವಿಷಜಂತು ಕಚ್ಚಬಹುದು. ಆದ್ದರಿಂದ ಶನಿ ಸಂಚಾರದ ಸಮಯದಲ್ಲಿ ಎಚ್ಚರಿಕೆಯಿಂದ ಸಾಗುವುದು ನಿಮ್ಮ ಕರ್ತವ್ಯವಾಗಿರಲಿ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಶತ್ರುಗಳು ದೂರವಾಗಲು ಸೂರ್ಯನಾರಾಯಣ ಅಷ್ಟೋತ್ತರ ಪಾರಾಯಣ ಮಾಡಿ. ನೆಮ್ಮದಿ, ಸುಖವು ಸಿಗುವುದು.
ದ್ವಿತೀಯ ಗುರುವೇ ಸಾಕು ಕಷ್ಟಗಳನ್ನು ದಾಟಿ ನವ ಚೈತನ್ಯವನ್ನು ಪಡೆದು ಜೀವನದಲ್ಲಿ ಮುಂದೆ ಸಾಗಲು. ದೋಣಿಯು ಮುಂದೆ ಸಾಗುವುದೇ ಹೊರತು ಹಿಂದೆ ಸಾಗಲಾರದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಂಡು ದ್ವಿತೀಯ ಗುರುವಿನ ಶುಭವನ್ನು ಅನುಭವಿಸಿ. ದಕ್ಷಿಣಾ ಮೂರ್ತಿಯನ್ನು ಪ್ರಾರ್ಥಿಸಿ, ನಿತ್ಯವೂ ದುರ್ಗೆಯನ್ನು ಪ್ರಾರ್ಥಿಸುವ ಅಭ್ಯಾಸ ಮಾಡಿಕೊಂಡರೆ ಸುಖ, ಸಂತೋಷ ಪಡೆಯುತ್ತೀರಿ.