ಮೇಷ: ಅಷ್ಟಮದಲ್ಲಿ ಸೂರ್ಯನಿದ್ದು, ಆರೋಗ್ಯ, ಮನಸ್ಸನ್ನು ಶುದ್ಧವಾಗಿ ಇಟ್ಟು ಕೊಳ್ಳಬೇಕು. ಗೊತ್ತಿಲ್ಲದೆ ತಪ್ಪುಗಳು ಆಗಿ, ವಿಚಾರ-ವಿವಾದಗಳು ಆತಂಕವನ್ನು ಉಂಟುಮಾಡುತ್ತವೆ. ಅದಕ್ಕೆ ದೖವ ಪ್ರಾರ್ಥನೆ ಅಗತ್ಯ. ಆರು ಮುಖಗಳುಳ್ಳ ಷಣ್ಮುಖನನ್ನು ಪ್ರಾರ್ಥಿಸಿ. ಷಡಾನನ ಸ್ತೋತ್ರವನ್ನು ಶ್ರದ್ಧೆಯಿಂದ ದಿನಕ್ಕೆ 5 ಬಾರಿ ಪಠಿಸಿದರೆ ಬೇಕಾದ ಧನವೂ ಸಿಗುತ್ತದೆ.
ವೃಷಭ: ರಾಶಿಯವರಿಗೆ ಕೇವಲ 3 ತಿಂಗಳಲ್ಲಿ ದೊಡ್ಡ ಸ್ಥಾನವೊಂದನ್ನು ಗಳಿಸುವ ಸಮಯ. ದುಡ್ಡಿಗಾಗಿ ಊರೂರು ಅಲೆದು ಸಮಯ ಹಾಳು ಮಾಡಿಕೊಳ್ಳಬೇಡಿ. ಮನುಷ್ಯ ದುಡ್ಡು ಸಂಗ್ರಹಣೆ ಮಾಡಿದರೆ ಪಾಪವು ಮುಂದೆ ಬರಬಹುದು. ಅದಕ್ಕಾಗಿ ರಾಜಯೋಗ ತರಲು ದೈವಬಲ ಇಲ್ಲದಂತಾಗಬಾರದು. ಮನುಷ್ಯನಿಗೆ ಧನವು, ಬಾಯಾರಿಕೆಯಾದಾಗ ನೀರು ಎರಡೂ ಬೇಕೇ ಬೇಕು. ಆದರೆ ಸಮಯ ಹಾಳುಮಾಡಿಕೊಂಡು ರಾಜಯೋಗವನ್ನು ಹಾಳುಮಾಡಿಕೊಳ್ಳಬಾರದು. ಮನಸ್ಸನ್ನು ಹತೋಟಿಯಲ್ಲಿಟ್ಟು ಸಾಗಿದರೆ ಬೇಕಾದ್ದನ್ನು ಗಳಿಸುವಿರಿ. ಧರ್ಮವನ್ನು ಪಾಲಿಸಿ.
ಮಿಥುನ: ಷಷ್ಟದಲ್ಲಿ ರವಿ ಇರುವುದರಿಂದ ನಿಮಗೆ ಅಪಮಾನ ಮಾಡುವ ಸಂಖ್ಯೆ ಬಹಳಷ್ಟಿರುತ್ತದೆ. ಗುರುವು ದ್ವಾದಶದಲ್ಲಿ ಇರುವುದರಿಂದ ಜೀವನ ನಡೆಸಲು ಯಾವ ತರಹದ ತೊಂದರೆ ಇರುವುದಿಲ್ಲ. ಗೋಗ್ರಾಸವನ್ನು ಕೊಟ್ಟು ಗೋಪೂಜೆ ಮಾಡಿ. ಗೋವಿಗೆ ಪ್ರತ್ಯೇಕ ಆಹಾರ ಕೊಟ್ಟರೆ ಶ್ರೀಕೃಷ್ಣನೇ ಅವಶ್ಯವಾಗಿ ನಿಮ್ಮ ಸಮಯಕ್ಕೆ ಬಂದು ಎಲ್ಲ ಕಷ್ಟಗಳನ್ನು ಪರಿಹಾರ ಮಾಡುತ್ತಾನೆ. ಕೃಷ್ಣಾಷ್ಟೋತ್ತರ ಪಠಿಸಿ. ಹೆಚ್ಚಿನ ಲಾಭವನ್ನು ಪಡೆಯಬಹುದು.
ಕಟಕ: ಏಕಾದಶದಲ್ಲಿರುವ ಗುರುವು ನಿಮ್ಮನ್ನು ರಕ್ಷಿಸಲು ಕಾದಿರುತ್ತಾನೆ. ನಿಮ್ಮ ನಿರ್ಣಯಗಳು, ಉತ್ಸಾಹವನ್ನು ಕಾದುಕೊಟ್ಟು, ನಿಮ್ಮನ್ನು ಆರೋಗ್ಯದಿಂದ ಹರ್ಷತುಂಬಿದ ಮನಸ್ಸಿನಿಂದ ಇಡುತ್ತಾನೆ. ಸುಖಕರ ದಿನಗಳನ್ನು ನೋಡುತ್ತೀರ. ದೈವಬಲವೊಂದಿದ್ದರೆ ಸಾಕು ಎಂಬುದಕ್ಕೆ ಕಟಕ ರಾಶಿಯವರೇ ಸಾಕ್ಷಿಯಾಗಿದ್ದಾರೆ. ಭವಾನಿ ಶಂಕರನನ್ನು ಆರಾಧಿಸಿ. ನಿಮ್ಮ ಇಚ್ಚೆಯೂ ಪೂರ್ಣವಾಗುತ್ತದೆ.
ಸಿಂಹ: ಈ ರಾಶಿಯವರಿಗೆ 2025ನೇ ಇಸವಿಯಿಂದ ಭಾಗ್ಯೋದಯವಾಗಿ ನಿತ್ಯವೂ ಹಬ್ಬದೂಟವನ್ನು ಮಾಡಿ ಇಚ್ಚಿತ ಕಾರ್ಯಗಳಲ್ಲಿ ಜಯವನ್ನು ಪಡೆದುಕೊಂಡು ಮಂದೆ ಹೋಗುವ ಸಮಯ. ಮನುಷ್ಯನ ಪೂರ್ವದ ಪುಣ್ಯ ಬಾಗಿಲು ತೆರೆದರೆ ಯಾವ ತಡೆಯೂ ಇಲ್ಲ. ಅಡಚಣೆಯೂ ಇಲ್ಲ. ಸೂರ್ಯನಾರಾಯಣನ ಪೂಜೆಯು ಇರಲಿ. ನಿಮ್ಮ ತೇಜಸ್ಸು ವೃದ್ಧಿಯಾಗಲು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.
ಕನ್ಯಾ: ರಾಶಿಯವರಿಗೆ 6ರ ಶನಿ, 9ರ ಗುರುವು ಕೊಟ್ಟ ಸಹಕಾರದಿಂದ ನೀವು ನಿಮ್ಮ ಗುರಿ ಮುಟ್ಟಿ ಆಗಿದೆ. ದೈವಬಲ, ಗ್ರಹಬಲ, ಬುದ್ದಿಬಲ, ಜನ್ಮಜನ್ಮಾಂತರದ ಪುಣ್ಯವೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸದೆ ಸಂತೋಷದಿಂದ ಜೀವನ ಸಾಗಿಸಲು ಕಾರಣೀಭೂತವಾಗುತ್ತದೆ. ಅಧಿಪತಿ ಬುಧನೇ ಆಗಿರುವುದರಿಂದ ಅಷ್ಟಭುಜ ದುರ್ಗೆ, ಚರ್ತಬಾಹುವಿನ ವಿಷ್ಣುವಿನ ಪೂಜೆ ನಡೆಯುತ್ತಲೇ ಇರಲಿ. ಇರುಳು ಬರದೆ ಇರಲಿ, ಭಾಗ್ಯದ ಬಾಗಿಲು ತೆರೆದೇ ಇರಲಿ.
ತುಲಾ: ರಾಶಿಯವರು ಕಂಡದ್ದೆಲ್ಲ ಸತ್ಯವೂ ಅಲ್ಲ. ಬಂದಿದ್ದೆಲ್ಲ ಉಳಿಯು ವುದೂ ಇಲ್ಲ. ದೇವರ ನಾಮವೊಂದಿದ್ದರೆ ದೈವತ್ವವೇ ಅಹೋ ರಾತ್ರಿಯಲ್ಲಿ ಜೀವನ ಬದಲಿಸಿ ಆಗದ ಕೆಲಸವನ್ನು ಮಾಡಿ ಅನಾಹುತ ತಪ್ಪಿಸಿ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾಲ ಬಂದಿದೆ. ಪಂಚಮ ಶನಿಯ ಕಾರಣದಿಂದ ಸಮಸ್ಯೆಗಳು ಉಂಟಾದರೆ ಹೆದರದಿರಿ. ನಿಮ್ಮನ್ನು ದುರ್ಗಿಯೇ ಕೈಹಿಡಿದು ಮುನ್ನಡೆಸುತ್ತಾಳೆ. ದುರ್ಗಾಸಹಸ್ರನಾಮದಿಂದ ಅಮ್ಮನವರನ್ನು ಅರ್ಚಿಸಿ.
ವೃಶ್ಚಿಕ: ಚೇಳು ಮಹಾಲಕ್ಷ್ಮೀಯ ವಾಹನ. ಮಹಾಲಕ್ಷ್ಮೀಯು ಸಿರಿವಂತ ದೇವರು. ಆನೆಯ ಮೇಲೆ ಕುಳಿತರೆ ಗಜಲಕ್ಷ್ಮೀ, ಕಮಲದಲ್ಲಿ ಕುಳಿತರೆ ವರ ಮಹಾಲಕ್ಷ್ಮೀ. ಇಂತಹ ಮಹಾಲಕ್ಷ್ಮೀಯನ್ನು ಪೂಜಿಸಿ ವರವನ್ನು ಪಡೆಯಿರಿ. ಗುರುವೆಂಬ ನಾಮಕ್ಕೆ ಗುರು ಸ್ವರೂಪಕ್ಕೆ ಪರ್ಯಾಯವೇ ಇಲ್ಲ. ಗುರುವನ್ನು ಅರ್ಚಿಸಿ, ಪೂಜಿಸಿ, ಗುರುಬಲವು ಸಾರ್ಥಕ ಫಲಗಳನ್ನು ಕೊಡುವುದು.
ಧನಸ್ಸು: ಕಂಡಿದ್ದೆಲ್ಲ ಸತ್ಯವೂ ಅಲ್ಲ. ಆಡಿದ್ದೆಲ್ಲ ನಿಜವೂ ಅಲ್ಲ. ನಿಮ್ಮ ದೇವತಾ ಪ್ರಾರ್ಥನೆ ಮುಂದುವರಿಸಿ. ದೈವವನ್ನು ಮರೆತರೆ ದೇವರಿಗೆ ಆಗುವುದಿಲ್ಲ. ಆದರೆ ಸೃಷ್ಟಿಕರ್ತ ನಮ್ಮನ್ನು ಮರೆತರೆ, ಯಾರೂ ನಮ್ಮನ್ನು ಗುರುತಿಸುವುದಿಲ್ಲ. ಇಷ್ಟದೇವರನ್ನು ಪೂಜಿಸಿ, ಪ್ರಾರ್ಥಿಸಿ. ನಿಮ್ಮ ಕಾಲವು ತನ್ನಿಂದ ತಾನೇ ಬದಲಾಗಿ ಗುರಿಯನ್ನು ಮುಟ್ಟುತ್ತೀರಿ.
ಮಕರ: ಹರಿನಾಮ ಕೀರ್ತನೆ ಇರಲಿ. ಕಾಲವು ನಿಮ್ಮನ್ನು ಇಚ್ಚಿತ ಕೆಲಸಗಳಲ್ಲಿ ಜಯವನ್ನು ಕೊಟ್ಟು ಕಾಪಾಡುತ್ತದೆ. ಉಪಕಾರ ಬುದ್ದಿ ನಿಮ್ಮದಾಗಲಿ. ಕುಲದೇವ ರನ್ನು ಪೂಜಿಸಿ. ಸೋಮವಾರ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.
ಕುಂಭ: ಗಿಡ ಮರಗಳಲ್ಲಿ ಎಷ್ಟೇ ಎಲೆಯಿದ್ದರೂ, ಚಿಗುರೆಲೆಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ಮೀನ ರಾಶಿಯಲ್ಲಿ ಶನಿಯು ಬಂದಾಗ ಕಾರ್ಯಗಳಿಗೆ ವೇಗವು ದೊರಕಿ ಸ್ವತಂತ್ರವಾಗಿ ನಿಮ್ಮಚಲನೆಯು ಅಭಿವೃದ್ಧಿಯ ಕಡೆ ಸಾಗುತ್ತದೆ. ಭೂವರಾಹ ಸ್ವಾಮಿಯನ್ನು ಪ್ರಾರ್ಥಿಸಿ. ವೆಂಕಟೇಶ್ವರನನ್ನು ಪೌರ್ಣಮಿಯಂದು ಪ್ರಾರ್ಥಿಸಿದರೆ ಕಷ್ಟ ಕತ್ತರಿಸಿ ಸುಖವನ್ನು ನೀಡುತ್ತಾನೆ.
ಮೀನ: ರಾಶ್ಯಾಧಿಪತಿ ಗುರು ಶುಕ್ರನ ಮನೆಯಲ್ಲಿದ್ದು, ಅಲ್ಲಿಗೆ ಶುಕ್ರನಿಗೆ ಬಾಡಿಗೆ ಯನ್ನು ಕೊಟ್ಟು ಸಂಚರಿಸಿ ಶುಕ್ರನ ಫಲವನ್ನೇ ಅಥವಾ ತನ್ನ ಸ್ವಂತ ಫಲವನ್ನೇ ಕೊಡಬಹುದು. ನ್ಯಾಯಸಮ್ಮತವಾದ ತೀರ್ವನಗಳನ್ನು ಜೀವನದಲ್ಲಿ ತೆಗೆದುಕೊಳ್ಳಿ. ದೇವರೇ ನಿಮ್ಮ ಕಾಳಜಿಯನ್ನು ಮಾಡುತ್ತಾನೆ. ಈ ಸಂದರ್ಭದಲ್ಲಿ ಧರ್ಮಸ್ಥಳದ ಮಂಜುನಾಥನನ್ನು ಪ್ರಾರ್ಥಿಸಿ ಪೂಜಿಸಿ.