ಮೇಷ: ಪುಷ್ಯ ಮಾಸದ ಶುದ್ಧ ಸಪ್ತಮಿಯಿಂದ ಪುಷ್ಯ ಪೌರ್ಣಿಮೆಯವರೆಗೂ ಬನಶಂಕರಿ ನವರಾತ್ರಿ. ವೈಕುಂಠ ಏಕಾದಶಿ ಬರುವ ಕಾಲವಿದು. 10ನೇ ತಾರೀಖು ಏಕಾದಶಿ. ಅಂದು ಕೃತ್ತಿಕಾ ನಕ್ಷತ್ರವು ಇರುವುದರಿಂದ ರಾಶ್ಯಾಧಿಪತಿ ಸುಬ್ರಹ್ಮಣ್ಯನನ್ನು ವಿಶೇಷವಾಗಿ ಪೂಜಿಸಿ, ಪ್ರಾರ್ಥನೆ ಸಲ್ಲಿಸಿ, ಒಬ್ಬ ವಟುವಿಗೆ ಒಂದು ಪಂಚೆ, ಹಾಲು, ಹಣ್ಣು ಸಮರ್ಪಿಸಿದರೆ ಸರ್ವದೋಷಗಳು ಕಳೆದು ಅಭ್ಯುಧಯಕ್ಕೆ ಕಾರಣವಾಗುತ್ತದೆ. ಬನಶಂಕರಿಯನ್ನು, ಶಿವನನ್ನು ಪ್ರಾರ್ಥಿಸಿ, ಪೂಜಿಸಿ.
ವೃಷಭ: ಗುರುವು ವೃಷಭದಲ್ಲಿ, ಶನಿಯು ದಶಮದಲ್ಲಿದ್ದಾರೆ. ಧನುರ್ ಮಾಸದಲ್ಲಿ ಮಹಾವಿಷ್ಣುವನ್ನು ಪೂಜಿಸಿದರೆ ವಿಶೇಷ ಫಲವಿದೆ. ಶಿವನು ಲಯ ಕರ್ತ, ಬ್ರಹ್ಮನು ಸೃಷ್ಟಿಕರ್ತ, ವಿಷ್ಣುವು ಭೋಗಭಾಗ್ಯಗಳನ್ನು ಕೊಡುತ್ತಾ ಕಾಪಾಡುತ್ತಾರೆ. ಪೌರ್ಣಮಿಯಂದು ಲಲಿತಾ ಪರಮೇಶ್ವರಿಯನ್ನು ಅಥವಾ ಬನಶಂಕರಿಯನ್ನು ಪೂಜಿಸಿದರೆ ವಿಶೇಷ ಲಾಭವಾಗುವುದು.
ಮಿಥುನ: ರಾಶಿ ಅಧಿಪತಿ ಬುಧನು ಸೂರ್ಯನನ್ನು ಸೇರಿ ಸಪ್ತಮದಲ್ಲಿರುವುದು ಒಳ್ಳೆಯ ಕಾಲವೇ. ಗುರುವು ದ್ವಾದಶದಲ್ಲಿರುವುದರಿಂದ ದಕ್ಷಿಣ ಕನ್ನಡದ ಸಾಲಿಗ್ರಾಮದ ನರಸಿಂಹ ದೇವರನ್ನು ಪೂಜಿಸಿ. ಕಷ್ಟ-ಕಾರ್ಪಣ್ಯಗಳನ್ನು ಅವನ ಮುಂದಿಟ್ಟು ಪ್ರಾರ್ಥನೆ ಮಾಡಿ. ಇಚ್ಛಿಸಿದ ಕೆಲಸ ಆಗಲು ಪಂಡರಾಪುರದ ಪಾಂಡುರಂಗ ವಿಠ್ಠಲನನ್ನು ಪೂಜಿಸಿ. ವಿಶೇಷ ಯೋಗವು ಒದಗಿ ಬರುತ್ತದೆ.
ಕಟಕ: ಹನ್ನೊಂದರ ಗುರುವು ಎಲ್ಲವನ್ನೂ ನೀಡಿ ಸಹಕರಿಸಿದ್ದಾನೆ. ಕೈಲಾದ ಕೆಲಸವನ್ನು ಮಾಡಿ, ಶರೀರಕ್ಕೆ ವಿಶ್ರಾಂತಿ ಕೊಡುವುದು ಅತ್ಯಗತ್ಯ. ಸಾಯಂಕಾಲದ ಎರಡನೇ ಜಾವ ಆರಂಭವಾದರೆ, ಅದು ಮಲಗುವ ಸಮಯವೇ. ನಿಮ್ಮ ದೈನಂದಿನ ಚಟುವಟಿಕೆ ಈ ಸಮಯದ ಒಳಗಿರಲಿ. ಕಲ್ಪವೃಕ್ಷವು ಎಲ್ಲವನ್ನು ಕೊಡುವಂತೆ ದೇವರೇ ನಿಮಗೆ ಎಲ್ಲವನ್ನು ಕೊಟ್ಟು ಕಾಪಾಡುತ್ತಾನೆ.
ಸಿಂಹ: ಮಾರ್ಗಶಿರ-ಪುಷ್ಯ ಮಾಸ ಸೇರಿದ ಮಾಸವು ಧನುರ್ ಮಾಸವೆಂದು, ಪೂಜಾ ಕಾಲವೆಂದು ಕರೆಯಲ್ಪಡುತ್ತದೆ. ಸೂರ್ಯೋದಯಕ್ಕೆ ಮುನ್ನ ಎದ್ದು ಆದಿತ್ಯ ಹೃದಯ ಪಾರಾಯಣ ಮಾಡಿ, ಸೂರ್ಯ ನಮಸ್ಕಾರ ಮಾಡಿದರೆ ಶರೀರಕ್ಕೆ ಆದ ಆಯಾಸ, ಮಾನಸಿಕ ಒತ್ತಡ, ನಕಾರಾತ್ಮಕ ಚಿಂತನೆ ದೂರವಾಗಿ ಸೂರ್ಯನ ಬೆಳಕು ನಿಮ್ಮ ಮೇಲೆ ಬಿದ್ದು ಒಳಿತಾಗುತ್ತದೆ. ನಿಮ್ಮ ಜೀವನ ಪ್ರಾರ್ಥನೆಯ ಹಾದಿಯಲ್ಲಿರಲಿ.
ಕನ್ಯಾ: ಸದ್ಯದಲ್ಲಿ ಯಾರ ಹಂಗು-ಭಯ ಇಲ್ಲವೇ ಇಲ್ಲ. ಕಾರಣ ನವಮ ಗುರು ಷಷ್ಠದಲ್ಲಿದ್ದಾನೆ. ‘ಅಮೃತಂ ಆಲಸ್ಯಂ ವಿಷಂ’-ಕ ಆಲಸ್ಯ ಮಾಡಿದರೆ ಅಮೃತವೂ ವಿಷವಾಗುತ್ತದೆ ಎಂಬ ಗಾದೆಯಿದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ, ದೈವಾನುಗ್ರಹ ಪಡೆದರೆ, ಗ್ರಹಗಳು 7 ಮತ್ತು ಹತ್ತನೇ ಮನೆಗೆ ಹೋಗಿ ನಿಮ್ಮನ್ನು ಕಾಡಲಾರರು. ಧನ್ವಂತರಿ ಪ್ರಾರ್ಥನೆ ಮಾಡಿರಿ. ಭೂವರಾಹ ಸ್ವಾಮಿಯನ್ನು ಪೂಜಿಸಿ.
ತುಲಾ: ದೇವರು ಕೊಟ್ಟ ಆಯಸ್ಸು ಮುಗಿಯುವವರೆಗೆ ಚಿಂತೆಗಳಿಗೆ ಪ್ರತಿತಂತ್ರವಾಗಿ ಚಾತುರ್ಯಗಳನ್ನು, ಕೆಲಸ ಸಾಧಿಸಲು ತಂತ್ರಗಳನ್ನು ರೂಪಿಸಿಕೊಡುವವನು ವರಸಿದ್ಧಿ ವಿನಾಯಕನು. ಕರ್ವನುಸಾರ ನಿಮ್ಮ ತಕ್ಕಡಿಗಳನ್ನು ದೇವರೇ ತೂಗಿ ನಿಮಗೆ ನ್ಯಾಯಕೊಡುತ್ತಾನೆ. ದೇವತಾ, ಅನುಗ್ರಹವಿದೆ. ಇನ್ನೂ ಹೆಚ್ಚುಕಾಲ ಜಗನ್ಮಾತೆ ರಾಜರಾಜೇಶ್ವರಿಯನ್ನು ಪೂಜಿಸಿ, ಲಲಿತಾ ತ್ರಿ್ರತಿ ಪಾರಾಯಣ ಮಾಡಿರಿ.
ವೃಶ್ಚಿಕ: ಸಪ್ತಮದಲ್ಲಿ ಗುರುವಿದ್ಧು ನಿಮ್ಮನ್ನು ಕಾಪಾಡುತ್ತಿದ್ದಾನೆ. ಚತುರ್ಥ ಶನಿ ಸ್ವಕ್ಷೇತ್ರದಲ್ಲಿದ್ದು ಏನೂ ತೊಂದರೆ ಮಾಡನು. ಕೆಲಸಗಳು ನಿಧಾನವಾದರೂ ವಿನಯ-ವಿನಮ್ರತೆಯಿಂದ ಆ ಕೆಲಸಕ್ಕೆ ಬೇಕಾದ ವ್ಯಕ್ತಿಯನ್ನು ತಾವು ಸಂರ್ಪಸಿದರೆ ಕೆಲಸವು ಮುಂದೆ ಸಾಗಿ, ನಿಮ್ಮ ಜೇಬು ಕೂಡ ತುಂಬುತ್ತದೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದು ಅತ್ಯಗತ್ಯ.
ಧನಸ್ಸು: ವಿಧೇಯತೆ, ವಿನಯ, ಸತ್ಸಂಕಲ್ಪ, ಧರ್ಮದ ಹಾದಿಯಲ್ಲಿ, ನಾನು ಎಂಬ ಪದವನ್ನು ಬಳಸದೇ ಜೀವನ ನಡೆಸಿದ್ದಲ್ಲಿ ಶ್ರೇಯೋವಂತರಾಗುತ್ತಾರೆ ಎಂದು ಶಾಸ್ತ್ರಗಳೇ ಸಾರಿವೆ. ಅಧಿಪತಿ ಗುರುವಾಗಿರುವುದರಿಂದ ನಿಮ್ಮ ಸದ್ಗುಣಗಳನ್ನು ನೀವೇ ಗುರುತಿಸಿಕೊಂಡು ಅನ್ಯರಿಗೆ ದಾರಿ ತೋರಿಸಿದರೆ ಯಾವ ಕಷ್ಟ್ಟೂ ಉಂಟಾಗುವುದಿಲ್ಲ. ದುಡಿಮೆಯನ್ನು ಅರ್ಥೈಸಿಕೊಂಡು ಮಾಡಿದರೆ ಲಾಭವೂ ಸಿಗುತ್ತದೆ. ರಾಮನಾಮ ಜಪವಿರಲಿ. ಶ್ರೀರಾಮನಿಗೆ ನಿಮ್ಮಿಂದಲೇ ಪೂಜೆ ಸಲ್ಲಲಿ.
ಮಕರ: ಇನ್ನೇನು, ಸೂರ್ಯನು ಜ. 11ರ ಮಧ್ಯಾಹ್ನ ರಾಶಿಗೆ ಪ್ರವೇಶಿಸಿ ಆತ್ಮ ಜ್ಯೋತಿಯನ್ನು ಬೆಳಗಿಸುತ್ತಾನೆ. ಸದ್ಗುಣ, ಸತ್ಯ-ನ್ಯಾಯದ ದಾರಿ ಕಂಡುಕೊಳ್ಳಿ. ಸೂರ್ಯ ಅಷ್ಟೋತ್ತರ ಪಠಣ ಮಾಡಿ, ಕೆಂಪು ಹೂವಿನಿಂದ ಪೂಜಿಸಿ. ಇನ್ನೂ ಬಲಿಷ್ಠವಾದ ಬೆಳಕು ನಿಮ್ಮ ಆತ್ಮದಲ್ಲಿ ಮೂಡಿ, ಯಶಸ್ಸು, ಕೀರ್ತಿ, ಲಾಭ ಉಂಟಾಗುತ್ತದೆ.
ಕುಂಭ: ಅರ್ಧ ಭಾಗದ ಶನಿ ಹಾಗೂ 4ರಲ್ಲಿ ಗುರುವು ಇರುವುದರಿಂದ, ಯಾರ ಸಹಾಯದಿಂದಲೋ ದಡವನ್ನು ಮುಟ್ಟಿ, ಶನಿಯು ಮೀನ ರಾಶಿಯನ್ನು ಸೇರಿದ ಮೇಲೆ ನಿಮ್ಮ ಭಾಗ್ಯವು ನಿಧಾನವಾಗಿ ಉದಯವಾಗಿ ಸ್ಥಿರವಾದ ಸಂತೋಷ ದೊರೆಯುತ್ತದೆ. ಸೂರ್ಯನಮಸ್ಕಾರವನ್ನು ಮಾಡಿ. ಭಾನುವಾರ ಒಪ್ಪತ್ತು ಉಪವಾಸವಿದ್ದು ಗೋಧಿ, ಕೆಂಪು ಬಟ್ಟೆ ದಾನ ಮಾಡಿರಿ.
ಮೀನ: ಶನಿಯು ದ್ವಾದಶ ಬಿಟ್ಟ ಮೇಲೆ ಹಂತಹಂತವಾಗಿ ನೀವು ನಿಮ್ಮ ದೇಹವನ್ನು ಮನಸ್ಸನ್ನು ಸರಿಮಾಡಿಕೊಂಡು, ಮುಂದಕ್ಕೆ ಸಾಗಿದರೆ ಸಮಯ ಅತ್ಯುತ್ತಮವಾಗುತ್ತದೆ. ದಶರಥ ವಿರಚಿತ ಶನಿಸ್ತ್ರೆೊತ್ರವನ್ನು ಪಾರಾಯಣ ಮಾಡಿ. ಶನಿ ಸುಪ್ರೀತನಾದರೆ ಏನು ಬೇಕಾದ್ದನ್ನೂ ಕೊಡಬಹುದು. ಶಿವಧ್ಯಾನವಿರಲಿ. ಭ್ರಮರಾಂಬಾ ಸಹಿತ ಮಲ್ಲಿಕಾರ್ಜುನನ್ನು ಪೂಜಿಸಿ-ದರ್ಶಿಸಿ.