ಸಾಂದರ್ಭಿಕ ಚಿತ್ರ 
ನ್ಯೂಸ್

ಆಸೆ ಈಡೇರದ ಹಿನ್ನೆಲೆ: ಶಿವಲಿಂಗವನ್ನೇ ಕದ್ದೊಯ್ದ ಯುವಕ..

ಪ್ರಯಾಗರಾಜ್: ತನ್ನ ಆಸೆ ಈಡೇರದ ಹಿನ್ನೆಲೆಯಲ್ಲಿ ಯುವಕನೊಬ್ಬ ಶಿವಲಿಂಗವನ್ನೇ ಕದ್ದಿರುವ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್​ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳಿಗ್ಗೆ ಕಸ ಗುಡಿಸುವ ವೇಳೆ ದುರಂತ: ಮಹಿಳೆಯ ಪ್ರಾಣ ತೆಗೆದ ಮಂಗಗಳ ಗುಂಪು..?

ಯುವಕನನ್ನು ಚೋಟು(27) ಎಂದು ಗುರುತಿಸಲಾಗಿದ್ದು, ಆತ ಪ್ರಯಾಗ್‌ರಾಜ್‌ನಿಂದ 75 ಕಿ.ಮೀ. ದೂರದಲ್ಲಿರುವ ಕೌಶಂಬಿ ಜಿಲ್ಲೆಯ ಪ್ರಸಿದ್ಧ ಭೈರೋ ಬಾಬಾ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದ ಆರೋಪ ಹೊತ್ತಿದ್ದಾನೆ. ಶುಕ್ರವಾರ ಬೆಳಗ್ಗೆ ಕೆಲವು ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಶಿವಲಿಂಗ ಕಾಣೆಯಾಗಿರುವುದು ಗಮನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದು, ಈ ಕುರಿತು ಕುಮ್ಹಿಯಾವಾಹ ಗ್ರಾಮದ ಮುಖ್ಯಸ್ಥ ಓಂ ಪ್ರಕಾಶ್ ಪೊಲೀಸ್ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, ಭಾನುವಾರದಂದು ಕುಮ್ಹಿಯಾವಾಹದಿಂದ ಚೋಟುನನ್ನು ಬಂಧಿಸಿ. ಗದ್ದೆಯಲ್ಲಿ ಎಲೆಗಳು ಮತ್ತು ಬಿದಿರುಗಳ ರಾಶಿಯ ಅಡಿಯಲ್ಲಿ ಮರೆಮಾಡಲಾಗಿದ್ದ ಕಳುವಾದ ಶಿವಲಿಂಗವನ್ನು ವಶಪಡಿಸಿಕೊಂಡಿದ್ದಾರೆ.

ಮಹೇವ ಘಾಟ್ ಪೊಲೀಸ್ ಠಾಣಾಧಿಕಾರಿ ರಜನಿಕಾಂತ್ ಪ್ರಕಾರ, ವ್ಯಕ್ತಿಯನ್ನು ಐಪಿಸಿಯ ಸೆಕ್ಷನ್ 379ರ ಅಡಿಯಲ್ಲಿ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಶ್ರಾವಣ ಮಾಸದಲ್ಲಿ ದೇವಸ್ಥಾನದಲ್ಲಿ ನಿತ್ಯ ವಿಶೇಷ ಪೂಜೆ ಸಲ್ಲಿಸಿ, ತನ್ನ ಮದುವೆ ನೆರವೇರಲಿ ಎಂದ ದೇವರಿಗೆ ಕೇಳಿಕೊಂಡಿದ್ದ. ಆದರೆ ಆ ಆಸೆ ಈಡೇರದ ಕಾರಣ ಆತ ಈ ಹೆಜ್ಜೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ.(ಏಜೆನ್ಸೀಸ್)