ನ್ಯೂಸ್

'ಮನ್ ಕಿ ಬಾತ್' ಕೇಳಲು ಮದುವೆ ಕಾರ್ಯಕ್ರಮ ಮುಂದೂಡಿದ ವರ!

ರಾಜಸ್ಥಾನ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ನ 100ನೇ ಸಂಚಿಕೆ ಭಾನುವಾರ ಪ್ರಸಾರವಾಗಿತ್ತು. ಹಿಂದಿನ ಎಲ್ಲಾ ಸಂಚಿಕೆಗಳನ್ನು ಕೇಳಿದ್ದ ರಾಜಸ್ಥಾನದ ವ್ಯಕ್ತಿಗೆ, 100 ನೇ ಸಂಚಿಕೆಯುನ್ನು ಕೇಳಲು ತನ್ನ ಮದುವೆಯ ಶಾಸ್ತ್ರಗಳನ್ನೇ ಕೊಂಚ ಸಮಯ ಮುಂದೂಡಿದ್ದಾರೆ.

ಪೋರ್ವಾಲ್ ಕುಟುಂಬದ ವಿವಾಹ ಕಾರ್ಯಕ್ರಮವು ಭಿಲ್ವಾರದ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿತ್ತು. ಮದುವೆಗೂ ಮುನ್ನ ಕಾರ್ಯಕ್ರಮದ ಮಧ್ಯೆ ವರ, ವಿಧಿ ವಿಧಾನಗಳಿಗೂ ಮುನ್ನ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಕೇಳಬೇಕು ಎಂದು ಹೇಳುವ ಮೂಲಕವಾಗಿ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದ.

ವರನ ಈ ಬೇಡಿಕೆಯಿಂದ ತಕ್ಷಣವೇ ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ನಂತರ ಮದುವೆಗೆ ಬಂದಿದ್ದ ಎಲ್ಲಾ ಜನರು ಮತ್ತು ವಧು-ವರರು ಪ್ರಧಾನಿಯವರ ಮನ್ ಕಿ ಬಾತ್ ಆಲಿಸಿದರು. ನಂತರ, ಮದುವೆಯ ಉಳಿದ ಆಚರಣೆಗಳನ್ನು ನಡೆಸಲಾಯಿತು.

ಇಲ್ಲಿಯವರೆಗೆ ಒಂದೇ ಒಂದು ಸಂಚಿಕೆಯನ್ನು ಮಿಸ್ ಮಾಡಿಲ್ಲ. ಇಂದು 100ನೇ ಸಂಚಿಕೆಯಾಗಿದ್ದು, ಇಂದು ವಿವಾಹ ವಿಧಿವಿಧಾನಗಳು ನೆರವೇರಿದವು. ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಅದಕ್ಕಾಗಿಯೇ ಮತ್ತೆ ಎಲ್‌ಇಡಿ ವ್ಯವಸ್ಥೆ ಮಾಡಿ ನಂತರ ಎಲ್ಲರೂ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿದರು.

ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಮುಗಿದ ನಂತರ ಉಳಿದ ವಿಧಿವಿಧಾನಗಳೂ ಮುಗಿದವು. ಮೊದಲ ಸಂಚಿಕೆಯಿಂದ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೇಳುತ್ತಿದ್ದೇನೆ ಎಂದು ರಿಷಬ್ ಹೇಳಿದ್ದಾರೆ.