ನ್ಯೂಸ್

VIDEO | ತಾಂಬೂಲದ ಬ್ಯಾಗ್‌ನಲ್ಲಿ ಮದ್ಯದ ಬಾಟಲಿ ಇಟ್ಟ ದಂಪತಿ! ಮುಂದೇನಾಯ್ತು?

ಪುದುಚೇರಿ: ನವ ವಧು- ವರರು ವಿಭಿನ್ನವಾಗಿ ಮದುವೆಯಾಗಬೇಕುಂದು ಯೋಚಿಸಿರುತ್ತಾರೆ. ಹೀಗೆ ಇಲ್ಲೊಂದು ಜೋಡಿ ಹೊಸ ಪ್ರಯೋಗವನ್ನು ಮಾಡಿ ಸುದ್ದಿಯಾಗಿದೆ.

ತಾಂಬೂಲ ಮದುವೆಗಳಲ್ಲಿ ಅತಿಥಿಗಳಿಗೆ ನೀಡುವ ಸಾಂಪ್ರದಾಯಿಕ ರಿಟರ್ನ್ ಗಿಫ್ಟ್. ಹಣ್ಣುಗಳು, ತೆಂಗಿನಕಾಯಿ, ಪಾತ್ರೆಗಳು ಅಥವಾ ಸಿಹಿತಿಂಡಿಗಳನ್ನು ಒಂದು ಚೀಲದಲ್ಲಿ ಹಾಕಿ ನೀಡಲಾಗುತ್ತದೆ. ಆದರೆ ಇಲ್ಲೊಂದು ಜೋಡಿ ಮದುವೆಗೆ ಬಂದ ಅತಿಥಿಗಳಿಗೆ ಮದ್ಯದ ಬಾಟಲಿಯಲ್ಲಿ ನೀಡುವುದಾಗಿ ವಿಭಿನ್ನವಾಗಿ ಯೋಚನೆ ಮಾಡಿದೆ.

ಪುದುಚೇರಿಯಲ್ಲಿ ಇತ್ತೀಚೆಗಷ್ಟೆ, ನಿರ್ಮಲ್ ಮತ್ತು ಆರತಿ ಅವರ ವಿವಾಹದ ಆರತಕ್ಷತೆಯಲ್ಲಿ, ಅತಿಥಿಗಳಿಗಾಗಿ ಮೀಸಲಾದ ಪ್ರತಿ ತಾಂಬೂಲ ಬ್ಯಾಗ್‌ನಲ್ಲಿ ಸಾಮಾನ್ಯ ವಸ್ತುಗಳ ಜೊತೆಗೆ 180 ಮಿಲಿ ಮದ್ಯದ ಬಾಟಲಿ ಇತ್ತು.

ಈ ತಾಂಬೂಲವನ್ನು ಹಲವರು ಸಂತೋಷದ ಮುಖದಿಂದ ಸ್ವೀಕರಿಸಿದರೆ, ಕೆಲವರು ವಿಚಿತ್ರವಾದ ಪದ್ಧತಿಯನ್ನು ವಿರೋಧಿಸಿದರು. ಕೆಲವು ಸಂಬಂಧಿಕರು ಕುಟುಂಬದೊಂದಿಗೆ ಜಗಳವಾಡಿದರು, ಇಂತಹ ಕ್ರಮಗಳಿಂದ ದೂರವಿರಲು ಸಲಹೆ ನೀಡಿದ್ದಾರೆ.

ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಟ್ವಿಟ್ಟರ್ ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. ಇದು ಸಂಸ್ಕೃತಿಯನ್ನು ಅವಮಾನಿಸುತ್ತದೆ. ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ ತಮಿಳಿಸೈ ಸೌಂದರರಾಜನ್ ಅವರನ್ನು ಟ್ಯಾಗ್ ಮಾಡಿದ್ದಾರೆ.