ಸಾಂದರ್ಭಿಕ ಚಿತ್ರ 
ನ್ಯೂಸ್

ದಯವಿಟ್ಟು ಮದುವೆಗೆ ಬರಬೇಡಿ…ಲಗ್ನ ಪತ್ರಿಕೆ ನೋಡಿ ಅತಿಥಿಗಳು ಹೇಳಿದ್ದೇನು..?

ನವದೆಹಲಿ: ಮದುವೆ ಎಂದರೆ ಶುಭಸಮಾರಂಭ. ಮನೆತುಂಬಾ ನೆಂಟ್ರು ಇದ್ದರೆ ಹಬ್ಬದ ಸಡಗರ ಗೆಚ್ಚಾಗುತ್ತದೆ. ಹೀಗಿರುವಾಗ ಇಲ್ಲೊಂದು ಮದುವೆಗೆ ಅತಿಥಿಗಳಿಗೆ ಬರುವುದೇ ಬೇಡಾ ಎಂದು ಲಗ್ನ ಪತ್ರಿಕೆಯಲ್ಲಿ ಹಾಕಿರುವುದು ಸಖತ್​ ವೈರಲ್​​​ ಆಗಿದೆ.

ಮದುವೆಯ ಕಾರ್ಡ್‌ಗಳನ್ನು ಮುದ್ರಿಸುವಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ. ನೋಡಲು ಆಕರ್ಷಕವಾಗಿದ್ದರೆ ಸಾಲದು ತಪ್ಪಾಗಿ ಮುದ್ರಿಸಬಾರದು. ಇದೀಗ ಇಂಥದ್ದೇ ತಪ್ಪಾದ ಮದುವೆ ಆಮಂತ್ರಣ ಅತಿಥಿಗಳನ್ನು ಗೊಂದಲಗೊಳಿಸಿದೆ.

" ನಾನು ಈ ಆಹ್ವಾನವನ್ನು ಪ್ರೀತಿಯಿಂದ ಕಳುಹಿಸುತ್ತಿದ್ದೇನೆ, ದಯವಿಟ್ಟು ಮದುವೆಗೆ ಬರಲು ಮರೆತುಬಿಡಿ ಎಂದು ಬರೆಯಲಾಗಿತ್ತು" ಇದನ್ನು ಓದಿದ ಅತಿಥಿಗಳು ಮದುವೆಗೆ ಬರಬೇಕೋ ಬೇಡವೋ ಎಂದು ಗೊಂದಲಕ್ಕೊಳಗಾಗಿದ್ದಾರೆ.

ಆಮಂತ್ರಣ ಮುದ್ರಣದ ದೋಷದಿಂದಾಗಿ ವಾಕ್ಯದ ಅರ್ಥವೇ ಬದಲಾಯಿತು. ಮದುವೆಗೆ ಬರಲು ಮರೆಯದಿರಿ ಅನ್ನೋ ಬದಲು ಮರೆತುಬಿಡಿ ಅಂತಾ ಬರೆದು ಪೇಚಿಗೆ ಸಿಲುಕಿಕೊಂಡಿದ್ದಾರೆ. ಈ ಆಮಂತ್ರಣ ಪತ್ರಿಕೆ ಫೇಸ್ಬುಕ್ ನಲ್ಲಿ ಭಾರಿ ವೈರಲ್ ಆಗಿದೆ.