ನ್ಯೂಸ್

‘ರಾಹುಲ್ ಗಾಂಧಿಯವರ ಮುಖಕ್ಕೆ ಮಸಿ ಬಳಿಯುತ್ತೇವೆ’;ಶಿವಸೇನಾ ನಾಯಕ ಬೆದರಿಕೆ|Bala Darade’s

ನಾಸಿಕ್: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಶಿವಸೇನಾ ಮುಖಂಡ ಬಾಳಾ ದಾರಾಡೆ ಇಂದು (28) ಎಚ್ಚರಿಕೆ ನೀಡಿದ್ದಾರೆ.

ಶಿವಸೇನಾ ನಾಸಿಕ್ ಘಟಕದ ಉಪಾಧ್ಯಕ್ಷರೂ ಆಗಿರುವ ಬಾಳಾ ದಾರಾಡೆ ನೀಡಿರುವ ಈ ಹೇಳಿಕೆಯು ಎಂವಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ. ಆದರೆ ತಮ್ಮ ಹೇಳಿಕೆಯಿಂದ ಎಂವಿಎ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ದಾರಾಡೆ ಹೇಳಿದ್ದಾರೆ.

ಸಾವರ್ಕರ್ ಜಿ ಅವರ ಜನ್ಮಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಸಾವರ್ಕರ್ ಅವರ ಅವಮಾನವನ್ನು ನಾವು ಸಹಿಸುವುದಿಲ್ಲ, ರಾಹುಲ್ ಗಾಂಧಿ ಸಾವರ್ಕರ್ ಬಗ್ಗೆ ಹೇಳಿದ್ದು ಅವಮಾನಕರವಾಗಿತ್ತು. ಅವರು ನಾಶಿಕ್​ಗೆ ಬಂದರೆ, ನಾವು ಅವರ ಮುಖಕ್ಕೆ ಮಸಿ ಬಳಿಯುತ್ತೇವೆ, ಹಾಗೆ ಮಾಡಲು ಸಾಧ್ಯವಾಗದಿದ್ದರೆ, ನಾವು ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು ಎಸೆಯುತ್ತೇವೆ ಎಂದು ಶಿವಸೇನೆಯ ನಾಸಿಕ್ ನಗರದ ಉಪ ಮುಖ್ಯಸ್ಥ ಬಾಳಾ ದಾರಾಡೆ ಹೇಳಿದ್ದಾರೆ.

(ಏಜೆನ್ಸೀಸ್)

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರು ದಾರಾಡೆ ಅವರ ಬೆದರಿಕೆಯನ್ನು ಹೇಡಿತನ ಎಂದು ಕರೆದಿದ್ದಾರೆ. ಮತ್ತೊಂದೆಡೆ ಲೋಕಸಭೆಯಲ್ಲಿ ಸಾರ್ವಕರ್ ವಿರುದ್ಧ ಮಾಡಿರುವ ಟೀಕೆಗಳು ತಮ್ಮ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ನಾಸಿಕ್ ನಿವಾಸಿ ದೇವೇಂದ್ರ ಭೂತಾಡ ಅವರು, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.